ಹೆಚ್ಚು ಸೇಫ್ಟಿ ಫೀಚರ್ಸ್‍ನೊಂದಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಆಲ್ಟೋ 800 ಕಾರಿನ ಮೊದಲ ಟಿವಿಸಿ

ಕೆಲವು ದಿನಗಳ ಹಿಂದಷ್ಟೇ ಬಿಎಸ್-6 ಎಂಜಿನ್ ಪ್ರೇರಿತ ಬಲೆನೊ ಸ್ಮಾರ್ಟ್ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಿದ್ದ ಮಾರುತಿ ಸುಜುಕಿ ಸಂಸ್ಥೆಯು ಇದೀಗ ಬಹುನೀರಿಕ್ಷಿತ ಆಲ್ಟೋ 800 ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಅತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ತಾಂತ್ರಿಕ ಸೌಲಭ್ಯಗಳನ್ನ ಹೊತ್ತು ಮಾರುಕಟ್ಟೆ ಪ್ರವೇಶಿಸಿದೆ.

ಹೆಚ್ಚು ಸೇಫ್ಟಿ ಫೀಚರ್ಸ್‍ನೊಂದಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಆಲ್ಟೋ 800 ಕಾರಿನ ಮೊದಲ ಟಿವಿಸಿ

ಹೆಚ್ಚು ಸೇಫ್ಟಿ ಫೀಚರ್ಸ್ ಪಡೆದು ಬಿಡುಗಡೆಗೊಂಡ ಮಾರುತಿ ಸುಜುಕಿ ಆಲ್ಟೋ 800 ಕಾರಿನ ವಿತರಣೆ ಕೂಡಾ ಪ್ರಾರಂಭಿಸಲಾಗಿದೆ. ವಿಶೇಷ ಏನಪ್ಪ ಅಂದ್ರೆ ಮಾರುತಿ ಸುಜುಕಿ ಸಂಸ್ಥೆಯಲ್ಲಿ ಬಿಎಸ್-6 ಎಂಜಿನ್ ಪಡೆದದ್ದು ಬಲ್ನೊ ಕಾರಾದರೂ, ಒಮ್ದು ದಿನದ ನಂತರ ಪಡೆದ ಆಲ್ಟೋ 800 ಕಾರಿನ ಡೆಲಿವರಿ ಶುರುವಾಗಿದೆ. ಹಾಗೆ ಇದೇ ವಿಶೇಷತೆಯಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಈ ಕಾರಿನ ಜಾಹಿತಾರನ್ನು ಕೂಡಾ ಬಿಡುಗಡೆ ಮಾಡಲಾಗಿದೆ.

ಮಾರುತಿ ಸುಜುಕಿ ಸಂಸ್ಥೆಯು ಬಿಡುಗಡೆ ಮಾಡಲದ ಹೊಸ ಟಿವಿಸಿನಲ್ಲಿ ಕಾರಿನ ಬಾಹ್ಯವಾಗಿ ಯಾವುದೇ ಬದಲವಾಣೆಗಳನ್ನು ಮಾಡಲಿಲ್ಲವಾದರೂ, ಒಳಭಾಗದಲ್ಲಿ, ಏರ್‍‍ಬ್ಯಾಗ್ ಆರಾಮದಾಯಕ ಸೀಟ್‍‍ಗಳು, ಹೊಸ ಡ್ಯಾಶ್‍‍ಬೋರ್ಡ್ ಮತ್ತು ಇನ್ನಿತರೆ ಬದಲಾವಣೆಗಳನ್ನು ತೋರಿಸಿದ್ದಾರೆ.

ಹೆಚ್ಚು ಸೇಫ್ಟಿ ಫೀಚರ್ಸ್‍ನೊಂದಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಆಲ್ಟೋ 800 ಕಾರಿನ ಮೊದಲ ಟಿವಿಸಿ

ಮಾರುತಿ ಸುಜುಕಿ ಸಂಸ್ಥೆಯು ಮೊನ್ನೆಯಷ್ಟೆ ತಮ್ಮ ಜನಪ್ರಿಯ ಆಲ್ಟೋ ಕಾರಿನ ಫೇಸ್‍ಲಿಫ್ಟ್ ಮಾದರಿಯನ್ನು ಹೊಸ ಬಿಎಸ್6 ಎಂಜಿನ್ ಅನ್ನು ಅಳವಡಿಸಿ ಬಿಡುಗಡೆ ಮಾಡಲಾಗಿದ್ದು, ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 2.9 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಈ ಲೇಖನದಲ್ಲಿ ಮಾರುತಿ ಸುಜುಕಿ ಆಲ್ಟೊ ಕಾರಿನ ವೇರಿಯೆಂಟ್ ಮತ್ತು ಫೀಚರ್‍‍ಗಳ ಬಗ್ಗೆ ತಿಳಿಯಿರಿ.

