ಮಾರುತಿ ಸುಜುಕಿ ಎರ್ಟಿಗಾ: ವಿಡಿಯೋ ನೋಡಿರಿ

ಹೊಸ ಎರ್ಟಿಗಾ ಎಂಪಿವಿ ಪರಿಚಯಿಸಲು ಮಾರುತಿ ಸುಜುಕಿ ಭರ್ಜರಿಯಾಗಿ ಸಿದ್ಧತೆ ನಡೆಸುತ್ತಿದೆ. ಇದೀಗ ಕಂಪನಿಯು ಎರ್ಟಿಗಾ ಕಾರಿಗಾಗಿ ವಿಶೇಷ ವೆಬ್ ಸೈಟ್ ಪರಿಚಯಿಸಿದೆ. ಅಂದ ಹಾಗೆ ನೂತನ ಮಾರುತಿ ಸುಜುಕಿ ಎರ್ಟಿಗಾ ಏಪ್ರಿಲ್ 12ರಂದು ದೇಶದ ರಸ್ತೆಗಿಳಿಯಲಿದೆ.

ಕಂಪನಿಯ ಪ್ರಕಾರ ಎರ್ಟಿಗಾ ಅಂದರೆ ಜೀವನಶೈಲಿ ಅವಶ್ಯಕತೆಯ ವಾಹನ. ಇದನ್ನು ಎಂಪಿವಿ ಎನ್ನುವುದಕ್ಕಿಂತ ಎಲ್‌ಯುವಿ ಎನ್ನಬಹುದು ಎಂದು ಕಂಪನಿ ಹೇಳಿದೆ. ಈಗಾಗಲೇ ಕಂಪನಿಯು ಎರ್ಟಿಗಾ ಕಾರಿನ ಟೆಲಿವಿಷನ್ ಜಾಹೀರಾತು ಬಿಡುಗಡೆ ಮಾಡಿದೆ. ಇದನ್ನು ನೀವು ಟಿವಿಯಲ್ಲಿ ನೋಡಿರುತ್ತೀರಿ. ವಿಶೇಷವೆಂದರೆ ಈ ಜಾಹೀರಾತಿನಲ್ಲಿ ಎಲ್ಲೂ ಎರ್ಟಿಗಾ ಕಾರನ್ನೇ ತೋರಿಸಲಾಗಿಲ್ಲ.

ವೆಬ್ ಪುಟದಲ್ಲೂ ಎರ್ಟಿಗಾ ಬಗ್ಗೆ ಹೆಚ್ಚೇನೂ ಹೇಳಲಾಗಿಲ್ಲ. ಶೀಘ್ರದಲ್ಲಿ ನಿರೀಕ್ಷಿಸಿ ಎಂಬ ಒಕ್ಕಣೆ ವೆಬ್‌ಸೈಟ್‌ನಲ್ಲಿ ಸ್ವಾಗತಿಸುತ್ತದೆ. ಕಂಪನಿಯ ಎರ್ಟಿಗಾ ಕಾರು ರಸ್ತೆಗಿಳಿಯುವ ಮುನ್ನವೇ ಹೈಪ್ ಕ್ರಿಯೆಟ್ ಮಾಡಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ವಾಹನ ಪ್ರದರ್ಶನದಲ್ಲೂ ಇದನ್ನು ಪ್ರದರ್ಶಿಸಲಾಗಿತ್ತು.

ಮಾರುತಿ ಸುಜುಕಿ ಎರ್ಟಿಗಾ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ. ಪೆಟ್ರೋಲ್ ಆವೃತ್ತಿಯು ಕೆ ಸರಣಿಯ ವಿವಿಟಿ ಎಂಜಿನ್ ಹೊಂದಿದೆ. ಡೀಸೆಲ್ ಆವೃತ್ತಿಯು 1.3 ಲೀಟರಿನ ಸೂಪರ್ ಟರ್ಬೊ ಡಿಡಿಐಎಸ್ ಎಂಜಿನ್ ಹೊಂದಿದೆ.

ನೂತನ ಎರ್ಟಿಗಾ ಕಾರಿನ ಬಗ್ಗೆ ತಿಳಿಯಲು ಕಂಪನಿಯ ವೆಬ್ ಪುಟ www.marutisuzukiertiga.comಗೆ ಭೇಟಿ ನೀಡಬಹುದು. (ಕನ್ನಡ ಡ್ರೈವ್‌‌ಸ್ಪಾರ್ಕ್)

ಜಾಹೀರಾತು ವಿಡಿಯೋ ತುಣುಕು ನೋಡಿ

More from DriveSpark

Article Published On: Tuesday, April 10, 2012, 12:24 [IST]
English summary
Maruti Suzuki is preparing for its latest model launch by using innovative ways. The carmaker has launched a teaser website exclusively for the Ertiga. The Ertiga is scheduled to be launched on 12th April bringing to a close a long drawn process of bringing out Maruti Suzuki's long awaited MPV or rather LUV a
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+