ರಿಟ್ಜ್ ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದ ಮಾರುತಿ ಸುಜುಕಿ..!!

Written By:

ಜನಪ್ರಿಯ ಹ್ಯಾಚ್‌ಬ್ಯಾಕ್‌ ರಿಟ್ಜ್ ಕಾರನ್ನು ದೇಶದ ಅತಿದೊಡ್ಡ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಝುಕಿಯು ಇನ್ನು ಮುಂದೆ ಉತ್ಪಾದನೆ ಮಾಡದಿರುವ ನಿರ್ಧಾರ ಕೈಗೊಂಡಿದೆ.

ರಿಟ್ಜ್ ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದ ಮಾರುತಿ ಸುಜುಕಿ..!!

2009ರಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದ ರಿಟ್ಜ್ 4 ಲಕ್ಷಕ್ಕೂ ಹೆಚ್ಚು ಕಾರುಗಳು ಮಾರಾಟಗೊಳ್ಳುವ ಮೂಲಕ ದೇಶದ ಜನಪ್ರಿಯ ಹ್ಯಾಚ್ ಬ್ಯಾಕ್ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಮಾರುತಿ ರಿಟ್ಜ್ ಕಾರುಗಳು ಪೆಟ್ರೋಲ್ ಹಾಗೂ ಡಿಸೇಲ್ ಮಾದರಿಯಲ್ಲಿ ಲಭ್ಯವಿದ್ದವು.

ರಿಟ್ಜ್ ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದ ಮಾರುತಿ ಸುಜುಕಿ..!!

"ರಿಟ್ಜ್ ಕಾರುಗಳ ಮಾರಾಟ ಸ್ಥಗಿತಗೊಂಡರೂ ಮುಂದಿನ 10 ವರ್ಷಗಳ ಕಾಲ ಸರ್ವೀಸ್ ಹಾಗೂ ಅದರ ಬಿಡಿ ಭಾಗಗಳು ಲಭ್ಯವಿರಲಿವೆ" ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ರಿಟ್ಜ್ ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದ ಮಾರುತಿ ಸುಜುಕಿ..!!

ಇಗ್ನಿಸ್, ಸ್ವಿಫ್ಟ್, ಸೆಲೆರಿಯೋ, ಡಿಸೈರ್ ಮತ್ತು ಬಲೆನೋ ಮತ್ತಿತರ ಕಾರುಗಳನ್ನು ಮಾರುತಿ ಸುಜುಕಿ ದೇಶಿಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಗೆ ಬಿಡುಗಡೆಮಾಡಿದೆ.

ರಿಟ್ಜ್ ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದ ಮಾರುತಿ ಸುಜುಕಿ..!!

ಇದೆ ವರ್ಷದ ಜನವರಿ ತಿಂಗಳಿನ ಅಂಕಿ ಅಂಶದ ಪ್ರಕಾರ ಕಾಂಪ್ಯಾಕ್ಟ್ ವಿಭಾಗದಲ್ಲಿ ಮಾರುತಿ ಸುಜುಕಿ ಶೇಕಡ 25.2 ರಷ್ಟು ಮಾರಾಟ ಹೆಚ್ಚಿಸಿಕೊಂಡಿತ್ತು.

ರಿಟ್ಜ್ ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದ ಮಾರುತಿ ಸುಜುಕಿ..!!

ಮಾರುತಿ ಸುಜುಕಿ ಕಂಪನಿಯ ಜನಪ್ರಿಯತೆ ಹೆಚ್ಚಿಸುವಲ್ಲಿ ರಿಟ್ಜ್ ಮಾದರಿಯ ಕಾರುಗಳ ಕೊಡುಗೆಯೂ ಆಪಾರವಾಗಿದ್ದು ಕಂಪನಿಯ ಈ ನಿರ್ಧಾರ ರಿಟ್ಜ್ ಪ್ರಿಯರಿಗೆ ಕೊಂಚ ಮಟ್ಟಿಗೆ ಬೇಸರ ತರಿಸುವುದಂತೂ ಖಂಡಿತ.

ರಿಟ್ಜ್ ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದ ಮಾರುತಿ ಸುಜುಕಿ..!!

ಕಡಿಮೆ ಬೇಡಿಕೆ ಹೊಂದಿರುವ ಮಾರುತಿ ಸುಝುಕಿಯ ಮತ್ತೊಂದು ಪ್ರೀಮಿಯಂ ಕ್ರಾಸ್ಒವರ್ ಕಾರು ಎಸ್-ಕ್ರಾಸ್ ನ ಕೆಳ ಹಂತದ ಆವೃತಿಯ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ.

ರಿಟ್ಜ್ ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದ ಮಾರುತಿ ಸುಜುಕಿ..!!

ಕುಟುಂಬ ಸವಾರಿಗೆ ಸೂಕ್ತವಾಗಿರುವ ಜನಪ್ರಿಯ ಮಾರುತಿ ಸುಜುಕಿ ರಿಟ್ಜ್ ಕಾರಿಗೆ ಫೇಸ್ಬುಕ್ ನಲ್ಲಿ ದಾಖಲೆಯ 18 ಲಕ್ಷಕ್ಕಿಂತ ಹೆಚ್ಚು ಜನರು ಅಭಿಮಾನಿಗಳಿದ್ದಾರೆ.

ರಿಟ್ಜ್ ಕಾರಿನ ಉತ್ಪಾದನೆ ಸ್ಥಗಿತಗೊಳಿಸಿದ ಮಾರುತಿ ಸುಜುಕಿ..!!

ಕಂಪನಿಯು ರಿಟ್ಜ್ ಫ್ಯಾನ್ ಪುಟವನ್ನು ಕಳೆದ 2011 ಆಗಸ್ಟ್ ನಲ್ಲಿ ಆರಂಭಿಸಿತ್ತು. ಕಂಪನಿಯ ರಿಟ್ಜ್ ಕಾರನ್ನು ದಾಖಲೆ ಸಂಖ್ಯೆಯಲ್ಲಿ ಹತ್ತಿರ ಹತ್ತಿರ 2 ಮಿಲಿಯನ್ ಜನರು ಲೈಕ್ ಮಾಡಿರುವುದು ಕಾರಿನ ಜನಪ್ರಿಯತೆಗೆ ಹಿಡಿದ ಕೈಗನ್ನಡಿಯಾಗಿದೆ.

ಮಾರುತಿ ಸುಜುಕಿಯ ಮತ್ತೊಂದು ಕಾರು ಸ್ವಿಫ್ಟ್ ನ ಹೊಚ್ಚ ಹೊಸ 2017 ಆವೃತಿಯ ಚಿತ್ರಗಳನ್ನು ವೀಕ್ಷಿಸಿ.

Read more on ರಿಟ್ಜ್ ritz
English summary
India's leading car maker, Maruti Suzuki has stopped selling its popular hatchback, the Ritz in India and international markets.
Story first published: Monday, February 27, 2017, 11:30 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark