ಗಾಯಗೊಂಡ ನೌಕರರ ಕ್ಷಮೆಕೋರಿದ ಮಾರುತಿ
"ಎರಡನೇ ಮಹಾಯುದ್ಧದ ನಂತರ ನನ್ನ ಸ್ವಂತ ದೇಶ ಜಪಾನಿನಲ್ಲೇ ಹಲವು ಕಾರ್ಮಿಕ ಸಮಸ್ಯೆಗಳನ್ನು ಕಂಡಿದ್ದೇನೆ. ಆದರೆ ಕೆಲವು ವಾರಗಳ ಹಿಂದೆ ಭಾರತದಲ್ಲಿ ನಡೆದಂತಹ ಘಟನೆ ನಾನೂ ಎಲ್ಲೂ ಕಂಡಿಲ್ಲ" ಎಂದು ನಕನಿಶಿ ಹೇಳಿದ್ದಾರೆ. ಯಾಕೆ ಹೀಗಾಯ್ತು ಎನ್ನುವ ಕುರಿತು ಯಾವುದೇ ಸ್ಪಷ್ಟತೆ ಇಲ್ಲವೆಂದು ಅವರು ಹೇಳಿದ್ದಾರೆ.
ಜುಲೈ ಹದಿನೆಂಟರಂದು ಮಾನೆಸರ್ ಘಟಕದ ನೌಕರರು ಮತ್ತು ಆಡಳಿತ ಸಿಬ್ಬಂದಿ ನಡುವೆ ಗಲಭೆಯಾಗಿತ್ತು. ಈ ಗಲಭೆಯಲ್ಲಿ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಮ್ಯಾನೆಜರ್ ಸಜೀವ ದಹನರಾಗಿದ್ದರು. ಸುಮಾರು 93 ಜನರು ಗಾಯಗೊಂಡಿದ್ದರು. ದೇಶದ ಬೃಹತ್ ಕಾರು ತಯಾರಿಕಾ ಕಂಪನಿ ಮಾನೆಸರ್ ಘಟಕಕ್ಕೆ ಬೀಗಮುದ್ರೆ ಹಾಕಿತ್ತು.
ಇಂತಹ ಸಮಸ್ಯೆ ಆರಂಭವಾದದ್ದು ಕಳೆದ ಒಂದು ವರ್ಷದಿಂದ. ನೌಕರರ ಸರಣಿ ಪ್ರತಿಭಟನೆಗೆ ಸಿಲುಕಿ ಕಂಪನಿಗೆ 70 ಕೋಟಿ ರುಪಾಯಿಗಿಂತಲೂ ಹೆಚ್ಚು ನಷ್ಟವಾಗಿತ್ತು. ಈ ಪ್ರತಿಭಟನೆ, ಗಲಭೆಯಿಂದಾಗಿ ಪ್ರಯಾಣಿಕ ಕಾರುಗಳ ಮಾರಾಟಕ್ಕೂ ಭಾರೀ ಹಿನ್ನಡೆಯಾಗಿತ್ತು.
ಆದಗ್ಯೂ, ಗಲಭೆಕೋರರ ವಿರುದ್ಧ ಯಾವುದೇ ರಾಜಿನೀತಿ ಅನುಸರಿಸುವುದಿಲ್ಲವೆಂದು ನಕನಿಶಿ ಸ್ಪಷ್ಟಪಡಿಸಿದ್ದಾರೆ. ಅಪರಾಧಿಗಳನ್ನು ಬಂಧಿಸಲೇಬೇಕು ಎಂದು ಒತ್ತಿಹೇಳಿದ್ದಾರೆ. ಮಾರುತಿ ಸುಜುಕಿ ಮಾನೆಸರ್ ಗಲಭೆಯಿಂದಾಗಿ ಸ್ವಿಫ್ಟ್ ಮತ್ತು ಡಿಜೈರ್ ಸಂಗ್ರಹ ಮುಗಿದು ಹೋಗಿದೆ. ವೇಟಿಂಗ್ ಪಿರೆಯಿಡ್ ಹೆಚ್ಚಾಗಿದೆ. ಆದರೆ ಸದ್ಯ ಕಂಪನಿಯು ಈ ಕಾರುಗಳ ಬುಕ್ಕಿಂಗ್ ಸ್ಥಗಿತಗೊಳಿಸಿಲ್ಲ.


Click it and Unblock the Notifications