ಹೆಚ್ಚು ಸೇಫ್ಟಿ ಫೀಚರ್ಸ್‍ನೊಂದಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಆಲ್ಟೋ 800 ಕಾರಿನ ಮೊದಲ ಟಿವಿಸಿ

ಕಾರಿನ ಹೊರ ವಿನ್ಯಾಸ

ಮಾರುತಿ ಸುಜುಕಿ ಆಲ್ಟೋ ಕಾರು ಅಪ್‍ಟೌನ್ ರೆಡ್, ಸುಪೀರಿಯರ್ ವೈಟ್, ಸಿಲ್ಕಿ ಸಿಲ್ವರ್, ಗ್ರಾನೈಟ್ ಗ್ರೇ, ಮಾಜಿಟೊ ಗ್ರೀನ್ ಮತ್ತು ಸೆರುಲಿಯನ್ ಬ್ಲೂ ಎಂಬ ಆರು ಬಣ್ಣಗಳ ಆಯ್ಕೆಯಲ್ಲಿ ಖರೀದಿ ಮಾಡಬಹುದಾಗಿದ್ದು, ಈ ಬಾರಿ ಹೊಸದಾಗಿ ಫ್ರಂಟ್ ಗ್ರಿಲ್, ಟ್ವೀಕ್ಡ್ ಬಂಪರ್ಸ್ ಮತ್ತು ಫೆಂಡರ್ ಹಾಗು 12 ಇಂಚಿನ ಅಲಾಯ್ ವ್ಹೀಲ್‍ಗಳನ್ನು ಪಡೆದುಕೊಂಡಿದೆ.

ಹೆಚ್ಚು ಸೇಫ್ಟಿ ಫೀಚರ್ಸ್‍ನೊಂದಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಆಲ್ಟೋ 800 ಕಾರಿನ ಮೊದಲ ಟಿವಿಸಿ

ಇನ್ನು ಕಾರಿನ ಒಳಭಾಗದಲ್ಲಿ ಡ್ಯುಯಲ್ ಟೋನ್ ಬಣ್ಣವನ್ನು ಪಡೆದುಕೊಂಡಿದ್ದು, ಎಸಿ ವೆಮ್ಟ್ಸ್, 2 DIN ಆಡಿಯೋ ಸಿಸ್ಟಂನೊಂದಿಗೆ ಬ್ಲೂಟೂಥ್, ಯುಎಸ್‍ಬಿ ಮತ್ತು ಆಕ್ಸ್-ಇನ್ ಕನೆಕ್ಟಿವಿಟಿ ವೈಶಿಷ್ಟ್ಯತೆಯನ್ನು ಅಳವಡಿಸಲಾಗಿದೆ. ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ ಡ್ರೈವರ್ ಸೈಡ್ ಏರ್‍‍ಬ್ಯಾಗ್, ಎಬಿಎಸ್, ಇಬಿಡಿ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಸ್, ಸೀಟ್ ಬೆಲ್ಟ್ ಮತ್ತು ಸ್ಪೀಡ್ ಅಲರ್ಟ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಹೆಚ್ಚು ಸೇಫ್ಟಿ ಫೀಚರ್ಸ್‍ನೊಂದಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಆಲ್ಟೋ 800 ಕಾರಿನ ಮೊದಲ ಟಿವಿಸಿ

ಕಾರಿನ ಉದ್ದಳತೆ

ಹೊಸ ಮಾರುತಿ ಸುಜುಕಿ ಆಲ್ಟೋ ಕಾರು 3445ಎಂಎಂ ಉದ್ದ, 1515 ಅಗಲ, 1475ಎಂಎಂ ಎತ್ತರವನ್ನು ಪಡೆದುಕೊಂಡಿದ್ದು, ಇನ್ನು 2360ಎಂಎಂ ವ್ಹೀಲ್‍ಬೇಸ್ ಅನ್ನು ಹೊಂದಿದೆ. ಹಾಗೆಯೆ 35 ಲೀಟರ್‍‍ನ ಫ್ಯುಯಲ್ ಟ್ಯಾಂಕ್ ಮತ್ತು ಮುಂಭಾಗದಲ್ಲಿ ಡಿಸ್ಕ್ ಬ್ರೇಕ್, ಹಿಂಭಾಗದಲ್ಲಿ ಡ್ರಂ ಬ್ರೇಕ್ ಅನ್ನು ಪಡೆದುಕೊಂಡಿದೆ.

