ಕ್ಷೈಲೊ, ಇನ್ನೋವಾಕ್ಕೆ ನಡುಕ: ಎರ್ಟಿಗಾಕ್ಕೆ ದಾರಿಬಿಡಿ

ಮಾರುತಿ ಸುಜುಕಿ ಕಂಪನಿಯ ನೂತನ ಎಂಪಿವಿ "ಎರ್ಟಿಗಾ" ಇಂದು(ಏ 12)ರಂದು ರಸ್ತೆಗಿಳಿಯಲಿದೆ. ದೇಶದ ರಸ್ತೆಗೆ ಸೂಕ್ತವಾಗುವಂತೆ ಹೊಸ ಎಂಪಿವಿಯನ್ನು ಕಂಪನಿ ಅಭಿವೃದ್ಧಿಪಡಿಸಿದೆ. ಈ ಕಾರಿನ ಕುರಿತು ಗ್ರಾಹಕರಲ್ಲಿ ಈಗಾಗಲೇ ಹೈಪ್ ಕ್ರಿಯೇಟ್ ಆಗಿದೆ. ಕಂಪನಿಯು ಎರ್ಟಿಗಾ ಪರಿಚಯಿಸಿದ ಆರಂಭದ ತಿಂಗಳಲ್ಲಿ ಸುಮಾರು 4-5 ಸಾವಿರ ಯುನಿಟ್ ಮಾರಾಟ ಮಾಡುವ ನಿರೀಕ್ಷೆಯನ್ನು ಹೊಂದಿದೆ.

ಕಂಪನಿಯು ಏಷ್ಯಾ ಮಾರುಕಟ್ಟೆಗಾಗಿ ಎರ್ಟಿಗಾ ಅಭಿವೃದ್ಧಿಪಡಿಸಿದೆ. ಸುಜುಕಿ ಮಾತೃಭೂಮಿ ಜಪಾನಿನಲ್ಲಿ ಈ ಎಂಪಿವಿ ಮಾರಾಟ ಮಾಡದಿರಲು ಕಂಪನಿ ನಿರ್ಧರಿಸಿದೆ. ನೂತನ ಮಾರುತಿ ಸುಜುಕಿ ಎರ್ಟಿಗಾ ಕಾರು 5 ಸೀಟು ಮತ್ತು 7 ಸೀಟು ಆಯ್ಕೆಗಳಲ್ಲಿ ದೊರಕಲಿದೆ.

ರಿಟ್ಜ್ ಕಾರಿನ ಮುಂದುವರೆದ ಪ್ಲಾಟ್‌ಫಾರ್ಮ್‌ನಲ್ಲಿ ನೂತನ ಎರ್ಟಿಗಾವನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ದರ ಸುಮಾರು 7-9 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ಹೀಗಾಗಿ ಈ ಕಾರು ಇನ್ನೋವಾ ಮತ್ತು ಮಹೀಂದ್ರ ಕ್ಷೈಲೊ ಜೊತೆ ಪೈಪೋಟಿ ಮಾಡುವ ನಿರೀಕ್ಷೆಯಿದೆ.

ಇನ್ನೋವಾ ಆರಂಭಿಕ ದರ 9 ಲಕ್ಷ ರುಪಾಯಿ ಇದೆ. ಎರ್ಟಿಗಾ ದರವೆಲ್ಲಾದರೂ 7 ಲಕ್ಷ ಆಜುಬಾಜಿನಲ್ಲಿದ್ದರೆ ಇನ್ನೋವಾ ಮಾರುಕಟ್ಟೆಗೆ ಹೊಡೆತ ನೀಡುವುದರಲ್ಲಿ ಸಂದೇಹವೇ ಇಲ್ಲ. ಇನ್ನೋವಾ ಮತ್ತು ಕ್ಷೈಲೊಗಿಂತ ಎರ್ಟಿಗಾ ಸಣ್ಣಗಾತ್ರದಲ್ಲಿ ಬರುವ ಕಾರಣ ಸಿಟಿ ರಸ್ತೆಯಲ್ಲಿ ಸವಾರಿ ಮಾಡಲು ಸುಲಭವಾಗಲಿದೆ. ಎರ್ಟಿಗಾ ಸಣ್ಣಗಾತ್ರವಿರಲಿದೆ ಎಂದಾಕ್ಷಣ ಸಣ್ಣ ಇಂಟಿರಿಯರ್ ಹೊಂದಿರಲಿದೆ ಎಂದು ಭಾವಿಸಬೇಕಿಲ್ಲ. ಈ ಕಾರಿನಲ್ಲಿ ಏಳು ಜನರು ಆರಾಮವಾಗಿ ಕುಳಿತುಕೊಳ್ಳಬಹುದಂತೆ.

ನೂತನ ಎರ್ಟಿಗಾ ಡೀಸೆಲ್ ಎಂಜಿನ್ ಕಾರು ಪ್ರತಿಲೀಟರಿಗೆ ಸುಮಾರು 20.77 ಲೀಟರ್ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ.ಎರ್ಟಿಗಾ 1.4 ಲೀಟರಿನ ಕೆ ಸೀರಿಸ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲೂ ದೊರಕಲಿದೆ. ಇದು 94 ಅಶ್ವಶಕ್ತಿ ಮತ್ತು 130 ಎನ್ಎಂ ಟಾರ್ಕ್ ಪವರ್ ನೀಡಲಿದೆ. ಎರ್ಟಿಗಾ ಪೆಟೋಲ್ ಎಂಪಿವಿ ಲೀಟರಿಗೆ 16.02 ಕಿ.ಮೀ. ಮೈಲೇಜ್ ನೀಡಲಿದೆ.

ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ನ ಎರ್ಟಿಗಾ 5 ಸ್ಪೀಡಿನ ಮ್ಯಾನುಯಲ್ ಟ್ರಾನ್ಷ್‌ಮಿಷನ್ ಹೊಂದಿರಲಿವೆ. ಇವತ್ತು ಅಂದರೆ ಏಪ್ರಿಲ್ ಹನ್ನೆರಡರಂದು ಸಂಜೆ ಏಳುಗಂಟೆಗೆ ಮಾರುತಿ ಸುಜುಕಿ ಎರ್ಟಿಗಾ ರಸ್ತೆಗಿಳಿಯಲಿದೆ. ತಾಜಾ ಮಾಹಿತಿಗಳಿಗಾಗಿ ಕನ್ನಡ ಡ್ರೈವ್‌ಸ್ಪಾರ್ಕ್ ನೋಡುತ್ತಿರಿ. ನಮಸ್ಕಾರ.

More from DriveSpark

Article Published On: Thursday, April 12, 2012, 10:33 [IST]
English summary
Maruti Suzuki Ertiga: Get The Family Pack. Interestingly, the Ertiga will have a diesel engine under its bonnet which the carmaker claim is very frugal with a mileage of 20.77 kmpl. The MPV which is expected to be priced between Rs 7-9 lakhs will compete with the likes of Toyota Innova, the segment leader and
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+