ಮಾರುತಿ ಆಟೋಮ್ಯಾಟಿಕ್ ರಿಟ್ಜ್ ವರ್ಷನ್‌ಗೆ ಸನ್ನದ್ಧರಾಗಿ!

By Nagaraja

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಜನಪ್ರಿಯ ರಿಟ್ಜ್ ಹ್ಯಾಚ್‌ಬ್ಯಾಕ್ ಸೌಲಭ್ಯದಡಿಯಲ್ಲಿ ಮಾರುತಿ ಆಟೋಮ್ಯಾಟಿಕ್ ರಿಟ್ಜ್ ವೆರಿಯಂಟ್ ಕಾರುಗಳನ್ನು ಬಿಡುಗಡೆ ಮಾಡಲು ಸನ್ನದ್ಧವಾಗಿದೆ. ಇದರಂತೆ ನೂತನ ಆಟೋಮ್ಯಾಟಿಕ್ ರಿಟ್ಜ್ ಕಾರಿನ ಬಗ್ಗೆ ಮಾಹಿತಿಯನ್ನು ಹೊರಗೆಡವಿದೆ.

ನಿಮ್ಮಲ್ಲೀಗ ಮಾರುತಿ ರಿಟ್ಜ್ ಆಟೋಮ್ಯಾಟಿಕ್ ವರ್ಷನ್ ಬಗ್ಗೆ ಹೆಚ್ಚು ತಿಳಿಯುವ ಕುತೂಹಲವಿದೆಯೇ..? ಹಾಗಿದ್ದರೆ ಬನ್ನಿ ಮಾರುತಿ ರಿಟ್ಜ್ ಆಟೋಮ್ಯಾಟಿಕ್ ಕಾರಿನ ಮೈಲೇಜ್, ದರ ಹಾಗೂ ಟೆಕ್ನಿಕಲ್ ಫೀಚರ್‌ಗಳ ಬಗ್ಗೆ ತಿಳಿಯೋಣ.

ಎಂಜಿನ್ ಮಾಹಿತಿ

ಎಂಜಿನ್ ಮಾಹಿತಿ

ಪರಿಷ್ಕೃತ ಮಾರುತಿ ರಿಟ್ಜ್ ಆಟೋಮ್ಯಾಟಿಕ್ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 83 ಬಿಎಚ್‌ಪಿ ಹಾಗೂ 114 ಎನ್‌ಎಂ ಟರ್ಕ್ಯೂ ಉತ್ಪಾದಿಸಲಿದೆ. ಈಗಾಗಲೇ ಲಭ್ಯವಿರುವ ಎ-ಸ್ಟಾರ್ ಹಾಗೂ ಸ್ವಿಫ್ಟ್ ಡಿಜೈರ್ ಮಾದರಿಗಳಂತೆಯೇ ಮಾರುತಿ ರಿಟ್ಜ್ ಆಟೋಮ್ಯಾಟಿಕ್ ಕಾರು ಸಹ 4 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ನಿಂದ ನಿಯಂತ್ರಿಸಲ್ಪಡಲಿದೆ.

ಕಲರ್ ವೆರಿಯಂಟ್

ಕಲರ್ ವೆರಿಯಂಟ್

ಮಾರುತಿ ಸುಜುಕಿ ಆಟೋಮ್ಯಾಟಿಕ್ ರಿಟ್ಜ್ ವಿಎಕ್ಸ್‌ಐ ವರ್ಷನ್‌ಗೆ ಯಾವುದೇ ನೂತನ ಫೀಚರ್‌ಗಳನ್ನು ಆಳವಡಿಸಲಾಗಿಲ್ಲ. ಆದರೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊರತುಪಡಿಸಿ ನೂತನ ಮೂರು ಕಲರ್ ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ಅವುಗಳೆಂದರೆ ಮಿಸ್ಟಿಕ್ಯೂ ರೆಡ್, ಬ್ರೀಜ್ ಬ್ಲ್ಯು ಹಾಗೂ ಗ್ರಾನೈಟ್ ಗ್ರೇ.

