ಅಲಾಯ್ ವೀಲ್ ಇಲ್ಲದ ಮಾರುತಿ ಸುಜುಕಿ ಎರ್ಟಿಗಾ
ಮಾರುತಿ ಸುಜುಕಿ ಸ್ವಿಫ್ಟ್, ಡಿಜೈರ್, ಎರ್ಟಿಗಾ ಕಾರುಗಳಲ್ಲಿ ಹೆಚ್ಚಿನ ಜನರು ಹೈಎಂಡ್ ಆವೃತ್ತಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೈಎಂಡ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ವೇಟಿಂಗ್ ಪಿರೆಯಿಡ್ ಕೂಡ ಹೆಚ್ಚಾಗುತ್ತಿದೆ.
ಎರ್ಟಿಗಾ, ಸ್ವಿಫ್ಟ್ ಮತ್ತು ಸ್ವಿಫ್ಟ್ ಡಿಜೈರ್ ಕಾರುಗಳ ಹೈ ಎಂಡ್ ಆವೃತ್ತಿಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಬೇಕಾದಷ್ಟು ಬಿಡಿಭಾಗಗಳನ್ನು ಸಮರ್ಪಕವಾಗಿ ಪಡೆಯಲು ಕಂಪನಿಯು ವಿಫಲವಾಗುತ್ತಿದೆ. ಪ್ರಮುಖವಾಗಿ ಅಲಾಯ್ ವೀಲ್ ಲಭ್ಯತೆ ಕಡಿಮೆಯಾಗುತ್ತದೆ. ಟಾಪ್ ಎಂಡ್ ಆವೃತ್ತಿಗಳಲ್ಲಿ ಅಲಾಯ್ ವೀಲ್ ಪ್ರಮುಖ ಫೀಚರ್ ಆಗಿದೆ.
ಮಾರುತಿ ಸುಜುಕಿ ಎರ್ಟಿಗಾ ಝಡ್ ಡಿಐ ಮತ್ತು ಝಡ್ ಎಕ್ಸ್ಐ ಆವೃತ್ತಿಗಳ ವೇಟಿಂಗ್ ಪಿರೆಯಿಡ್ ಅತ್ಯಧಿಕವಾಗಿದೆ. ಅಲಾಯ್ ವೀಲ್ ಗಳ ಲಭ್ಯತೆ ಅಸಮರ್ಪಕವಾಗಿರುವುದು ಇದಕ್ಕೆ ಕಾರಣವಾಗಿದೆ ಎಂದು ಕಂಪನಿಯ ನಿಕಟ ಮೂಲಗಳು ಹೇಳಿವೆ.
ಈ ಸಮಸ್ಯೆ ಬಗೆಹರಿಸಲು ಮಾರುತಿ ಸುಜುಕಿಯು ಅಲಾಯ್ ವೀಲ್ ಇಲ್ಲದ ಎರ್ಟಿಗಾ ಆವೃತ್ತಿಗಳನ್ನು ಪರಿಚಯಿಸಲಿದೆ ಎಂದು ಮೂಲಗಳು ಹೇಳಿವೆ. ಈ ಆವೃತ್ತಿಗಳು ಅಲಾಯ್ ವೀಲ್ ಹೊರತುಪಡಿಸಿ ಟಾಪ್ ಎಂಡ್ ಆವೃತ್ತಿಯಲ್ಲಿರುವ ಎಲ್ಲಾ ಫೀಚರುಗಳನ್ನು ಒಳಗೊಂಡಿರಲಿದೆ.
ಅಲಾಯ್ ವೀಲ್ ಇಲ್ಲದ ಎರ್ಟಿಗಾ ಕಾರುಗಳ ದರ ಸುಮಾರು 25 ಸಾವಿರ ರುಪಾಯಿ ಕಡಿಮೆ ಇರುವ ನಿರೀಕ್ಷೆಯಿದೆ.


Click it and Unblock the Notifications









