ಮಾರುತಿ ಸುಜುಕಿ ಎರ್ಟಿಗಾ ಡೆಲಿವರಿ ಕೊಲವರಿ

ಮಾರುತಿ ಸುಜುಕಿ ಕಂಪನಿಯ ಎರ್ಟಿಗಾ ಝಡ್‌ಡಿಐ ಬುಕ್ಕಿಂಗ್ ಮಾಡಿರುವ ಹೆಚ್ಚಿನ ಜನರು ತಲೆ ಮೇಲೆ ಕೈಯಿಟ್ಟು ಕುಳಿತಿರಬಹುದು. ಯಾಕೆಂದರೆ ಮಾರುತಿ ಎರ್ಟಿಗಾ ಝಡ್‌ಡಿಐ ಆವೃತ್ತಿಯ ವೇಟಿಂಗ್ ಪಿರೆಯಿಡ್ ಅನಿರ್ಧಿಷ್ಟ ಸಮಯಕ್ಕೆ ತಲುಪಿದೆ.

ಮಾರುತಿ ಸುಜುಕಿ ಎರ್ಟಿಗಾ ಎಂಪಿವಿಗೆ ಆರಂಭದಿಂದಲೇ ಅತ್ಯಧಿಕ ಬೇಡಿಕೆಯಿದೆ. ಅದರಲ್ಲೂ ಹೆಚ್ಚಿನ ಜನರು ಟಾಪ್ ಎಂಡ್ ಆವೃತ್ತಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಪೆಟ್ರೋಲ್ ದರ ದುಬಾರಿಯಾದ ನಂತರ ಡೀಸೆಲ್ ಎರ್ಟಿಗಾ ಬೇಡಿಕೆಯು ಗಮನಾರ್ಹವಾಗಿ ಏರಿಕೆ ಕಂಡಿದೆ. ಅಂದರೆ ಮಾರುತಿ ಸುಜುಕಿ ಎರ್ಟಿಗಾ ಟಾಪ್ ಎಂಡ್ ಆವೃತ್ತಿಗಳಾದ ಝಡ್ ಡಿಐ ಮತ್ತು ಝಡ್ಎಕ್ಸ್ಐ ಆವೃತ್ತಿಗಳಿಗೆ ಅತ್ಯಧಿಕ ಬೇಡಿಕೆಯಿದೆ.

ಮಾರುತಿ ಸುಜುಕಿ ಎರ್ಟಿಗಾ ಬೇಸ್ ಮತ್ತು ಮಧ್ಯಮ ಆವೃತ್ತಿಗಳ ವೇಟಿಂಗ್ ಪಿರೆಯಿಡ್ ಮೂರರಿಂದ ನಾಲ್ಕು ತಿಂಗಳಷ್ಟಿದೆ. ಆದರೆ ಟಾಪ್ ಎಂಡ್ ಝಡ್ಎಕ್ಸ್ಐ ಪೆಟ್ರೋಲ್ ಎರ್ಟಿಗಾ ವೇಟಿಂಗ್ ಪಿರೆಯಿಡ್ ಸುಮಾರು 6 ತಿಂಗಳಷ್ಟಿದೆ. ಡೀಸೆಲ್ ಆವೃತ್ತಿ ಎರ್ಟಿಗಾ ವೇಟಿಂಗ್ ಪಿರೆಯಿಡ್ ಅನಿರ್ಧಿಷ್ಟ ಅವಧಿಗೆ ಮುಂದೂಡಲ್ಪಟ್ಟಿದೆ.

ಮಾರುತಿ ಸುಜುಕಿ ಎರ್ಟಿಗಾ ರಸ್ತೆಗಿಳಿದ ಸಮಯದಲ್ಲಿ ಝಡ್ ಡಿಐ ಆವೃತ್ತಿಯ ವೇಟಿಂಗ್ ಪಿರೆಯಿಡ್ ಕೇವಲ ಆರು ವಾರವಾಗಿತ್ತು. ಆದರೆ ತದನಂತರ ಝ‌ಡಿಐ ಆವೃತ್ತಿಗೆ ಅಸಂಖ್ಯಾತ ಗ್ರಾಹಕರ ಬೇಡಿಕೆಯಿಟ್ಟಿದ್ದು, ವೇಟಿಂಗ್ ಪಿರೆಯಿಡ್ ಹೆಚ್ಚಾಗಿದೆ. ನೂತನ ಎರ್ಟಿಗಾ ಟಾಪ್ ಎಂಡ್ ಆವೃತ್ತಿಯ ಅಲಾಯ್ ವೀಲ್ ಪೂರೈಕೆ ಕೊರತೆಯೂ ಡೆಲಿವರಿ ತಡವಾಗಲು ಕಾರಣವೆಂಬ ವದಂತಿಗಳಿವೆ. ಈ ಕುರಿತು ಕಂಪನಿ ಯಾವುದೇ ಮಾಹಿತಿ ನೀಡಲು ನಿರಾಕರಿಸಿದೆ.

Article Published On: Thursday, June 7, 2012, 16:07 [IST]
English summary
Maruti ertiga top variant delivery might be delayed due to alloy wheel shortage. This reason forced to Maruti is unable to cope with demand and has put an indefinite waiting period for the top end diesel ZDi variant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+