ಮಾರುತಿ ಎರ್ಟಿಗಾ: ಏಪ್ರಿಲ್ 12ಕ್ಕೆ ಬರೋದು ಖಾತ್ರಿ
ಮಾರುತಿ ಸುಜುಕಿ ಎರ್ಟಿಗಾ ದರ 7-9 ಲಕ್ಷ ರುಪಾಯಿ ಆಸುಪಾಸಿನಲ್ಲಿರಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಯಲ್ಲಿ ದೊರಕುವ ಎರ್ಟಿಗಾ ಆರು ಆವೃತ್ತಿಗಳಲ್ಲಿ ರಸ್ತೆಗಿಳಿಯಲಿದೆ. ಇದು ಡೀಸೆಲ್ ಎಂಜಿನ್ ಮೂಲಕ ಆಗಮಿಸುವ ಮಾರುತಿಯ ಮೊದಲ ಎಂಪಿವಿ ಕಾರಾಗಿದೆ.
ಇದಕ್ಕೂ ಮೊದಲು ಕಂಪನಿಯು ಎಕೊ ಮತ್ತು ವೆರ್ಸಾ ಎಂಬೆರಡು ಎಂಪಿವಿ ಪರಿಚಯಿಸಿತ್ತು. ಆದರೆ ದುರಾದೃಷ್ಟವಶಾತ್ ಇದು ಅಷ್ಟೇನೂ ಯಶಸ್ವಿಯಾಗಿರಲಿಲ್ಲ. ಆದರೆ ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳಲ್ಲಿ ದೊರಕುವ ನೂತನ ಎರ್ಟಿಗಾ ಕುರಿತು ಕಂಪನಿ ಸಾಕಷ್ಟು ನಿರೀಕ್ಷೆಯನ್ನಿಟ್ಟಿದೆ.
"2005ರಲ್ಲಿ ಪರಿಚಯಿಸಿದ ಸ್ವಿಫ್ಟ್ ಪ್ರೀಮಿಯಂ ಹ್ಯಾಚ್ ಬ್ಯಾಕ್ ಲೋಕದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿತ್ತು. ನಾವು ತಿಂಗಳಿಗೆ 2 ಸಾವಿರದಷ್ಟು ಸ್ವಿಫ್ಟ್ ಮಾರಾಟವಾಗುವ ನಿರೀಕ್ಷೆಯಲ್ಲಿದ್ದೇವು. ಆದರೆ ನಮ್ಮೆಲ್ಲ ನಿರೀಕ್ಷೆ ತಲೆಕೆಳಗಾಗುವಂತೆ ಲಕ್ಷಕ್ಕೂ ಮೇಲ್ಪಟ್ಟು ಸ್ವಿಫ್ಟ್ ಬುಕ್ಕಿಂಗ್ ಆಗಿದೆ" ಎಂದು ಮಾರುತಿ ಸುಜುಕಿ ಮಾರುಕಟ್ಟೆ ವಿಭಾಗದ ಕಾರ್ಯನಿರ್ವಹಣಾಧಿಕಾರಿ ಮಾಯಂಕ್ ಪಾರೇಕ್ ಹೇಳಿದ್ದಾರೆ.
"ನೂತನ ಎರ್ಟಿಗಾ ಕೂಡ ಅತ್ಯುತ್ತಮ ಬೇಡಿಕೆ ಪಡೆದುಕೊಳ್ಳುವ ನಿರೀಕ್ಷೆಯಿದೆ" ಎಂದು ಅವರು ಹೇಳಿದ್ದಾರೆ.
ಎರ್ಟಿಗಾ ಕಾರು ಔಪಚಾರಿಕವಾಗಿ ರಸ್ತೆಗಿಳಿಯುವ ಮೊದಲೇ ಬುಕ್ಕಿಂಗ್ ಆರಂಭವಾಗುವ ನಿರೀಕ್ಷೆಯಿದೆ. ನೀವು ಎರ್ಟಿಗಾ ಕಾರನ್ನು ಖರೀದಿಸಲು ಬಯಸಿದ್ದರೆ ಈಗಲೇ ಹತ್ತಿರದ ಮಾರುತಿ ಶೋರೂಂಗೆ ಹೋಗಿ ವಿಚಾರಿಸುವುದು ಒಳಿತು.
ಯಾವುದಕ್ಕೂ ಮೊದಲು ಮಾರುತಿ ಸುಜುಕಿ ಎರ್ಟಿಗಾ ಸಂಪೂರ್ಣ ವಿಮರ್ಶೆ ಓದಿರಿ>>


Click it and Unblock the Notifications