ಹೆಚ್ಚು ಸೇಫ್ಟಿ ಫೀಚರ್ಸ್‍ನೊಂದಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಆಲ್ಟೋ 800 ಕಾರಿನ ಮೊದಲ ಟಿವಿಸಿ

ಎಂಜಿನ್ ಸಾಮರ್ಥ್ಯ

ಬಿಎಸ್-6 ಎಂಜಿನ್ ಪ್ರೇರಿತ ಮಾರುತಿ ಸುಜುಕಿ ಆಲ್ಟೋ ಕಾರು 796ಸಿಸಿ, 3 ಸಿಲೆಂಡರ್ ಎಂಜಿನ್ ಸಹಾಯದಿಂದ 47 ಬಿಹೆಚ್‍ಪಿ ಮತ್ತು 69 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೆಚ್ಚು ಸೇಫ್ಟಿ ಫೀಚರ್ಸ್‍ನೊಂದಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಆಲ್ಟೋ 800 ಕಾರಿನ ಮೊದಲ ಟಿವಿಸಿ

ಮೈಲೇಜ್

ಎಆರ್‍ಎಐ ಮಾಹಿತಿಗಳ ಪ್ರಕಾರ ಈ ಕಾರು ಪ್ರತೀ ಲೀಟರ್‍‍ಗೆ ಸುಮಾರು 24.07 ಮೈಲೇಜ್ ನೀಡಬಲ್ಲದು. ಅಂದರೆ ಹಿಂದಿನ ಮಾದರಿಗಿಂತಲೂ ಹೆಚ್ಚಿನ ಮೈಲೇಜ್ ಅನ್ನು ಈ ಕಾರುಗಳು ನೀಡಲಿವೆ.

ಹೆಚ್ಚು ಸೇಫ್ಟಿ ಫೀಚರ್ಸ್‍ನೊಂದಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಆಲ್ಟೋ 800 ಕಾರಿನ ಮೊದಲ ಟಿವಿಸಿ

ಹೊಸ ಮಾರುತಿ ಸುಜುಕಿ ಆಲ್ಟೋ ವೇರಿಯೆಂಟ್‍ಗಳು

ಮಾರುತಿ ಸುಜುಕಿ ಆಲ್ಕ್ಟೋ STD

ಈ ವೇರಿಯೆಂಟ್ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದ್ದು, ಈ ಕಾರಿನಲ್ಲಿ ಡ್ಯುಯಲ್ ಟೋನ್ ಇಂಟೀರಿಯರ್‍‍ನಿಂದ ಸಜ್ಜುಗೊಂಡ ಸೀಟ್‍‍ಗಳನ್ನು ಪಡೆದುಕೊಂಡಿದ್ದು, ಕಾರಿನ ವ್ಹೀಲ್‍ಗಳ ಮೇಲೆ ಸೆಂಟರ್ ಕ್ಯಾಪ್ಸ್ ಹಾಗು ಒಳಭಾಗದಲ್ಲಿ ಬಾಟಲ್ ಹೋಲ್ಡರ್ಸ್ ಹಾಗು ಡ್ರವರ್ ಸೈಡ್ ಸನ್ ವೈಸರ್ ಎಂಬ ವೈಶಿಷ್ಟ್ಯತೆಯನ್ನು ಪದೆದುಕೊಂಡಿದೆ.

ಹೆಚ್ಚು ಸೇಫ್ಟಿ ಫೀಚರ್ಸ್‍ನೊಂದಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಆಲ್ಟೋ 800 ಕಾರಿನ ಮೊದಲ ಟಿವಿಸಿ

