ಮಾರುತಿ ಎರ್ಟಿಗಾ ವೇಟಿಂಗ್ ಪಿರೇಡ್ ಆರು ತಿಂಗ್ಳಂತೆ!
ದೇಶದ ರಸ್ತೆಗೆ ಇತ್ತೀಚೆಗೆ ಆಗಮಿಸಿದ ಮಾರುತಿ ಸುಜುಕಿ ಎರ್ಟಿಗಾ ಬೇಡಿಕೆ ಹೆಚ್ಚಾಗುತ್ತಿದೆ. ಈಗಾಗಲೇ ಸುಮಾರು 40 ಸಾವಿರದಷ್ಟು ಗ್ರಾಹಕರು ಎರ್ಟಿಗಾ ಬುಕ್ಕಿಂಗ್ ಮಾಡಿದ್ದಾರೆ ಎಂದು ಕಂಪನಿಯ ಮೂಲಗಳು ತಿಳಿಸಿವೆ. ಬೇಡಿಕೆ ಹೆಚ್ಚಾದಂತೆ ಇದರ ವೇಟಿಂಗ್ ಪಿರೆಯಿಡ್ ಕೂಡ ಹೆಚ್ಚಾಗುವ ನಿರೀಕ್ಷೆಯಿದೆ. ಒಂದು ಮೂಲದ ಪ್ರಕಾರ ಎರ್ಟಿಗಾ ವೇಟಿಂಗ್ ಪಿರೆಯಿಡ್ ಆರು ತಿಂಗಳಿಗಿಂತಲೂ ಹೆಚ್ಚಾಗಲಿದೆಯಂತೆ!
ಮಾರುತಿ ಸುಜುಕಿ ಕಂಪನಿಯು 1.4 ಲೀಟರ್ ಕೆ ಸೀರಿಸ್ ಪೆಟ್ರೋಲ್ ಎಂಜಿನ್ ಮತ್ತು 1.3 ಲೀಟರ್ ಮಲ್ಟಿ ಜೆಟ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಎರ್ಟಿಗಾ ಕಾರನ್ನು ಪರಿಚಯಿಸಿದೆ. ಇದರಲ್ಲಿ ಪೆಟ್ರೋಲ್ ಆವೃತ್ತಿಯು 94 ಅಶ್ವಶಕ್ತಿ ಮತ್ತು ಡೀಸೆಲ್ ಎಂಜಿನ್ 90 ಅಶ್ವಶಕ್ತಿ ನೀಡುತ್ತದೆ. ಎರ್ಟಿಗಾ ಎಕ್ಸ್ ಶೋರೂಂ ದರ ಸುಮಾರು 6.12 ಲಕ್ಷ ರು.ನಿಂದ ಆರಂಭವಾಗುತ್ತದೆ.
ಎರ್ಟಿಗಾ ಬುಕ್ಕಿಂಗ್ ಸುಮಾರು 40 ಸಾವಿರಕ್ಕಿಂತಲೂ ಹೆಚ್ಚಾಗಿದೆ. ಅದರಲ್ಲೂ ಡೀಸೆಲ್ ಎಂಜಿನ್ ಎರ್ಟಿಗಾಕ್ಕೆ ಸಖತ್ ಬೇಡಿಕೆಯಿದೆಯೆಂದು ಕಂಪನಿ ಹೇಳಿದೆ. ಡೀಸೆಲ್ ಎರ್ಟಿಗಾ ಕಾರುಗಳ ವೇಟಿಂಗ್ ಪಿರೆಯಿಡ್ ಆರು ತಿಂಗಳಿಗಿಂತಲೂ ಹೆಚ್ಚಾಗಲಿದೆ. ವೇಟಿಂಗ್ ಪಿರೆಯಿಡ್ ಹೆಚ್ಚಾದರೆ ಎರ್ಟಿಗಾ ಬೇಡಿಕೆ ತುಸು ಕಡಿಮೆಯಾಗುವ ನಿರೀಕ್ಷೆಯಿದೆ.
ಮಾರುತಿ ಸುಜುಕಿ ಎರ್ಟಿಗಾ ದರ ಕಡಿಮೆಯಿರುವುದು ಬುಕ್ಕಿಂಗ್ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಟೊಯೊಟಾ ಕಂಪನಿಯ ಇನ್ನೋವಾಕ್ಕೆ ಹೋಲಿಸಿದರೆ ಎರ್ಟಿಗಾ ದರ ತೀರಾ ಕಮ್ಮಿ ಎನ್ನಬಹುದು. ಮಾರುತಿ ಸುಜುಕಿ ಕಂಪನಿಯ ಮಾಸಿಕ ಉತ್ಪಾದನಾ ಸಾಮರ್ಥ್ಯ ಕೇವಲ 6 ಸಾವಿರ ಯುನಿಟ್ ಇದೆ. ಬೇಡಿಕೆ ಹೆಚ್ಚಿದಂತೆ ವೇಟಿಂಗ್ ಪಿರೆಯಿಡ್ ಹೆಚ್ಚಿಸುವುದು ಕಂಪನಿಯ ಪಾಲಿಗೆ ಅನಿವಾರ್ಯ.


Click it and Unblock the Notifications









