ಮಾರುತಿ ಸುಜುಕಿ ಮೇಲೆ ಕೇಸ್ ಹಾಕಿದ ಕಾರ್ಮಿಕ ಇಲಾಖೆ

ಮಾನೆಸರ್ ಘಟಕದಲ್ಲಿ ಮಾರುತಿ ನೌಕರರ ಗುತ್ತಿಗೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಹರ್ಯಾಣದ ಕಾರ್ಮಿಕ ಇಲಾಖೆಯು ಮಾರುತಿ ಸುಜುಕಿ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಿದೆ. ನೌಕರರ ಸಮಸ್ಯೆ ಬಗೆ ಹರಿಸಲು ಎರಡು ಸಮಿತಿಗಳನ್ನು ಮಾಡುವಂತೆ ಸೂಚಿಸಿದ್ದರೂ, ಮಾರುತಿ ಸುಜುಕಿ ಇಲ್ಲಿವರೆಗೆ ಸಮಿತಿಗಳನ್ನು ನಿರ್ಮಿಸಿಲ್ಲ ಎಂದು ಕಾರ್ಮಿಕ ಇಲಾಖೆಯು ನ್ಯಾಯಾಲಯದಲ್ಲಿ ಆಪಾದಿಸಿದೆ.

ಕಳೆದ ವರ್ಷ ಆಕ್ಟೊಬರ್ ನಲ್ಲಿ ಮಾರುತಿ ಸುಜುಕಿ ಮತ್ತು ಮುಷ್ಕರ ನಿರತ ನೌಕರರ ನಡುವೆ ಕಾರ್ಮಿಕ ಇಲಾಖೆಯು ಮಧ್ಯವರ್ತಿಯಾಗಿ ವರ್ತಿಸಿ ಬಿಕ್ಕಟ್ಟು ಬಗೆಹರಿಸಲು ಯತ್ನಿಸಿತ್ತು. ಮಾರುತಿ ನೌಕರರು ಸುಮಾರು 2 ತಿಂಗಳ ಕಾಲ ಪ್ರತಿಭಟನೆ ನಡೆಸಿದ್ದರು. ಇದರಿಂದ ಮಾರುತಿ ಸುಜುಕಿಗೆ ಅಪಾರ ಪ್ರಮಾಣದ ನಷ್ಟವುಂಟಾಗಿತ್ತು.

ನೌಕರರ ಬೇಡಿಕೆಗಳಿಗೆ ಮಾರುತಿ ಸುಜುಕಿ ಅಸ್ತು ಹೇಳಿದ ನಂತರ ನೌಕರರು ಪ್ರತಿಭಟನೆ ಕೈಬಿಟ್ಟಿದರು. ನೌಕರರ ಕುಂದುಕೊರತೆ ಪರಿಶೀಲಿಸಲು ಸಮಿತಿ ರಚಿಸುವುದಾಗಿ ಆ ಸಮಯದಲ್ಲಿ ಮಾರುತಿ ಸುಜುಕಿ ತಿಳಿಸಿತ್ತು. ಈ ಎರಡೂ ಕಮಿಟಿಗಳನ್ನು ಇಲ್ಲಿವರೆಗೆ ಮಾರುತಿ ಸುಜುಕಿ ಸ್ಥಾಪಿಸಿಲ್ಲವೆಂದು ನೌಕರರ ಸಂಘವು ಆಪಾದಿಸಿತ್ತು. ಈ ಕುರಿತು ಕಾರ್ಮಿಕ ಇಲಾಖೆಯು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

ಮಾರುತಿ ಸುಜುಕಿ ವಿರುದ್ಧ ದಾವೆ ಹೂಡಿರುವುದನ್ನು ಹರ್ಯಾಣದ ಕಾರ್ಮಿಕ ಇಲಾಖೆಯು ಖಚಿತಪಡಿಸಿದೆ. ಈ ಕುರಿತು ಯಾವುದೇ ಹೇಳಿಕೆ ನೀಡಲು ಮಾರುತಿ ಸುಜುಕಿ ನಿರಾಕರಿಸಿದೆ.

ನೂತನ ನೌಕರರ ಸಂಘಕ್ಕೆ ಅನುಮತಿ ನೀಡುವಂತೆ ಮತ್ತು ನೌಕರರ ಕುಂದು ಕೊರತೆಗಳನ್ನು ಬಗೆ ಹರಿಸುವಂತೆ ಪಟ್ಟುಹಿಡಿದು ಮಾರುತಿ ನೌಕರರು ಕಳೆದ ವರ್ಷ ಸುಮಾರು 59 ದಿನಗಳ ಕಾಲ ಮುಷ್ಕರ ನಡೆಸಿದ್ದರು. ಇದರಿಂದಾಗಿ ಕಂಪನಿಯ ಕಾರು ಉತ್ಪಾದನೆಗೆ ಭಾರಿ ಹಿನ್ನಡೆಯಾಗಿತ್ತು. ಸ್ವಿಫ್ಟ್ ಕಾರಿನ ವೇಟಿಂಗ್ ಪಿರೆಯಿಡ್ ಹೆಚ್ಚಾಗಿತ್ತು.

More from DriveSpark

Article Published On: Wednesday, June 20, 2012, 14:51 [IST]
English summary
Maruti Suzuki is facing legal trouble from Haryana;'s labour department after it failed to follow an agreement it had signed with its workers in the Manesar plant. The carmaker was asked to create two committees to redress the issues of the workers and the labour department has said Maruti has not created them till date.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+