ಮುಂದಿನ ವರ್ಷ ಬಿಡುಗಡೆಗೊಳ್ಳಲಿರುವ ಹೊಸ 'ಆಲ್ಟೊ 800' ಕಾರು: ವಿವರ ಇಲ್ಲಿದೆ

Written By:

ಮೊದಲಿನಿಂದಲೂ ಹ್ಯಾಚ್ ಬ್ಯಾಕ್ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಇರುವ ಮಾರುತಿ ಸುಜುಕಿ ಕಂಪನಿಯು ತನ್ನ ಹಳೆಯ ಮಾದರಿಯಾದ ಆಲ್ಟೊ ಕಾರನ್ನು ಅಭಿವೃದ್ಧಿ ಪಡಿಸಿ ಮುಂದಿನ ವರ್ಷ ಮತ್ತೆ ಬಿಡುಗಡೆ ಮಾಡಲಿದೆ.

To Follow DriveSpark On Facebook, Click The Like Button
ಮುಂದಿನ ವರ್ಷ ಬಿಡುಗಡೆಗೊಳ್ಳಲಿರುವ ಹೊಸ 'ಆಲ್ಟೊ 800' ಕಾರು: ವಿವರ ಇಲ್ಲಿದೆ

ಸದ್ಯದ ಸ್ಪರ್ಧಾತ್ಮಕ ಜಗತ್ತಿನಲ್ಲಿ ತನ್ನ ಪ್ರತಿಸ್ಪರ್ಧಿಯಾದ ರೆನಾಲ್ಟ್ ಕ್ವಿಡ್ ಕಾರಿನಿಂದ ಅತಿ ಹೆಚ್ಚಿನ ಮಟ್ಟದ ಪೈಪೋಟಿ ಏರ್ಪಡುತ್ತಿರುವುದನ್ನು ಗಮನಿಸಿರುವ ಮಾರುತಿ ಕಂಪನಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತನ್ನ ಆಲ್ಟೊ 800 ಕಾರನ್ನು ಮುಂದಿನ ವರ್ಷ ಬಿಡುಗಡೆಗೊಳಿಸಲು ತಯಾರಿ ನೆಡೆಸಿದೆ.

ಮುಂದಿನ ವರ್ಷ ಬಿಡುಗಡೆಗೊಳ್ಳಲಿರುವ ಹೊಸ 'ಆಲ್ಟೊ 800' ಕಾರು: ವಿವರ ಇಲ್ಲಿದೆ

ಮುಂದಿನ ವರ್ಷ ನೆಡೆಯುವ ಆಟೋ ಎಕ್ಸ್-ಪೋದಲ್ಲಿ ಮಾರುತಿ ಸುಜುಕಿ ಕಂಪನಿಯು ತನ್ನ ಆಲ್ಟೊ 800 ಕಾರನ್ನು ಅನಾವರಣಗೊಳಿಸಿ ಅದೇ ವರ್ಷ ಬಿಡುಗಡೆ ಭಾಗ್ಯ ಕಲ್ಪಿಸಲಿದೆ.

ಮುಂದಿನ ವರ್ಷ ಬಿಡುಗಡೆಗೊಳ್ಳಲಿರುವ ಹೊಸ 'ಆಲ್ಟೊ 800' ಕಾರು: ವಿವರ ಇಲ್ಲಿದೆ

ಆಲ್ಟೊ 800 ಕಾರು ನೂತನ ಸಾಧನ ಸಾಮಗ್ರಿಗಳನ್ನು ಪಡೆದುಕೊಳ್ಳಲಿದ್ದು, ತನ್ನ ತತ್ಸಮಾನ ಪ್ರತಿಸ್ಪರ್ದಿಯಾದ ಕ್ವಿಡ್ ಕಾರಿಗೂ ಹೆಚ್ಚಿನ ಮಟ್ಟದ ಸೌಕರ್ಯಗಳನ್ನು ನೀಡಲು ಕಂಪನಿ ತೀರ್ಮಾನಿಸಿದೆ.

ಮುಂದಿನ ವರ್ಷ ಬಿಡುಗಡೆಗೊಳ್ಳಲಿರುವ ಹೊಸ 'ಆಲ್ಟೊ 800' ಕಾರು: ವಿವರ ಇಲ್ಲಿದೆ

ಮಾರುತಿ ಕಂಪನಿಯ ಮುಂದಿನ ತಲೆಮಾರಿನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಈ ಕಾರು ನಿಮ್ಮ ಮುಂದೆ ಬರಲಿದೆ ಎಂದು ಹೇಳಲಾಗಿದೆ, ಕಡಿಮೆ ತೂಕದ ಹೆಚ್ಚಿನ ಕ್ಲಿಷ್ಟತೆ ಹೊಂದಿರದ ಕಾರು ಇದಾಗಿರಲಿದೆ.

