ಆಲ್ಟೊ 800 ಮಾಯೆ; 50000 ಬುಕ್ಕಿಂಗ್ ದಾಖಲೆ
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯ ಅತ್ಯಂತ ಜನಪ್ರಿಯ ಕಾರು ಆಲ್ಟೊ 800 ಬಿಡುಗಡೆಗೊಂಡ ಎರಡು ತಿಂಗಳೊಳಗೆ 50000 ಬುಕ್ಕಿಂಗ್ ಗಿಟ್ಟಿಸಿಕೊಳ್ಳುವ ಮೂಲಕ ದಾಖಲೆ ಸ್ಥಾಪಿಸಿದೆ.
ಮಾರುತಿ ಆಲ್ಟೊ ಬಿಡುಗಡೆಗೆ ಮೊದಲೇ 10 ಸಾವಿರದಷ್ಟು ಬುಕ್ಕಿಂಗ್ ಗಿಟ್ಟಿಸಿಕೊಂಡಿತ್ತು. ಒಂದು ಹಂತದಲ್ಲಿ ಹ್ಯುಂಡೈ ಇಯಾನ್‌ನಿಂದ ಪೈಪೋಟಿ ಎದುರಾಗಿದ್ದರೂ ಮಾರುತಿ ಜನಯಪ್ರಿಯತೆಗೆ ಪ್ರತಿಸ್ಪರ್ಧಿಯೆನಿಸಲು ಸಾಧ್ಯವಾಗಿಲ್ಲ.
ಅಂದ ಹಾಗೆ 32000 ಆಲ್ಟೊ ಕಾರುಗಳನ್ನು ಈಗಾಗಲೇ ಗ್ರಾಹಕರಿಗೆ ಹಸ್ತಾಂತರಿಸಲಾಗಿದೆ. 2000ನೇ ಇಸವಿಯಲ್ಲಿ ಆಲ್ಟೊ ಮೊದಲ ಬಾರಿಗೆ ದೇಶದ ರಸ್ತೆಗಳಿದಿತ್ತು. ಈ ಮೂಲಕ ಅತಿ ಹೆಚ್ಚು ಮಾರಾಟಗೊಂಡ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾದ ಆಲ್ಟೊ 800 ಕಾರಿನ ಪರಿಷ್ಕೃತ ಆವೃತ್ತಿಯೂ ಗ್ರಾಹಕರ ಮನಮೆಚ್ಚಿದೆ.
ಮಾರುತಿ ಸುಜುಕಿ ಗ್ರಾಹಕರಿಗೆ ಒದಗಿಸುತ್ತಿರುವ ಉತ್ತಮ ಸೇವೆ ಹಾಗೂ ಕಾರಿನ ಕ್ಷಮತೆ ಪ್ರಮುಖವಾಗಿಯೂ ಆಕರ್ಷಣೆಗೆ ಕಾರಣವಾಗಿದೆ.

ಎರಡು ತಿಂಗಳ ಹಿಂದೆಯಷ್ಟೇ ಮಾರುತಿ ಆಲ್ಟೊ 800 ಬಿಡುಗಡೆಗೊಂಡಿತ್ತು. ಅಕ್ಟೋಬರ್ 16ರಂದು ದೇಶದ ಮಾರುಕಟ್ಟೆಗೆ ಪರಿಚಯವಾಗಿದ್ದ ಎಂಟ್ರಿ ಲೆವೆಲ್ ಮಾರುತಿ ಆಲ್ಟೊ ಪ್ರಾರಂಭಿಕ ದರ 2.44 ಲಕ್ಷ ರುಪಾಯಿಗಳಾಗಿವೆ.

ಮಾರುತಿ 800 ಕಾರಿನಲ್ಲಿ 799 ಸಿಸಿ ಎಂಜಿನ್ ಆಳವಡಿಸಲಾಗಿದೆ. ಇದರಲ್ಲಿ ಅನೇಕ ಆಧುನಿಕ ತಂತ್ರಗಾರಿಕೆಯನ್ನು ಆಳವಡಿಸಿದೆ. 796 ಸಿಸಿ-3 ಸಿಲಿಂಡರ್ ಈ ಹಿಂದಿನಕ್ಕಿಂತಲೂ ಹೆಚ್ಚು ಟರ್ಕ್ಯೂ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ನ್ಯೂ ಬ್ರಾಂಡ್ ಡ್ಯಾಶ್‌ಬೋರ್ಡ್ ಹಾಗೂ ಇಂಟಿರಿಯರ್ ಭಾಗಗಳ ಹೊಸ ವಿನ್ಯಾಸ, ಪರಿಷ್ಕೃತ ಎಂಜಿನ್ ಹಾಗೂ ಗೇರ್‌ಬಾಕ್ಸ್ ಎಲ್ಲವೂ ಅತ್ಯಾಕರ್ಷಕ ಆಲ್ಟೊ 800 ಮಾದರಿಗೆ ಸಾಕ್ಷಿಯಾಗಿದೆ.

