ಮಾರುತಿ ಆಲ್ಟೊ ಕೆ10 ನೈಟ್‌ರೇಸರ್ ಲಾಂಚ್
ದೇಶದ ಅತಿ ದೊಡ್ಡ ವಾಹನ ತಯಾರಕ ಕಂಪನಿ ಮಾರುತಿ ಸುಜುಕಿ ನೂತನ ಸ್ಪೆಷಲ್ ಅಡಿಷನ್ ಆಲ್ಟೊ ಕೆ10 ನೈಟ್‌ರೇಸರ್ ಲಾಂಚ್ ಮಾಡಿದೆ. ನೂತನ ಎಲ್‌ಎಕ್ಸ್‌ಐ ವೆರಿಯಂಟ್ 11 ಹೆಚ್ಚುವರಿ ಸೌಲಭ್ಯಗಳನ್ನು ಹೊಂದಿರಲಿದೆ. ಅಂತೆಯೇ ಸ್ಟಾಂಡರ್ಡ್ ಕೆ10ಗಿಂತಲೂ ಸ್ಪೆಷಲ್ ಅಡಿಷನ್ ಕೆ10 ನೈಟ್‌ರೇಸರ್ ಆವೃತ್ತಿಗೆ ಹೆಚ್ಚುವರಿ 13,490 ರೂಪಾಯಿಗಳನ್ನು ಪಾವತಿಸಬೇಕಾಗಿದೆ.
ಇಂಟಿರಿಯರ್ ಸೇರಿದಂತೆ ಎಕ್ಸ್‌ಟಿರಿಯರ್‌ಗಳಿಗೂ ಮಾರುತಿ ಹೆಚ್ಚುವರಿ ಫೀಚರ್‌ಗಳನ್ನು ಆಳವಡಿಸಿದೆ. ರಿಯರ್ ಸ್ಪಾಯ್ಲರ್, ಟ್ರೆಂಡಿ ನೈಟ್‌ರೇಸರ್ ಬಾಡಿ ಗ್ರಾಫಿಕ್ಸ್, ಫುಲ್ ವೀಲ್ ಕವರ್ಸ್, ಬಾಡಿ ಸೈಡ್ ಮೌಲ್ಡಿಂಗ್ ಆಕರ್ಷಣೆಗೆ ಕಾರಣವಾಗಿದೆ.

ಇನ್ನು ಕಾರಿನ ಒಳಗಿನ ಸೌಲಭ್ಯಗಳ ಕುರಿತು ಚರ್ಚಿಸುವುದಾದರೆ ನೂತನ ಆಲ್ಟೊ ಕೆ10 ನೈಟ್‌ರೇಸರ್ ಫ್ರಾಬ್ರಿಕ್ ಸೀಟ್ ಕವರ್, ರಿಯರ್ ಪಾರ್ಸೆಲ್ ಟ್ರೇ ಹಾಗೂ ಸ್ಟೀರಿಂಗ್ ವೀಲ್ ಕವರ್ ಹೊಂದಿದೆ. ಇದರ ಜತೆ ಜಿವಿಸಿ ಎಂಪಿ3 ಮ್ಯೂಸಿಕ್ ಸಿಸ್ಟಂ ಹಾಗೂ ಯುಎಸ್‌ಬಿ ನಿಮ್ಮ ಪ್ರಯಾಣವು ಹೆಚ್ಚು ಸಂತೋಷದಾಯಕ ಮಾಡಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮಾರುತಿ ಸುಜುಕಿ ಉಪಾಧ್ಯಕ್ಷ ಮನೋಹರ್ ಭಟ್, ಪ್ರಮುಖವಾಗಿಯೂ ಯುವ ಜನಾಂಗದವರಿಂದ ಕೆ10 ಆವೃತ್ತಿ ಉತ್ತಮ ಶಭಾಷ್‌ಗಿರಿ ದೊರಕಿದೆ. ಹಾಗೆಯೇ ಈ ಸ್ಪೆಷಲ್ ಅಡಿಷನ್ ಖಂಡಿತವಾಗಿಯೂ ಆಯ್ದ ಮಾಲಿಕರಿಗೆ ಹೆಮ್ಮೆಪಡುವಂತಾಗಲಿದೆ ಎಂದಿದ್ದಾರೆ.
2010 ಆಗಸ್ಟ್‌ನಲ್ಲಿ ಕೆ10 ಆವೃತ್ತಿ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಈ ಕಾರು 1000ಸಿಸಿ ಕೆ ಸಿರೀಸ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು 68 ಪಿಎಸ್ ಪವರ್ ಉತ್ಪಾದಿಸಲಿದೆ. ಅಲ್ಲದೆ ಗರಿಷ್ಠ 20.2 ಮೈಲೇಜ್ ಕೂಡಾ ನೀಡುತ್ತಿದೆ. ಆಲ್ಟೊ ಕೆ10 3.20 ಲಕ್ಷದಿಂದ 3.34 ಲಕ್ಷ ರುಪಾಯಿಗಳ ನಡುವೆ ಗ್ರಾಹಕರ ಕೈ ಸೇರಲಿದೆ.


Click it and Unblock the Notifications