ಮುಂದಿನ ವರ್ಷ ಬಿಡುಗಡೆಗೊಳ್ಳಲಿರುವ ಹೊಸ 'ಆಲ್ಟೊ 800' ಕಾರು: ವಿವರ ಇಲ್ಲಿದೆ

ಹೊಸ ತಲೆಮಾರಿನ ಕಾರುಗಳಾದ ಬಲೆನೊ ಮತ್ತು ಇಗ್ನಿಸ್ ಕಾರುಗಳು ಈಗಾಗಲೇ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದು, ಇದೇ ಯಶಸ್ಸು ಈ ಕಾರಿಗೂ ಸಿಗಲಿದೆಯೇ ಎಂಬುದಕ್ಕೆ ಉತ್ತರ ನಿಮಗೆ ಮುಂದಿನ ವರ್ಷ ಖಂಡಿತ ದೊರಕಲಿದೆ.

ಮುಂದಿನ ವರ್ಷ ಬಿಡುಗಡೆಗೊಳ್ಳಲಿರುವ ಹೊಸ 'ಆಲ್ಟೊ 800' ಕಾರು: ವಿವರ ಇಲ್ಲಿದೆ

ಭಾರತ ಸರ್ಕಾರ 2020ರಲ್ಲಿ ಪರಿಚಯ ಮಾಡಲು ಉದ್ದೇಶಿಸಿರುವ ಬಿಎಸ್-VI (ಬಿಎಸ್6) ನಿಯಮಗಳನ್ನು ಈ ಕಾರಿನಲ್ಲಿ ಮುಂದಿನ ವರ್ಷವೇ ಅಳವಡಿಸಿಕೊಳ್ಳಲು ಕಂಪನಿ ಮುಂದಾಗಿದೆ.

ಮುಂದಿನ ವರ್ಷ ಬಿಡುಗಡೆಗೊಳ್ಳಲಿರುವ ಹೊಸ 'ಆಲ್ಟೊ 800' ಕಾರು: ವಿವರ ಇಲ್ಲಿದೆ

ದೇಶದಲ್ಲಿಯೇ ತಯಾರಿಸಲಾದ ಎರಡು ಸಿಲಿಂಡರ್ ಹೊಂದಿರುವ ಡೀಸೆಲ್ ಎಂಜಿನ್ ಈ ಕಾರಿನಲ್ಲಿ ಇರಿಸಲು ಕಂಪನಿ ನಿಶ್ಚಯಿಸಿದೆ ಎನ್ನಲಾಗಿದ್ದು, ಈ ಎಂಜಿನ್ ಈಗಾಗಲೇ ಸೆಲೆರಿಯೊ ಕಾರಿನಲ್ಲಿ ಅಳವಡಿಸಲಾಗಿದೆ.

ಮುಂದಿನ ವರ್ಷ ಬಿಡುಗಡೆಗೊಳ್ಳಲಿರುವ ಹೊಸ 'ಆಲ್ಟೊ 800' ಕಾರು: ವಿವರ ಇಲ್ಲಿದೆ

ಹೊಸ ಕಾರಿನಲ್ಲಿ ನೇವಿಗೇಶನ್, ಎಬಿಎಸ್ ತಂತ್ರಜ್ಞಾನ, ಏರ್ ಬ್ಯಾಗ್ಸ್, ಸ್ಪೀಡ್ ಎಚ್ಚರಿಸುವ ವ್ಯವಸ್ಥೆ ಒಳಗೊಂಡಿರಲಿದೆ ಎನ್ನಲಾಗಿದೆ.

ಮುಂದಿನ ವರ್ಷ ಬಿಡುಗಡೆಗೊಳ್ಳುತ್ತಿರುವ ಮತ್ತೊಂದು ಬಹುನಿರೀಕ್ಷಿತ ಸ್ವಿಫ್ಟ್ ಕಾರಿನ ಚಿತ್ರಗಳನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

English summary
The new Maruti Suzuki Alto 800 will be launching in 2018 with upgraded interior features and based on a new platform.
Story first published: Thursday, March 9, 2017, 11:46 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark