ಮಾರುತಿ ಸುಜುಕಿ ರಿಟ್ಜ್ ಎಲೇಟ್ ಆವೃತ್ತಿ ಬಿಡುಗಡೆ

Written By:

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಜನಪ್ರಿಯ ಮಾದರಿಗಳಲ್ಲಿ ಒಂದಾಗಿರುವ ರಿಟ್ಜ್ ಎಲೇಟ್ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ನೂತನ ರಿಟ್ಜ್ ಎಲೇಟ್ ಆವೃತ್ತಿಯು ಹೊರಗಡೆ ಆಕರ್ಷಕ ಮೈ ಬಣ್ಣ ಪಡೆಯಲಿದ್ದು, ಒಳಗಡೆಯೂ ಹೆಚ್ಚಿನ ವಿಶಿಷ್ಟತೆಗಳನ್ನು ಪಡೆಯಲಿದೆ. ಆದರೆ ಎಂಜಿನ್ ಮಾನದಂಡಗಳಲ್ಲಿ ವ್ಯತ್ಯಾಸವಿರುವುದಿಲ್ಲ. ಹಾಗಿದ್ದರೂ ಬೆಲೆಯ ಬಗ್ಗೆ ಸಂಸ್ಥೆಯಿಂದ ಯಾವುದೇ ಅಧಿಕೃತ ಮಾಹಿತಿಗಳು ಬಂದಿಲ್ಲ. ಇದು ಸಾಮಾನ್ಯ ಆವೃತ್ತಿಗಿಂತಲೂ 30ರಿಂದ 40 ಸಾವಿರ ರು.ಗಳಷ್ಟು ದುಬಾರಿಯೆನಿಸಲಿದೆ.

ಸಮಗ್ರ ಮಾಹಿತಿಗಾಗಿ ಚಿತ್ರದ ಮೇಲೆ ಮೌಸ್ ಆಡಿಸಿ

<iframe width="600" height="450" src="//www.thinglink.com/card/545558266743095297" type="text/html" frameborder="0"></iframe>

ವಿಶಿಷ್ಟತೆಗಳೇನು?

 • 2 ಡಿನ್ ಮ್ಯೂಸಿಕ್ ಸಿಸ್ಟಂ ಜೊತೆ ಸ್ಪೀಕರ್,
 • ಸೀಟ್ ಕವರ್,
 • ಬ್ಲೂಟೂತ್ ಸ್ಟಿರಿಯೋ ಮತ್ತು ಟೆಲಿಫೋನಿ ಕಿಟ್,
 • ರಿವರ್ಸ್ ಪಾರ್ಕಿಂಗ್ ಸೆನ್ಸಾರ್,
 • ಬಾಡಿ ಗ್ರಾಫಿಕ್ಸ್,
 • ಡೋರ್ ವೈಸರ್,
 • ಫ್ಲೋರ್ ಮ್ಯಾಟ್,
 • ಮಲ್ಟಿಪರ್ಪಸ್ ಬ್ಯಾಗ್,
 • ಆಂಬಿಯೆಂಟ್ ಲೈಟಿಂಗ್,
 • ನೆಕ್ ಕುಷನ್ಸ್,
 • ಸ್ಟೀರಿಂಗ್ ವೀಲ್ ಕವರ್,
 • ಮಡ್ ಫ್ಲಾಪ್ಸ್

ಎಂಜಿನ್

ಎರಡು ಎಂಜಿನ್ ಆಯ್ಕೆಗಳಲ್ಲಿ ರಿಟ್ಜ್ ಲಭ್ಯವಿರಲಿದೆ. ಇದರ 1.2 ಲೀಟರ್ 4 ಸಿಲಿಂಡರ್ ಕೆ ಸಿರೀಸ್ ಪೆಟ್ರೋಲ್ ಎಂಜಿನ್ 85 ಅಶ್ವಶಕ್ತಿ (113 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಅಂತೆಯೇ 1.3 ಲೀಟರ್ 4 ಸಿಲಿಂಡರ್ ಫಿಯೆಟ್ ಮಲ್ಟಿಜೆಟ್ ಡೀಸೆಲ್ ಎಂಜಿನ್ 75 ಅಶ್ವಶಕ್ತಿ (190 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇವೆರಡು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ. ಅಂತೆಯೇ ಪೆಟ್ರೋಲ್ ನಿಯಂತ್ರಿತ ರಿಟ್ಜ್, 4 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲೂ ಲಭ್ಯವಾಗಲಿದೆ.

ದರ ಮಾಹಿತಿ

ರಿಟ್ಜ್ ಪೆಟ್ರೋಲ್ ಹಾಗೂ ಡೀಸೆಲ್ ಸಾಮಾನ್ಯ ಆವೃತ್ತಿಗಳ ದೆಹಲಿ ಎಕ್ಸ್ ಶೋ ರೂಂ ದರಗಳು ಅನುಕ್ರಮವಾಗಿ 4.23 ಹಾಗೂ 5.27 ಲಕ್ಷ ರು.ಗಳಾಗಿದೆ. ಪ್ರಸ್ತುತ 65,000 ರು.ಗಳ ಡಿಸ್ಕೌಂಟ್ ( ರು. 30,000 ರಿಯಾಯಿತಿ, ರು. 35,000 ಎಕ್ಸ್‌ಚೇಂಜ್ ಬೋನಸ್) ಕೂಡಾ ನೀಡಲಾಗುತ್ತದೆ.

English summary
Maruti Suzuki Launches Ritz Elate Edition in India

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark