ಕಾರು ಬೆಲೆ ಏರಿಸಿದ ಮಾರುತಿ ಸುಜುಕಿ

Maruti Alto 800
ನವದೆಹಲಿ, ಅ.3: ದೇಶದ ಅತಿ ದೊಡ್ಡ ಕಾರು ಸಂಸ್ಥೆ ಮಾರುತಿ ಸುಜುಕಿ ತನ್ನ ಎಲ್ಲಾ ಮಾದರಿ ಕಾರುಗಳ ಬೆಲೆ ಏರಿಕೆ ಮಾಡುತ್ತಿರುವುದಾಗಿ ಬುಧವಾರ(ಅ.3) ಪ್ರಕಟಿಸಿದೆ.

ವಿದೇಶಿ ವಿನಿಯಮದಲ್ಲಿ ಆಗುತ್ತಿರುವ ವ್ಯತ್ಯಯ ಪರಿಣಾಮ ಸಂಸ್ಥೆಯ ಒಳ ಬರುವ ಆದಾಯಕ್ಕೆ ಆಗುತ್ತಿರುವ ಕತ್ತರಿಯನ್ನು ಸರಿದೂಗಿಸಲು ಈ ಕ್ರಮ ಅನಿವಾರ್ಯ ಎಂದು ಸಂಸ್ಥೆ ಹೇಳಿಕೊಂಡಿದೆ.

ಮಾರುತಿ ಸುಜುಕಿ ಕಾರುಗಳ ಬೆಲೆ ಸುಮಾರು 5,250 ರು ಏರಿಕೆಯಾಗಲಿದ್ದು, ನೂತನ ದರ ತಕ್ಷಣದಿಂದಲೇ ಜಾರಿಗೊಳ್ಳಲಿದೆ.

ಎಲ್ಲಾ ಮಾದರಿ ಕಾರುಗಳ ಮೇಲಿನ ದರದಲ್ಲಿ ಸರಾಸರಿ ಶೇ 1 ರಷ್ಟು ಮಾತ್ರ ಏರಿಕೆ ಕಂಡಿದೆ. ಒಟ್ಟಾರೆ 2,500 ರಿಂದ 5,250 ರು ತನಕ ಏರಿಕೆ ಕಾಣಲಿದೆ ಎಂದು ಸಂಸ್ಥೆ ವಕ್ತಾರರು ಹೇಳಿದ್ದಾರೆ.

ಮಾರುತಿ ಆಲ್ಟೊ 800 ಸಣ್ಣ ಕಾರು ಮಾದರಿಯಿಂದ ಐಷಾರಾಮಿ ಸೆಡಾನ್ ಮಾದರಿಯ ಕಿಝಾಶಿ ತನಕ ವಿಸ್ತೃತ ವೈವಿಧ್ಯತೆ ಮಾದರಿಗಳನ್ನು ಮಾರುತಿ ಸುಜುಕಿ ಹೊಂದಿದೆ. 2.04 ಲಕ್ಷ ರು ನಿಂದ 17.5 ಲಕ್ಷ ರು ಬೆಲೆ ತನಕ ಕಾರಿನ ಬೆಲೆ ಇದೆ.

ರುಪಾಯಿ ಮೌಲ್ಯ ವ್ಯತ್ಯಯದಿಂದ ಕಂಪನಿ ಆರ್ಥಿಕ ಯೋಜನೆಯ ಮೇಲೆ ಭಾರಿ ಪೆಟ್ಟು ಬೀಳುತ್ತಿದೆ. ಹೊಸ ಮಾರುಕಟ್ಟೆಗಳನ್ನು ಹುಡುಕಿ ಸಂಸ್ಥೆ ವಿಸ್ತರಣೆಯಲ್ಲಿ ತೊಡಗಿದೆ. (PTI)

ಮಾರುತಿ ಸುಜುಕಿ ಬೆಲೆ ಏರಿಕೆ ನಂತರ ಹೋಂಡಾ, ಜನರಲ್ ಮೋಟರ್ಸ್ ಹಾಗೂ ಆಡಿ ಇಂಡಿಯಾ ತನ್ನ ಕಾರುಗಳ ದರ ಪಟ್ಟಿಯತ್ತ ಕಣ್ಣು ಹಾಯಿಸಿದೆ ಎಂಬ ಸುದ್ದಿ ಇದೆ.

More from DriveSpark

Article Published On: Wednesday, October 3, 2012, 16:02 [IST]
English summary
The country’s largest car maker Maruti Suzuki India today(Oct.3) said it has hiked prices of its all models by up to Rs 5,250 with immediate effect to offset adverse impact of foreign exchange fluctuation and rising input costs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+