ಕಾರುಗಳ ದರ ಹೆಚ್ಚಿಸಿದ ಮಾರುತಿ ಸುಜುಕಿ

ಕಳೆದ ಡಿಸೆಂಬರ್ ತಿಂಗಳಲ್ಲಿ ಹೆಚ್ಚಿನ ಕಾರು ಕಂಪನಿಗಳು ದರ ಹೆಚ್ಚಳ ನಿರ್ಧಾರ ಪ್ರಕಟಿಸಿದ್ದವು. ಆದರೆ ಮಾರುತಿ ಸುಜುಕಿ ಮಾತ್ರ ಡೀಸೆಲ್ ಕಾರಿಗೆ ಮಾತ್ರ ದರ ಹೆಚ್ಚಿಸಿತ್ತು. ಆದರೆ ಇದೀಗ ಕಂಪನಿಯು ಎಲ್ಲಾ ಕಾರುಗಳ ದರವನ್ನು ಹೆಚ್ಚಿಸಿದೆ.
ಇನ್ನು ಮುಂದೆ ಮಾರುತಿ ಸುಜುಕಿಯ ವಿವಿಧ ಕಾರುಗಳ ದರ ಶೇಕಡ 0.3ರಿಂದ ಶೇಕಡ 3.4ರಷ್ಟು ದುಬಾರಿಯಾಗಲಿದೆ. ಅಂದರೆ ಕಾರು ದರ ಸುಮಾರು 2,400 ರುಪಾಯಿಯಿಂದ 17 ಸಾವಿರ ರುಪಾಯಿಯಷ್ಟು ಹೆಚ್ಚಾಗಲಿದೆ. ಮಾರುತಿ ಸುಜುಕಿ ಕಂಪನಿಯ ಸ್ವಿಫ್ಟ್ ಡಿಜೈರ್ ಕಾರಿನ ದರವನ್ನು ಕಂಪನಿ ಹೆಚ್ಚಿಸುವುದಿಲ್ಲವಂತೆ. ಇದರ ಹಿಂದಿರುವ ಕಾರಣ ಇಲ್ಲಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದರಿಂದ ಕಮಾಡಿಟಿ ದರ ಹೆಚ್ಚಾಗಿ ಉತ್ಪಾದನಾ ವೆಚ್ಚ ಕೂಡ ಹೆಚ್ಚಾಗಿದೆ. ಮಹೀಂದ್ರ ಆಂಡ್ ಮಹೀಂದ್ರ, ಫೋರ್ಡ್, ಜನರಲ್ ಮೋಟರ್ಸ್, ಟೊಯೊಟಾ ಮತ್ತು ಹೋಂಡಾ ಕಂಪನಿಗಳು ಕೂಡ ಕಾರು ದರಗಳನ್ನು ಹೆಚ್ಚಿಸಿವೆ.


Click it and Unblock the Notifications








