ಹಬ್ಬದ ಸೀಸನಿನಲ್ಲಿ ಶೇ. 10ರಷ್ಟು ಮಾರಾಟ ವೃದ್ಧಿ: ಮಾರುತಿ ನಿರೀಕ್ಷೆ

ಪ್ರಸ್ತುತ ಹಬ್ಬದ ಸೀಸನಿನಲ್ಲಿ ನೂತನ ಆಲ್ಟೊ 800 ಸಣ್ಣ ಕಾರು ಬಿಡುಗಡೆ ಮಾಡಿರುವ ಮಾರುತಿ ಸುಜುಕಿ ಶೇಕಡಾ 10ರಷ್ಟು ಮಾರಾಟ ವೃದ್ಧಿಸಿಕೊಳ್ಳುವ ನಿರೀಕ್ಷೆ ಹೊಂದಿದೆ. ಪ್ರಸಕ್ತ ಆರ್ಥಿಕ ಸಾಲಿನ ಮೊದಲಾರ್ಧದಲ್ಲಿ ಮಾರಾಟವು ಸ್ಥಿರವಾಗಿತ್ತು. ಇದೀಗ ಹಬ್ಬದ ಸೀಸನ್ ಬಂದಿರುವಂತೆಯೇ ಶೇಕಡಾ 10ರಷ್ಟು ಪ್ರಗತಿ ನಿರೀಕ್ಷಿಸುತ್ತಿದ್ದೇವೆ ಎಂದು ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಉಪಾಧ್ಯಕ್ಷ (ಪಾರ್ಟ್ಸ್ ಆಂಡ್ ಆಕ್ಸೆಸರಿ) ಅಮಿತಾವ ರಾಯ್ ತಿಳಿಸಿದ್ದಾರೆ.

ಅಂದ ಹಾಗೆ ಒಟ್ಟಾರೆಯಾಗಿ ಶೇಕಡಾ 5ರಷ್ಟು ವೃದ್ಧಿ ಗುರಿಯಾಗಿರಿಸಿಕೊಂಡಿದ್ದೇವೆ. ಪ್ರಸ್ತಕ್ತ ದಿನವೊಂದರಲ್ಲಿ 1400 ಕಾರುಗಳನ್ನು ಉತ್ಪಾದಿಸುತ್ತಿದ್ದೇವೆ. ತಿಂಗಳಾಂತ್ಯದ ವೇಳೆ ಈ ಸಂಖ್ಯೆ 1600 ಆಗಲಿದ್ದು ನವೆಂಬರ್‌ನಲ್ಲಿ 1800 ಯುನಿಟ್ ಉತ್ಪಾದಿಸಲು ಶಕ್ತರಾಗಲಿದ್ದೇವೆ ಎಂದಿದ್ದಾರೆ.

ಮಾರುತಿಯ ಬಹುನಿರೀಕ್ಷಿತ ಆಲ್ಟೊ 800 ಬಿಡುಗಡೆಗೆ ಮೊದಲೇ 10 ಸಾವಿರ ಬುಕ್ಕಿಂಗ್ ಗಿಟ್ಟಿಸಿಕೊಂಡಿರುವುದು ಕಂಪನೆ ಉತ್ಸಾಹಕ್ಕೆ ಕಾರಣವಾಗಿದೆ. ಪೆಟ್ರೋಲ್ ದರ ಏರಿಕೆಯಿಂದಾಗಿ ಡೀಸೆಲ್ ಯುನಿಟ್ ಮೇಲೆ ಗುರಿಯಿರಿಸಿಕೊಂಡಿರುವ ಮಾರುತಿ ಪ್ರಸಕ್ತ ವರ್ಷವೊಂದರಲ್ಲಿ 4,00,000 ಯುನಿಟ್ ಉತ್ಪಾದಿಸುವ ನಿರೀಕ್ಷೆ ಹೊಂದಿದೆ.

ಈ ನಡುವೆ ಕಾರ್ಮಿಕರ ಮುಷ್ಕರದಿಂದಾಗಿ ಅಶಾಂತಿಯ ವಾತಾವರಣ ನಿರ್ಮಾಣವಾಗಿದ್ದ ಮನೇಸರ್ ಕಾರು ಘಟಕವು ಇದೀಗ ಸಹಜ ಪರಿಸ್ಥಿತಿಯತ್ತ ಮರಳುತ್ತಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

More from DriveSpark

Article Published On: Friday, October 19, 2012, 11:17 [IST]
English summary
The country's top car manufacturer Maruti Suzuki on Wednesday said it expects sales to grow by 10 per cent in the second half of the current fiscal on the back on the upcoming festive season.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+