ಮಾರುತಿ ಆಲ್ಟೊ 800: ಇಂಟಿರಿಯರ್ ಚಿತ್ರಗಳು ಲೀಕ್!
ಮಾರುತಿ ಸುಜುಕಿ 800 ಕಾರಿನ ಬದಲಿ ಆವೃತ್ತಿ ಮಾರುತಿ ಆಲ್ಟೊ 800 ಆಗಮನಕ್ಕೆ ಸಣ್ಣಕಾರು ಅಭಿಮಾನಿಗಳು ಬಹುನಿರೀಕ್ಷೆಯಲ್ಲಿದ್ದಾರೆ. ನೂತನ ಮಾರುತಿ ಆಲ್ಟೊ 800 ಕಾರನ್ನು ಕಂಪನಿಯು ಯಾವ ಕ್ಷಣದಲ್ಲಿ ಬೇಕಾದರೂ ಬಿಡುಗಡೆ ಮಾಡಬಹುದು. ಒಂದು ಮೂಲದ ಪ್ರಕಾರ ಇದು ಪ್ರಸಕ್ತ ತಿಂಗಳೇ ಆಗಮಿಸುವ ನಿರೀಕ್ಷೆಯಿದೆ.
ಈಗಾಗಲೇ ಮಾರುತಿ ಸುಜುಕಿ 800 ಚಿತ್ರವನ್ನು ನಾವು ಪ್ರಕಟಿಸಿದ್ದೇವೆ. ಆ ಚಿತ್ರಗಳನ್ನು ನೋಡಿ ಬಹಳಷ್ಟು ಓದುಗರು ಸಂತೋಷ ವ್ಯಕ್ತಪಡಿಸಿದ್ದರು. ಹೊರ ವಿನ್ಯಾಸ ಹೆಚ್ಚಿನವರಿಗೆ ಇಷ್ಟವಾಗಿರುವುದು ಸ್ಪಷ್ಟ. ಇದೀಗ ನಮ್ಮ ಸ್ನೇಹಿತರಾದ ಕಾರು ಬ್ಲಾಗ್ ಇಂಡಿಯಾದಲ್ಲಿ ಹೊಸ ಕಾರಿನ ಇಂಟಿರಿಯರ್ ಚಿತ್ರಗಳನ್ನು ಓದುಗರೊಬ್ಬರು ಪ್ರಕಟಿಸಿದ್ದಾರೆ. ಚಿತ್ರಗಳನ್ನು ನೋಡಿ.
ಕಾರ್ ಬ್ಲಾಗ್ ಇಂಡಿಯಾದಲ್ಲಿ ಆಲ್ಟೊ 800 ಕಾರಿನ ಇಂಟಿರಿಯರ್ ಚಿತ್ರವನ್ನು ನೀಡಲಾಗಿದೆ. ಅದನ್ನು ಇಲ್ಲಿ ನೀಡಲಾಗಿದೆ. ಹೊಸ ಆಲ್ಟೊ 800 ಕಾರಿನ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಈ ಚಿತ್ರಗಳು ನೆರವಾಗಬಹುದು.
ಆಲ್ಟೊ 800 ಕಾರಿನೊಳಗೆ ಮೂರು ಸ್ಪೋಕ್ ವೀಲಿನ ಸ್ಟಿಯರಿಂಗ್ ವೀಲ್ ಗಮನ ಸೆಳೆಯುತ್ತದೆ. ಡ್ಯಾಷ್ ಬೋರ್ಡ್ ಸರಳವಾಗಿ ಆಕರ್ಷಕವಾಗಿದೆ. ಎಸಿ ಬಟನ್ ಮತ್ತು ಮ್ಯೂಸಿಕ್ ಸಿಸ್ಟಮ್ ಇದೆ.
ಕಾರಿನೊಳಗೆ ನೋಡು: ಚಿತ್ರದಲ್ಲಿ ಮುಂಭಾಗದ ಕ್ಯಾಬಿನ್ ಸ್ಪಷ್ಟವಾಗಿ ಕಾಣುತ್ತದೆ. ಮೂರು ಸ್ಪೋಕ್ ವೀಲಿನ ಸ್ಟಿಯರಿಂಗ್ ವೀಲ್ ಗಮನ ಸೆಳೆಯುತ್ತದೆ. ಡ್ಯಾಷ್ ಬೋರ್ಡ್ ಸರಳವಾಗಿ ಆಕರ್ಷಕವಾಗಿದೆ. ಎಸಿ ಬಟನ್ ಮತ್ತು ಮ್ಯೂಸಿಕ್ ಸಿಸ್ಟಮ್ ಕಾಣುತ್ತದೆ. ಹೊಸ ಆಲ್ಟೊ 800 ಐದು ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ.