ಆಲ್ಟೊ 800 ಕಾರು ಪ್ರತಿಲೀಟರಿಗೆ 22.74 ಕಿ.ಮೀ. ಮೈಲೇಜ್ ನೀಡಲಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ. ದೇಶದಲ್ಲಿ ಎಂಟ್ರಿ ಲೆವೆಲ್ ಸಣ್ಣಕಾರಿಗೆ ಸಾಕಷ್ಟು ಸಂಶೋಧನೆ ಮಾಡಿ ಎಂಜಿನ್ ಅಭಿವೃದ್ಧಿಪಡಿಸಿತ್ತು.

ಈಗಾಗಲೇ ದೇಶದ ಆಟೋಮೊಬೈಲ್ ರಂಗದಲ್ಲಿ ಸೆನ್ಸಷನಲ್ ಸೃಷ್ಟಿ ಮಾಡಿರುವ ಮಾರುತಿ ಆಲ್ಟೊ ಇತ್ತೀಚೆಗಷ್ಟೇ ದಿನವೊಂದರಲ್ಲೇ 200 ನೂತನ ಗ್ರಾಹಕರಿಗೆ ಹಸ್ತಾಂತರಿಸುವ ಮೂಲಕ ನೂತನ ದಾಖಲೆ ಸ್ಥಾಪಿಸಿದೆ. ಕೇರಳದ ಮಲಪ್ಪುರಂ ಜಿಲ್ಲೆಯ ಮಾರುತಿ ಡೀಲರ್‌ಶಿಪ್ ಈ ಅದ್ಭುತ ಸಮಾರಂಭಕ್ಕೆ ಸಾಕ್ಷಿಯಾಗಿತ್ತು.

ಒಟ್ಟು ಆರು ವೆರಿಯಂಟ್‌ಗಳಲ್ಲಿ ಮಾರುತಿ ಆಲ್ಟೊ ಲಭ್ಯವಿರಲಿದೆ. ಸಿಎನ್‌ಜಿ ಹಾಗೂ ಪೆಟ್ರೋಲ್ ಆವೃತ್ತಿಗಳಲ್ಲಿ ತಲಾ ಮೂರರಂತೆ ಬಿಡುಗಡೆಯಾಗಲಿದೆ. ಹಾಗೆಯೇ ಫ್ರೋಸ್ಟ್ ಬ್ಲೂ, ಗ್ರಾನೈಟ್ ಗ್ರೇ, ಸುಪಿರಿಯರ್ ವೈಟ್, ಬ್ಲಾಜಿಂಗ್ ರೆಡ್, ಸಿಲ್ಕಿ ಸಿಲ್ವರ್ ಹಾಗೂ ಟರ್ಕ್ಯೂ ಬ್ಲೂ ಕಲರ್ ವೆರಿಯಂಟ್‌ಗಳಲ್ಲಿ ಲಭ್ಯವಿದೆ.

ಮಾರುತಿ ಆಲ್ಟೊ 800 ಇಂಟಿರಿಯರ್
ಫ್ಯಾಶನ್ ಆಂಡ್ ಟ್ರೆಂಡಿ ಲುಕ್
ಸ್ಪೋರ್ಟ್ ಸ್ಟೈಲಿಷ್ ಹೆಡ್‌ಲ್ಯಾಂಪ್ಸ್
ಬೆಟರ್ ಹೆಡ್‌ರೂಂ ಆಂಡ್ ಲೆಗ್‌ರೂಂ

ಸುಧಾರಿತ ಗೇರ್ ಶಿಫ್ಟ್, ಕಾಲು ಚಾಚಿಕೊಳ್ಳಲು ಹೆಚ್ಚಿನ ಸ್ಥಳಾವಕಾಶ ಒದಗಿಸಿರುವುದು ಹಿಂದಿನ ಕಾರಿಗಿಂತ ಆಲ್ಟೊ 800 ಹೆಚ್ಚು ಆಕರ್ಷಕವಾಗಿ ಕಾಣಿಸಲು ಕಾರಣವಾಗಿದೆ. ನೂತನ ಆಲ್ಟೊ 800 ಅಭಿವೃದ್ಧಿಪಡಿಸಲು ಮಾರುತಿ ಸುಜುಕಿ ಇಂಡಿಯಾ ಬರೋಬ್ಬರಿ 470 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದೆ.


Click it and Unblock the Notifications








