ಮಾರುತಿ ಹೊಸ ಆಲ್ಟೊ 800 ಸ್ಪಷ್ಟ ಚಿತ್ರಣ ಬೇಕೆ?
ಹೊಸ ಮಾರುತಿ ಆಲ್ಟೊ 800 ಕಾರಿನ ಕುರಿತು ಹೆಚ್ಚಿನ ಮಾಹಿತಿ ಇದೀಗ ಲಭ್ಯವಾಗಿದೆ. ಆಲ್ಟೊ 800 ಆಕ್ಟೋಬರ್ 16ರಂದು ದೇಶದ ರಸ್ತೆಗಿಳಿಯಲಿದೆ. ಇದರ ಮೈಲೇಜ್ 22.74 ಕಿ.ಮೀ. ಇರಲಿದೆ. ಇದು ಸಿಎನ್ಜಿ ಆಯ್ಕೆಯಲ್ಲೂ ಲಭ್ಯವಿರಲಿದೆ. ಈ ಕಾರಿನ ಅಭಿವೃದ್ಧಿಗೆ ಕಂಪನಿಯು 470 ಕೋಟಿ ರು. ವಿನಿಯೋಗಿಸಿದೆ. ದರ ಮಾಹಿತಿ ಸದ್ಯಕ್ಕೆ ಸ್ಪಷ್ಟವಾಗಿಲ್ಲ.
ಕೆಲವು ದಿನಗಳ ಹಿಂದೆ ನಾವು ಮಾರುತಿ ಸುಜುಕಿ ಆಲ್ಟೊ 800 ಕಾರಿನ ಇಂಟಿರಿಯರ್ ಚಿತ್ರಗಳನ್ನು ಪ್ರಕಟಿಸಿದ್ದೇವು. ಆದರಲ್ಲಿ ಎಲ್ಲವೂ ಸ್ಪಷ್ಟವಾಗಿರಲಿಲ್ಲ. ಇದೀಗ ಆಲ್ಟೊ 800 ಕಾರಿನ ಮುಂಭಾಗದ ಚಿತ್ರ ಸೇರಿದಂತೆ ಕೆಲವು ಸ್ಪಷ್ಟ ಚಿತ್ರಗಳನ್ನು ನಮ್ಮ ಕಾರ್ ಬ್ಲಾಗ್ ಇಂಡಿಯಾ ಬ್ಲಾಗ್ ಸ್ನೇಹಿತರು ಪ್ರಕಟಿಸಿದ್ದಾರೆ. ಆ ಚಿತ್ರಗಳು ಇಲ್ಲಿವೆ. ಈ ಚಿತ್ರಗಳನ್ನು ನೋಡುತ್ತ ಹಳೆ ಮಾರುತಿ 800ಗೆ ನಿಮ್ಮಷ್ಟಕ್ಕೆ ಹೋಲಿಕೆ ಮಾಡಿನೋಡಿ.

ಆಲ್ಟೊ 800: ಕ್ಯೂಟಾಗಿದೆ ಸಣ್ಣಕಾರು
ಆಲ್ಟೊ 800 ಮುಂಭಾಗದಲ್ಲಿ ಕೊಂಚ ಕ್ಯೂಟಾಗಿದೆ. ಹಳೆಯ ಮಾರುತಿ 800 ಕಾರಿನ ಚೂಪು ಮೂತಿಗೆ ಬದಲಾಗಿ ಇಲ್ಲೊಂದಿಷ್ಟು ಹೊಸ ವಿನ್ಯಾಸಗಳು ಗಮನ ಸೆಳೆಯುತ್ತವೆ. ಪ್ರಮುಖವಾಗಿ ಹೆಡ್ ಲೈಟ್ ವಿನ್ಯಾಸ ಗಮನ ಸೆಳೆಯುತ್ತದೆ.

ಆಲ್ಟೊ 800 ಸೀಟು
ಎರಡು ಬಣ್ಣದ ವಿನ್ಯಾಸದ ಕಾರಿನ ಸೀಟುಗಳು ಆಕರ್ಷಕವಾಗಿವೆ. ಮುಂಭಾಗದಲ್ಲಿ ಪವರ್ ವಿಂಡೊ, ಡೋರ್ ಹ್ಯಾಂಡಲಿನ ಸಿಲ್ವರ್ ಫಿನಿಷಿಂಗ್ ಗಮನ ಸೆಳೆಯುತ್ತದೆ. ಇಂಟಿರಿಯರೊಳಗೆ ಗಾಢ ಬಣ್ಣ ಬಳಸದೆ ತೆಳು ಬಣ್ಣ ಬಳಸಿರುವುದರಿಂದ ಡೀಸೆಂಟ್ ಆಗಿ ಕಾಣುತ್ತದೆ.