ಆಲ್ಟೊ 800: ಕಾರಿನೊಳಗೆ ನೋಡಿ
ಆಲ್ಟೊ 800 ಕಾರಿನೊಳಗೆ ಮೂರು ಸ್ಪೋಕ್ ವೀಲಿನ ಸ್ಟಿಯರಿಂಗ್ ವೀಲ್ ಗಮನ ಸೆಳೆಯುತ್ತದೆ. ಡ್ಯಾಷ್ ಬೋರ್ಡ್ ಸರಳವಾಗಿ ಆಕರ್ಷಕವಾಗಿದೆ. ಎಸಿ ಬಟನ್ ಮತ್ತು ಮ್ಯೂಸಿಕ್ ಸಿಸ್ಟಮ್ ಇದೆ.

ಆಲ್ಟೊ 800 ಸೀಟು ನೋಡಿ
ಡ್ಯೂಯಲ್ ಕಲರ್ ಸೀಟುಗಳು ನೂತನ ಆಲ್ಟೊ 800 ಕಾರಿನ ವಿಶೇಷತೆ. ಇದೇ ಬಣ್ಣದ ಥೀಮ್ ಡೋರುಗಳಲ್ಲಿಯೂ ಕಾಣುತ್ತದೆ.

800 ಕಾರಿನ ಡೋರ್
ಇದು ಆಲ್ಟೊ 800 ಕಾರಿನ ಡೋರಿನ ಚಿತ್ರ. ಇದರಲ್ಲಿ ವಿಂಡೋ ಡೌನ್ ಮಾಡಲು ಯಾವುದೇ ಬಟನ್ ಕಾಣಿಸುತ್ತಿಲ್ಲ. ಅಂದ್ರೆ ಆಲ್ಟೊ 800 ಪವರ್ ವಿಂಡೋಸ್ ಹೊಂದಿದೆಯೇ?

ಸಾಮಾನ್ಯ ಗೇರ್
ಇದು ಹೊಸ ಆಲ್ಟೊ 800 ಕಾರಿನ ಗೇರಿನ ಹತ್ತಿರದ ಚಿತ್ರ. ಮ್ಯಾನುಯಲ್ ಗೇರ್ ಬಾಕ್ಸಿನಲ್ಲಿ ಯಾವುದೇ ಸರ್ ಪ್ರೈಸ್ ಕಾಣಿಸುತ್ತಿಲ್ಲ. ಇದು ಮಾಮೂಲಿ 5 ಸ್ಪೀಡ್ ಗೇರ್ ಬಾಕ್ಸ್.

ಹೊಸ ಆಲ್ಟೊ 800
ಹೊಸ ಆಲ್ಟೊ 800 ಕಾರಿನ ಹೊರ ವಿನ್ಯಾಸದ ಚಿತ್ರವಿದು. ಈ ಹಬ್ಬದ ವೇಳೆಗೆ ಆಗಮಿಸುವ ಹೊಸ ಆಲ್ಟೊ 800 ಕಾರಿನ ಹೆಚ್ಚಿನ ಮಾಹಿತಿ ಶೀಘ್ರದಲ್ಲಿ ನೀಡಲಿದ್ದೇವೆ.
ಮಾರುತಿ ಆಲ್ಟೊ 800 ಕಾರಿನ ಹೊರ ವಿನ್ಯಾಸದ ಚಿತ್ರಗಳನ್ನು ನೋಡಿ.


Click it and Unblock the Notifications