ಆಲ್ಟೊ 24,000 ಬುಕ್ಕಿಂಗ್ಸ್; 10,000 ಕಾರು ಡೆಲಿವರಿ
ದೇಶದ ಆಟೋಮೊಬೈಲ್ ಜಗತ್ತಿನಲ್ಲಿ ನೂತನ ಸೆನ್ಸೆಷನಲ್ ಸೃಷ್ಟಿ ಮಾಡಿರುವ ಮಾರುತಿ ಸುಜುಕಿಯ ನೂತನ ಆಲ್ಟೊ 800 ಬಿಡುಗಡೆಯಾಗಿ ಕೇವಲ ಒಂದು ತಿಂಗಳೊಳಗೆ 24,000 ಬುಕ್ಕಿಂಗ್ಸ್‌ಗಳನ್ನು ಗಿಟ್ಟಿಸಿಕೊಂಡಿದೆ. ಇದರಂತೆ 10,000 ಯುನಿಟ್‌ಗಳನ್ನು ಈಗಾಗಲೇ ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ದೇಶದ ಎಲ್ಲ ಮಾರುತಿ ಘಟಕದಲ್ಲೂ ನೂತನ ಆಲ್ಟೊ 800 ಸಣ್ಣ ಕಾರುಗಳಿಗೆ ಭಾರಿ ಬೇಡಿಕೆ ಕಂಡುಬಂದಿವೆ. ಪೆಟ್ರೋಲ್ ಹಾಗೂ ಪೆಟ್ರೋಲ್-ಸಿಎನ್‌ಜಿ ವೆರಿಯಂಟ್‌ಗಳಲ್ಲಿ ನೂತನ ಆಲ್ಟೊ ಗ್ರಾಹಕರ ಕೈ ತಲುಪುತ್ತಿದೆ. ಈ ಮೂಲಕ ಈ ಹಿಂದಿನ ಮಾದರಿಯನ್ನು ಹಿಮ್ಮೆಟ್ಟಿಸುವತ್ತ ದಾಪುಗಾಲನ್ನಿಟ್ಟಿದೆ.
ಅದೇ ಹೊತ್ತಿಗೆ ವರ್ಷಾಂತ್ಯದಲ್ಲಿ ಮಾರುತಿ ಆಲ್ಟೊ 800 ಕಾರನ್ನು ಮಾರುತಿ ರಫ್ತು ಮಾಡಲಿದೆ. ಪರಿಷ್ಕೃತ ಮಾರುತಿ ಆಲ್ಟೊ 796 ಸಿಸಿ, 3 ಸಿಲಿಂಡರ್ ಎಫ್8ಡಿ ಪೆಟ್ರೋಲ್ ಎಂಜಿನ್ ಪವರ್‌ನೊಂದಿಗೆ ಆಗಮಿಸಿದೆ. ನೂತನ ಆಲ್ಟೊ 800 ಪ್ರತಿ ಲೀಟರ್‌ಗೆ 22.74 ಕೀ. ಮೀ. ಇಂಧನ ಕ್ಷಮತೆ ಹೊಂದಿದ್ದು, ಪೆಟ್ರೋಲ್ ಎಂಜಿನ್ ಎಸ್‌ಟಿಡಿ ವೆರಿಯಂಟ್ 2.44 ಲಕ್ಷ ರೂಪಾಯಿಗಳಿಗೆ ದೊರಕಲಿದೆ.ಗ್ರಾಹಕರಿಂದ ದೊರಕಿರುವ ಭಾರಿ ಪ್ರತಿಕ್ರಿಯೆಗೆ ಕಂಪನಿ ಹರ್ಷ ವ್ಯಕ್ತಪಡಿಸಿದ್ದು, ದಶಕದಿಂದಲೂ ದೇಶದ ಅತಿ ದೊಡ್ಡ ಕಾರು ತಯಾರಕ ಎನಿಸಿಕೊಂಡಿರುವ ಮಾರುತಿ ಸುಜುಕಿ, ಗ್ರಾಹಕರ ಬೇಡಿಕೆಗಳನ್ನು ಪೂರೈಸಲಿದೆ ಎಂದು ತಿಳಿಸಿದೆ.
ಆಲ್ಟೊ 800 ಲಾಂಚ್ ಆಗುವ ಮುನ್ನವೇ 10 ಸಾವಿರ ಬುಕ್ಕಿಂಗ್ ಗಿಟ್ಟಿಸಿಕೊಂಡಿತ್ತು. ಅಲ್ಲದೆ ಕೇರಳದ ಡೀಲರ್‌ಶಿಪ್‌ವೊಂದರಲ್ಲಿ ದಿನವೊಂದರಲ್ಲೇ 200 ಕಾರುಗಳು ಸೇಲ್ ಮಾಡುವ ಮೂಲಕ ದಾಖಲೆ ಸ್ಥಾಪಿಸಿತ್ತು.


Click it and Unblock the Notifications