ಆಟೋಮ್ಯಾಟಿಕ್ ರಿಟ್ಜ್- ಮೈಲೇಜ್

ಆಟೋಮ್ಯಾಟಿಕ್ ರಿಟ್ಜ್- ಮೈಲೇಜ್

ಮಾರುತಿ ಸುಜುಕಿ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿರುವಂತೆಯೇ ಆಟೋಮ್ಯಾಟಿಕ್ ಗೇರ್ ಬಾಕ್ಸ್ ವಿಎಕ್ಸ್‌ಐ ವೆರಿಯಂಟ್‌ಗಳಲ್ಲಿ ಮಾತ್ರ ಲಭ್ಯವಿರಲಿದೆ. ಅಲ್ಲದೆ ಆಟೋಮ್ಯಾಟಿಕ್ ರಿಟ್ಜ್ ಪ್ರತಿ ಕಿಲೋ ಮೀಟರ್‌ಗೆ 17.6 ಮೈಲೇಜ್ ನೀಡಲಿದೆ. ಮಾರುತಿ ರಿಟ್ಜ್‌ನ ಮ್ಯಾನುವಲ್ ವೆರಿಯಂಟ್‌ಗೆ ಹೋಲಿಸಿದಾಗ (18.5kmpl) ಪರಿಷ್ಕೃತ ಆವೃತ್ತಿಯ ಮೈಲೇಜ್ ತುಂಬಾನೇ ಪರಿಣಾಮಕಾರಿಯೆನಿಸಿದೆ.

ಆಟೋಮ್ಯಾಟಿಕ್ ಗೇರ್ ಬಾಕ್ಸ್

ಆಟೋಮ್ಯಾಟಿಕ್ ಗೇರ್ ಬಾಕ್ಸ್

ಮ್ಯಾನುವಲ್ ವೆರಿಯಂಟ್‌ಗೆ ಹೋಲಿಸಿದಾಗ ಆಟೋಮ್ಯಾಟಿಕ್ ರಿಟ್ಸ್ ಭಾರವು 20 ಕಿಲೋ ಹೆಚ್ಚಿರುತ್ತದೆ. ಆಟೋಮ್ಯಾಟಿಕ್ ಗೇರ್ ಬಾಕ್ಸ್‌ನಿಂದಾಗಿ ಈ ಬದಲಾವಣೆ ಕಂಡುಬರಲಿದೆ.

ದರ ಮಾಹಿತಿ

ದರ ಮಾಹಿತಿ

ನಿರೀಕ್ಷಿತವೆಂಬಂತೆ ರಿಟ್ಜ್ ಆಟೋಮ್ಯಾಟಿಕ್ ಕಾರಿನ ದರ ಮಾಹಿತಿಯನ್ನು ಇದುವರೆಗೆ ಮಾರುತಿ ಸುಜುಕಿ ಕಂಪನಿ ಅಧಿಕೃತವಾಗಿ ಹೊರ ಹಾಕಿಲ್ಲ. ಆದರೆ ಮ್ಯಾನುವಲ್ ವಿಎಕ್ಸ್‌ಐ ಆವೃತ್ತಿಗಿಂತಲೂ ಮಾರುತಿ ಆಟೋಮ್ಯಾಟಿಕ್ ರಿಟ್ಜ್ 50 ಸಾವಿರದಷ್ಟು ದುಬಾರಿಯಾಗುವ ಸಾಧ್ಯತೆಯಿದೆ.

ಪ್ರಬಲ ಪ್ರತಿಸ್ಪರ್ಧಿ

ಪ್ರಬಲ ಪ್ರತಿಸ್ಪರ್ಧಿ

ಮಾರುತಿ ರಿಟ್ಜ್ ಆಟೋಮ್ಯಾಟಿಕ್ ಆಗಮನದೊಂದಿಗೆ ಹ್ಯುಂಡೈ ಐ10 ಆಟೋಮ್ಯಾಟಿಕ್ ಹಾಗೂ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಹೊಂಡಾ ಬ್ರಿಯೊ ಆಟೋಮ್ಯಾಟಿಕ್ ಮಾದರಿಗಳಿಗೆ ಕಠಿಣ ಪೈಪೋಟಿ ನೀಡುವ ನಿರೀಕ್ಷೆಯಿದೆ.

More from DriveSpark

Article Published On: Thursday, November 8, 2012, 13:14 [IST]
English summary
Maruti Suzuki is all set to launch an automatic variant of its popular Ritz hatchback. The leading Indian carmaker has updated its website with details about the upcoming automatic Ritz variant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+