ಡೋರಿನಲ್ಲಿ ಹಲವು ವಿಶೇಷತೆ
ಮುಂಭಾಗದ ಡೋರ್ ಟ್ರಿಮ್ಮಿಗೂ ಬಿಯೆಜ್ ಮತ್ತು ಗ್ರೇ ಬಣ್ಣದ ಪ್ಲಾಸ್ಟಿಕ್ ಮತ್ತು ಫ್ಯಾಬ್ರಿಕ್ ಬಳಕೆ ಮಾಡಲಾಗಿದೆ. ಹೊರಗಿನ ರಿಯರ್ ವ್ಯೂ ಮಿರರ್ ಕಪ್ಪು ಬಣ್ಣದಲ್ಲಿದೆ. ಇದನ್ನು ಮ್ಯಾನುಯಲ್ ಆಗಿ ಹೊಂದಾಣಿಕೆ ಮಾಡಿಕೊಳ್ಳಬೇಕು. ಕಾರಿನ ಡೋರಿನಲ್ಲೇ ಸ್ಪೀಕರ್ ಇದೆ. ಜೊತೆಗೆ ದೊಡ್ಡದಾದ ಕಿಸೆಯೊಂದು ಡೋರಿನಲ್ಲಿ ಕಾಣುತ್ತದೆ. ಇದರಲ್ಲಿ ಏನಾದರೂ ವಸ್ತುಗಳನ್ನು ಇಡಬಹುದು.

ಹೊಸ ಆಲ್ಟೊ ವಿಶೇಷತೆಗಳು
ಬಿಯೆಜ್ ಮತ್ತು ಸಿಲ್ವರ್ ಫಿನಿಶಿಂಗ್ ಇರುವ ಇಂಟಿರಿಯರ್ ಗಮನ ಸೆಳೆಯುತ್ತದೆ. ಜೊತೆಗೆ ಹಳೆಯ ಆಲ್ಟೊಗೆ ಹೋಲಿಸಿದರೆ ಡ್ಯಾಷ್ ಬೋರ್ಡ್ ವಿನ್ಯಾಸ ಅಚ್ಚುಕಟ್ಟಾಗಿದ್ದು, ಗಮನ ಸೆಳೆಯುತ್ತದೆ. 2012ರ ಆಲ್ಟೊ 800 ಸ್ಟಿಯರಿಂಗ್ ವೀಲ್ ಸಹ ಸಿಲ್ವರ್ ಮತ್ತು ಬಿಯೆಜ್ ಫಿನಿಶಿಂಗ್ ಹೊಂದಿದೆ. ಸೆಂಟ್ರಲ್ ಕನ್ಸೋಲಿನಲ್ಲಿ ಏಸಿ ನಾಬ್ಸ್ ಇದೆ. ಸಿಂಗಲ್ ಡಿನ್ ಆಡಿಯೋ ಸಿಸ್ಟಮ್ ಕಾಣುತ್ತದೆ. ಆಡಿಯೋ ಸಿಸ್ಟಮ್ ಸ್ಟಾಂಡರ್ಡ್ ಅಲ್ಲ. ಡ್ಯಾಷ್ ಬೋರ್ಡಿನಲ್ಲಿ ವಸ್ತುಗಳನ್ನು ಇಡಲು ಕೊಂಚ ಸ್ಥಳಾವಕಾಶವಿದೆ.

ಆಲ್ಟೊ 800: ಎಂಟ್ರಿ ಲೆವೆಲ್ ಕಾರು
ಆಲ್ಟೊ 800 ಕಾರಿನ ಮ್ಯಾನುಯಲ್ ಗೇರಿನ ಹತ್ತಿರದ ಚಿತ್ರವಿದು. ಗೇರ್ ಮತ್ತು ಪಾರ್ಕಿಂಗ್ ಹ್ಯಾಂಡ್ ಬ್ರೇಕ್ ನಡುವೆ ಪವರ್ ವಿಂಡೋಸ್ ಸ್ವಿಚ್ ಗಳು ಕಾಣಿಸುತ್ತಿದೆ. ಈ ಎರಡು ಸ್ವಿಚ್ಚುಗಳನ್ನು ಡ್ರೈವರ್ ಮಾತ್ರವಲ್ಲದೇ ಪಕ್ಕದಲ್ಲಿ ಕುಳಿತ ಪ್ರಯಾಣಿಕನೂ ಬಳಸಬಹುದು.


Click it and Unblock the Notifications








