ಮಾರುತಿ ಆಲ್ಟೊ 800 ಮೈಲೇಜ್ ಮಾಹಿತಿ ಬಹಿರಂಗ
ಅಕ್ಟೋಬರ್ 16ರಂದು ದೇಶದ ರಸ್ತೆಗೆ ಆಗಮಿಸಲಿರುವ ನೂತನ ಮಾರುತಿ ಸುಜುಕಿ ಆಲ್ಟೊ 800 ಕಾರಿನ ಮೈಲೇಜ್ ಮಾಹಿತಿ ಬಹಿರಂಗವಾಗಿದೆ. ನೂತನ ಆಲ್ಟೊ 800 ಕಾರು ಪ್ರತಿಲೀಟರಿಗೆ 22.74 ಕಿ.ಮೀ. ಮೈಲೇಜ್ ನೀಡಲಿದೆಯಂತೆ. ಇದು ARAI ಪ್ರಮಾಣೀಕೃತ ಮೈಲೇಜ್.
ಮಾರುತಿ ಸುಜುಕಿ ಆಲ್ಟೊ 800 ಬಹುನಿರೀಕ್ಷಿತ ಕಾರು. ಇದು ಕಂಪನಿಯ ಪಾಲಿಗೆ ಮಹತ್ವದ ಕಾರು ಕೂಡ ಹೌದು. ಇದು ಕಂಪನಿಯ ಮಾರಾಟದ ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸುವ ನಿರೀಕ್ಷೆಯಿದೆ. ಆಲ್ಟೊ 800 ಆಕರ್ಷಕ ಮೈಲೇಜ್ ಮಾರಾಟ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು ನಿಚ್ಚಳವಾಗಿದೆ.
ದೇಶದಲ್ಲಿ ಎಂಟ್ರಿ ಲೆವೆಲ್ ಕಾರು ಖರೀದಿಸುವರಿಗೆ ಕಾರಿನ ಮೈಲೇಜ್ ಪ್ರಮುಖ ಅಂಶ. ಆಲ್ಟೊ 800 ಕಾರಿನ 22.74 ಮೈಲೇಜ್ ಖಂಡಿತವಾಗಿಯು ನಿರಾಶೆ ಪಡುವ ಮೈಲೇಜ್ ಅಲ್ಲ. ಕಂಪನಿಯು ಈ ಸಣ್ಣಕಾರಿಗೆ ಸಾಕಷ್ಟು ಸಂಶೋಧನೆ ಮಾಡಿ ಎಂಜಿನ್ ಅಭಿವೃದ್ಧಿಪಡಿಸಿತ್ತು.
ಮಾರುತಿ ಸುಜುಕಿ ಕಂಪನಿಯು ನೂತನ ಆಲ್ಟೊ 800 ಕಾರಿನ ಕೊಂಚ ಕೊಂಚ ಮಾಹಿತಿ ಬಹಿರಂಗ ಪಡಿಸಲು ಪ್ರಾರಂಭಿಸಿದೆ. ಇಂತಹ ಪುಟ್ಟ ಪುಟ್ಟ ಮಾಹಿತಿಗಳು ಗ್ರಾಹಕರಲ್ಲಿ ಹೆಚ್ಚು ನಿರೀಕ್ಷೆ ಹುಟ್ಟಿಸಬಲ್ಲದು.


Click it and Unblock the Notifications









