ಮಾರುತಿ ಸುಜುಕಿ ಎರ್ಟಿಗಾಕ್ಕೆ ಸಖತ್ ಬೇಡಿಕೆ
ಇತ್ತೀಚೆಗೆ ಪರಿಚಯಿಸಿದ ಎರ್ಟಿಗಾ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಮಾರುತಿ ಸುಜುಕಿ ಕಂಪನಿ ಹೇಳಿದೆ. ರಸ್ತೆಗಿಳಿದ ಒಂದು ತಿಂಗಳಲ್ಲೇ ಸುಮಾರು 32 ಸಾವಿರ ಗ್ರಾಹಕರು ಈ ಎಲ್‌ಯುವಿಯನ್ನು ಬುಕ್ಕಿಂಗ್ ಮಾಡಿದ್ದಾರೆ.
ಮಾರುತಿ ಸುಜುಕಿ ಎರ್ಟಿಗಾ ಕಾರು ಏಳು ಆವೃತ್ತಿಗಳಲ್ಲಿ ದೊರಕುತ್ತದೆ. ವಿಶೇಷವೆಂದರೆ ಕಂಪನಿಯು ಈ ಮಲ್ಟಿ ಪರ್ಪೊಸ್ ವೆಹಿಕಲಿಗೆ ಎಲ್‌ಯುವಿ ಎಂದು ಹೆಸರಿಡುವ ಮೂಲಕ ಹೊಸ ಸೆಗ್ಮೆಂಟ್ ರೂಪುಗೊಳಿಸಿದೆ. ಸಣ್ಣ ಗಾತ್ರದ ಈ ಎಂಪಿವಿಯೊಳಗೆ ಸಾಕಷ್ಟು ಸ್ಥಳಾವಕಾಶವಿದೆ.
ಒಂದು ಲೆಕ್ಕದಲ್ಲಿ ಹೇಳುವುದಾದರೆ ನೂತನ ಎರ್ಟಿಗಾ 32 ಸಾವಿರ ಬುಕ್ಕಿಂಗ್ ಆಗಿರುವುದು ಹೊಸ ದಾಖಲೆಯಾಗಿದೆ. ಇಲ್ಲಿವರೆಗೆ ದೇಶದ ಯಾವುದೇ ಎಂಪಿವಿ ಇಷ್ಟೊಂದು ಪ್ರಮಾಣದಲ್ಲಿ ಬೇಡಿಕೆ ಪಡೆದುಕೊಂಡಿರಲಿಲ್ಲ. ಎರ್ಟಿಗಾ ಡೀಸೆಲ್ ಮತ್ತು ಪೆಟ್ರೋಲ್ ಆಯ್ಕೆಗಳಲ್ಲಿ ದೊರಕುತ್ತದೆ. ಇದರಲ್ಲಿ ಡೀಸೆಲ್ ಆವೃತ್ತಿಯು ಅತ್ಯಧಿಕ ಬೇಡಿಕೆ ಪಡೆದುಕೊಂಡಿದೆ.
ಮಾರುತಿ ಸುಜುಕಿ ಕಂಪನಿಯು ಗುರ್ ಗಾಂವ್ ಘಟಕದಲ್ಲಿ ಎರ್ಟಿಗಾ ಉತ್ಪಾದಿಸುತ್ತಿದೆ. ಕಂಪನಿಯು ಮುಂದಿನ ದಿನಗಳಲ್ಲಿ ಎರ್ಟಿಗಾ ಉತ್ಪಾದನೆ ಹೆಚ್ಚಿಸುವ ಯೋಜನೆಯನ್ನು ಹೊಂದಿದೆ.
ಮಾರುತಿ ಸುಜುಕಿ ಸ್ವಿಫ್ಟ್ ವೇಟಿಂಗ್ ಪಿರೆಯಿಡ್ ಸುಮಾರು 6 ತಿಂಗಳು ಇದೆ. ಎರ್ಟಿಗಾ ಕಾರಿನ ಡೀಸೆಲ್ ಆವೃತ್ತಿ ಝಡ್‌ಡಿಐ ಅತ್ಯಧಿಕ ಪ್ರಮಾಣದಲ್ಲಿ ಬುಕ್ಕಿಂಗ್ ಆಗಿದೆ. ಸದ್ಯ ಎರ್ಟಿಗಾ ಪೆಟ್ರೋಲ್ ಆವೃತ್ತಿ ವೇಟಿಂಗ್ ಪಿರೆಯಿಡ್ 2 ತಿಂಗಳು ಮತ್ತು ಡೀಸೆಲ್ ಆವೃತ್ತಿ ವೇಟಿಂಗ್ ಪಿರೆಯಿಡ್ 4-6 ತಿಂಗಳು ಇದೆ. ಗುರ್ ಗಾಂವ್ ಘಟಕದಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಾದರೆ ವೇಟಿಂಗ್ ಪಿರೆಯಿಡ್ ಕಡಿಮೆಯಾಗುವ ನಿರೀಕ್ಷೆಯಿದೆ.


Click it and Unblock the Notifications









