ಎಲ್ಲೆಡೆ ಮಾರುತಿ ಮಾಯೆ; ಆಲ್ಟೊ 32000 ಬುಕ್ಕಿಂಗ್ಸ್!

Written By:

ಹಬ್ಬದ ಸೀಸನ್ ಬೇಡಿಕೆ ವ್ಯಾಪಕವಾಗಿ ಕಂಡುಬಂದಿರುವಂತೆಯೇ ಮಾರುತಿ ಸುಜುಕಿ ನೂತನ ಆಲ್ಟೊ 800 ಕಾರು ಬಿಡುಗಡೆಗೊಂಡು ಕೆಲವೇ ವಾರಗಳೊಳಗೆ 32 ಸಾವಿರ ಬುಕ್ಕಿಂಗ್‌ಗಳನ್ನು ಗಿಟ್ಟಿಸಿಕೊಂಡಿದೆ. ಈ ಮೂಲಕ ಎಲ್ಲ ಹಂತದಲ್ಲಿಯೂ ಆಟೊ ಜಗತ್ತಿನಲ್ಲಿ ಆಲ್ಟೊ ಮ್ಯಾಜಿಕ್ ಕಂಡುಬಂದಿದೆ.

ಈ ಹಿಂದಿನ ಮಾದರಿಯಂತೆ ಆಲ್ಟೊ 800 ಕೂಡಾ ದೇಶದಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿದ್ದ ಕಾರು ಎಂದೆನಿಸಿಕೊಳ್ಳಲು ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ ಗುರಿಯಾಗಿರಿಸಿಕೊಂಡಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಗಳಲ್ಲಿ ಲಭ್ಯವಿರುವ ಮಾರುತಿ ಆಲ್ಟೊ 800 ದರ ಹೋಲಿಸಿದರೆ ಈ ಹಿಂದಿನ ಆಲ್ಟೊ ಎಫ್8ಡಿ ಮಾದರಿಗಳಿಗಿಂತಲೂ 5000 ರೂಪಾಯಿಗಳಷ್ಟು ಕಡಿಮೆಯಾಗಿದೆ.

ನ್ಯೂ ಬ್ರಾಂಡ್ ಡ್ಯಾಶ್‌ಬೋರ್ಡ್ ಹಾಗೂ ಇಂಟಿರಿಯರ್ ಭಾಗಗಳ ಹೊಸ ವಿನ್ಯಾಸ, ಪರಿಷ್ಕೃತ ಎಂಜಿನ್ ಹಾಗೂ ಗೇರ್‌ಬಾಕ್ಸ್ ಎಲ್ಲವೂ ಅತ್ಯಾಕರ್ಷಕ ಆಲ್ಟೊ 800 ಮಾದರಿಗೆ ಸಾಕ್ಷಿಯಾಗಿದೆ. 796 ಸಿಸಿ-3 ಸಿಲಿಂಡರ್ ಈ ಹಿಂದಿನಕ್ಕಿಂತಲೂ ಹೆಚ್ಚು ಟರ್ಕ್ಯೂ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಮಾರುತಿ ಸ್ವಿಫ್ಟ್ ಪೆಟ್ರೋಲ್ ಹ್ಯಾಚ್‌ಬ್ಯಾಕ್

ಅತ್ಯುತ್ತಮ ಇಂಧನ ದಕ್ಷತೆ ಹೊಂದಿರುವುದು ಸಹ ಮಾರುತಿ ಸುಜುಕಿ ಮತ್ತೊಂದು ಮಹತ್ವದ ಫೀಚರ್ ಆ‌ಗಿದೆ. ಅದೇ ಹೊತ್ತಿಗೆ ಅತಿ ಹೆಚ್ಚು ಮಾರಾಟವಾಗುತ್ತಿರುವ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಹಾಗೂ ಡಿಜೈರ್ ಕಾಂಪಾಕ್ಟ್ ಸೆಡಾನ್ ಕಾರುಗಳಿಗೂ ಭಾರಿ ಬೇಡಿಕೆ ಕಂಡುಬಂದಿದ್ದು, 125000 ಬುಕ್ಕಿಂಗ್‌ಗಳನ್ನು ಗಿಟ್ಟಿಸಿವೆ.

ಎರಡೂ ಡಿಜೈರ್ ಹಾಗೂ ಸ್ವಿಫ್ಟ್ ಮಾದರಿಗಳು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಲಭ್ಯವಿದೆ. ಆದರೆ ಬಹುತೇಕ ಮಾರಾಟ ಪ್ರಕ್ರಿಯೆಗಳು ಡೀಸೆಲ್ ಸಾಮರ್ಥ್ಯದ ಎಂಜಿನ್‌ನಿಂದ ಕಂಡುಬರುತ್ತಿದೆ. ಸ್ವಿಫ್ಟ್ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಬಿ ಪ್ಲಸ್ ಸೆಗ್ಮೆಂಟ್ ಹ್ಯಾಚ್‌ಬ್ಯಾಕ್ ಕಾರುಗಳಾಗಿವೆ. ಅದೇ ಹೊತ್ತಿ ಸೆಡಾನ್ ಮಾದರಿಗಳ ಪೈಕಿ ಡಿಜೈರ್ ಅತಿ ಹೆಚ್ಚು ಮಾರಾಟವಾಗುತ್ತಿದೆ. 

English summary
Alto 800, being launched in India, the car maker has managed to bag a whopping 32,000 bookings for this car. 
Story first published: Friday, November 2, 2012, 15:05 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark