ಮಾರುತಿ ಸಂಕಷ್ಟದ ಲಾಭ ಪಡೆಯುವತ್ತ ಹ್ಯುಂಡೈ

ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯ ಅಗ್ರಜ ಮಾರುತಿ ಸುಜುಕಿ ಕಂಪನಿಯು ಮಾನೆಸರ್ ಗಲಭೆಯಿಂದ ಹಿನ್ನಡೆ ಅನುಭವಿಸುತ್ತದೆ. ಇದರ ಸಂಪೂರ್ಣ ಲಾಭ ಪಡೆಯಲು ಹ್ಯುಂಡೈ ಹೊಂಚು ಹಾಕುತ್ತಿದೆ. ಐ20, ವೆರ್ನಾ ಕಾರುಗಳ ಮಾರಾಟ ಹೆಚ್ಚಿಸಲು ಪ್ರಯತ್ನಿಸಿ ಎಂದು ಡೀಲರುಗಳಿಗೆ ಹ್ಯುಂಡೈ ಪತ್ರಬರೆದಿದೆ.

ಮಾರುತಿ ಸುಜುಕಿ ಕಂಪನಿಯು ಗಲಭೆ ನಂತರ ಮಾನೆಸರ್ ಘಟಕಕ್ಕೆ ಬೀಗಮುದ್ರೆ ಹಾಕಿದೆ. ಇದರಿಂದಾಗಿ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಮತ್ತು ಡಿಜೈರ್ ಸೆಡಾನ್ ಆವೃತ್ತಿಗಳ ವೇಟಿಂಗ್ ಪಿರೆಯಿಡ್ ಹೆಚ್ಚಾಗಲಿದೆ. ಮಾರುತಿಯ ಪ್ರಮುಖ ಮಾಡೆಲ್ ಅಲಭ್ಯತೆಯಿಂದಾಗಿ ಉಳಿದ ಕಂಪನಿಗಳ ಕಾರುಗಳ ಮಾರಾಟ ಹೆಚ್ಚಾಗುವ ನಿರೀಕ್ಷೆಯಿದೆ.

"ಪ್ರತಿಸ್ಪರ್ಧಿ ಕಂಪನಿಯ ಘಟಕದ ತೊಂದರೆಯಿಂದ ನಮಗೆ ಅವಕಾಶವಾಗಲಿದೆ" ಎಂಬರ್ಥದ ಪತ್ರವನ್ನು ಹ್ಯುಂಡೈ ಬರೆದಿದೆ ಎಂದು ವರದಿಗಳು ಹೇಳಿವೆ. "ಇದು ಐ20 ಹ್ಯಾಚ್ ಬ್ಯಾಕ್ ಮತ್ತು ವೆರ್ನಾ ಸೆಡಾನ್ ಮಾರಾಟ ಹೆಚ್ಚಿಸಿಕೊಳ್ಳಲು ಸೂಕ್ತ ಕಾಲ" ಎಂದು ಹ್ಯುಂಡೈ ಡೀಲರುಗಳಿಗೆ ಮನದಟ್ಟು ಮಾಡಲು ಪ್ರಯತ್ನಿಸಿದೆ.

"ಪ್ರತಿಸ್ಪರ್ಧಿ ಕಂಪನಿಯ ಘಟಕದ ಗಲಭೆಯಿಂದ ಸ್ವಿಫ್ಟ್ ಮತ್ತು ಡಿಜೈರ್ ವೇಟಿಂಗ್ ಪಿರೆಯಿಡ್ ಹೆಚ್ಚಾಗಲಿದೆ. ಇದರಿಂದ ಐ20 ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳ ಮಾರಾಟ ಹೆಚ್ಚಿಸಿಕೊಳ್ಳಬಹುದು" ಎಂಬ ಹ್ಯುಂಡೈ ಪತ್ರದ ಪ್ರತಿಯನ್ನು ಉಲ್ಲೇಖಿಸಿ ಇಟಿ ವರದಿ ಮಾಡಿದೆ.

ಆದ್ರೆ ಮಾರುತಿ ಸುಜುಕಿಯನ್ನು ಸೋಲಿಸೋದು ಅಷ್ಟೇನೂ ಸುಲಭವಲ್ಲ.

More from DriveSpark

Article Published On: Wednesday, July 25, 2012, 11:05 [IST]
English summary
Maruti Suzuki's close rival Hyundai has written to its dealers to "push" and "increase" sales of i20 compact as competitors look to gain from the lockout at the top car maker's Manesar plant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+