ಮಾರುತಿ ಸುಜುಕಿ ಆಲ್ಟೋ LXI

ಈ ವೇರಿಯೆಂಟ್ STD ವೇರಿಯೆಂಟ್‍‍‍ಗಿಂತಲೂ ರೂ. 50000 ಅಧಿಕವಾಗಿದ್ದು, ಈ ಕಾರಿನಲ್ಲಿ ದೇಹ ಬಣ್ಣದ ಬಂಪರ್ಸ್, ಅನ್ನು ನೀಡಲಾಗಿದೆ. ಮತ್ತು ಕಾರಿನ ಒಳಭಾಗದಲ್ಲಿ ಫ್ಯಾಬಿರ್ಕ್ ಹಾಗು ವಿನೆಯ್ಲ್‍‍ನಿಂಡ ಸಜ್ಜುಗೊಂಡ ಸೀಟ್‍ಗಳು, ಕ್ಯಾಬಿನ್‍ ಮೇಲೆಸ್ ಸಿಲ್ವರ್ ವೆಂಟ್ಸ್, ಡೋರ್ ಹ್ಯಾಂಡಲ್ ಮತ್ತು ಸ್ಟೀರಿಂಗ್ ವ್ಹೀಲ್‍ನ ಮೇಲೆ ನೀಡಲಾಗಿದೆ. ಇವುಗಳ ಜೊತೆಗೆ ಎಸಿ, ಪವರ್ ಸ್ಟೀರಿಂಗ್, ಫ್ರಂಟ್ ಪವರ್ ವಿಂಡೋಸ್, ಫ್ರಂಟ್ ಪ್ಯಾಸೆಂಜರ್ ಸನ್ ವೈಸರ್, ಇಂಟಿಗ್ರೇಟೆಡ್ ರಿಯರ್ ಸೀಟ್ ಹೆಡ್‍ರೆಸ್ಟ್ ರಿಮೋಟ್ ಬುಟ್ ಲಿಡ್ ಓಪೆನರ್ ಮತ್ತು ಫ್ರಂಟ್ ವೈಪರ್ ಎಂಬ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಹೆಚ್ಚು ಸೇಫ್ಟಿ ಫೀಚರ್ಸ್‍ನೊಂದಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಆಲ್ಟೋ 800 ಕಾರಿನ ಮೊದಲ ಟಿವಿಸಿ

ಮಾರುತಿ ಸುಜುಕಿ ಆಲ್ಟೋ VXi

ಇದು ಕಾರಿನ ಟಾಪ್ ವೇರಿಯಂಟ್ ಆಗಿದ್ದು, LXI ವೇರಿಯೆಂಟ್‍ಗಿಂತಲೂ ಬೆಲೆಯಲ್ಲಿ ರೂ. 22 ಸಾವಿರ ಅಧಿಕವಾಗಿದೆ. ಮೇಲೆ ಹೇಳಿರುವ ಫೀಚರ್‍‍ಗಳ ಜೊತೆಗೆ ಈ ವೇರಿಯೆಂಟ್‍ನಲ್ಲಿ ಹೊರಗಡೆ ಬಾಡಿ ಸೈಡ್ ಮೌಲ್ಡಿಂಗ್ ಅನ್ನು ಪಡೆದುಕೊಂಡಿದ್ದು, ಇನ್ನು ಒಳಭಾಗದಲ್ಲಿ ಸೆಂಟರ್ ಕಂಸೋಲ್‍ನ ಮೇಲೆ ಸಿಲ್ವರ್ ಆಕ್ಸೆಂಟ್ಸ್ ಅನ್ನು ನೀಡಲಾಗಿದ್ದು, ಸೆಂಟ್ರಲ್ ಲಾಕಿಂಗ್ ಸಿಸ್ಟಂ, ಕೀಲೆಸ್ ಎಂಟ್ರಿ, ರಿಯರ್ ಪಾರ್ಸೆಲ್ ಟ್ರೈಲ್, ಆಕ್ಸೆಸರಿ ಸಾಕೆಟ್, ದೈಹಿಕವಾಗಿ ಅಡ್ಜಸ್ಟ್ ಮಾಡಬಹುದಾದ ಒಆರ್‍‍ವಿಎಂ ಅನ್ನು ನೀಡಲಾಗಿದ್ದು, ಇವುಗಳ ಜೊತೆಗೆ ಯುಎಸ್‍ಬಿ ಆಕ್ಸ್-ಇನ್, ಬೂಟೂಥ್, 2 ಸ್ಪೀಕರ್‍‍‍ಗಳು ಮತ್ತು ಫ್ರಂಟ್ ಪ್ಯಾಸೆಂಜರ್ ಏರ್‍‍ಬ್ಯಾಗ್‍ಗಳನ್ನು ನೀಡಲಾಗಿದೆ.

Most Read Articles

Kannada
English summary
Maruti Suzuki Launched Tvc Of New Bs-6 Alto 800 Facelift. Read In Kannada
Story first published: Friday, May 3, 2019, 11:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X