ಮಾರುತಿಗೆ ಸಡ್ಡು ಹೊಡೆಯಲು ಹೋಂಡಾ ಸಜ್ಜು

Honda's Move To Counter Alto And Santro
ನವದೆಹಲಿ, ಅ.22: ಮಾರುತಿ ಆಲ್ಟೋ ಹಾಗೂ ಹ್ಯುಂಡೈ ಸ್ಯಾಂಟ್ರೋಗೆ ಸರಿಸಾಟಿಯಾಗಬಲ್ಲ, ಮಧ್ಯಮ ವರ್ಗವನ್ನು ಸೆಳೆಯಬಲ್ಲ, 3-3.5 ಲಕ್ಷ ರೂಗೆ ಕೈಗೆಟುಕಬಲ್ಲ ಕಾರನ್ನು ಹೊರತರಲು ಜಪಾನಿನ ಆಟೋ ದಿಗ್ಗಜ ಹೋಂಡಾ ಸಜ್ಜಾಗಿದೆ. ಭಾರತದ ಸಣ್ಣ ಕಾರು ಮಾರುಕಟ್ಟೆಯಲ್ಲಿ ಮೊದಲೆರಡು ಸ್ಥಾನಗಳಲ್ಲಿರುವ ಮಾರುತಿ, ಹ್ಯುಂಡೈ ಸಂಸ್ಥೆಗಳಲ್ಲದೆ ಜಿಎಂ, ಫೋರ್ಡ್, ವಿಡಬ್ಲ್ಯೂ ಹಾಗೂ ನಿಸ್ಸಾನ್ ಜೊತೆ ನೇರ ಸ್ಪರ್ಧೆಗಿಳಿಯಲು ಹೋಂಡಾ ಸಿದ್ಧವಾಗಿದೆ.

ಸಣ್ಣಕಾರು ಮಾರುಕಟ್ಟೆಯಲ್ಲಿರುವ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಿರುವ ಹೋಂಡಾ, ಜಾಜ್ ಹಾಗೂ 2CV ನಂತರ ಮೂರನೇ ಉತ್ಪನ್ನವನ್ನು ಹೊರತರಲು ಉತ್ಸುಕವಾಗಿದೆ. ದೆಹಲಿಯಲ್ಲಿ ನಡೆದ ಆಟೋ ಎಕ್ಸ್ ಪೋ 2010ರಲ್ಲಿ ಪ್ರದರ್ಶನಗೊಂಡ ಸಣ್ಣಕಾರಿನ ಗಾತ್ರಕ್ಕಿಂತ ಕೊಂಚ ಸಣ್ಣದಾಗಿರುತ್ತದೆ ಎಂದು ಹೋಂಡಾ ಸಿಇಒ ಹೇಳಿದ್ದಾರೆ.

ಕಳೆದ ವರ್ಷ ಭಾರತದ ಮಾರುಕಟ್ಟೆ ಪ್ರವೇಶಿಸಿದ ಜಾಜ್ ಹೆಚ್ಚಿನ ಸದ್ದು ಮಾಡಲಿಲ್ಲ. ಆದರೂ, ಧೃತಿಗೆಡದ ಹೋಂಡಾ, ನಂತರ ಹೊರತಂದಿದ್ದು 4-4.5ಲಕ್ಷ ರು ಮೌಲ್ಯದ 2CV ಕಾರು. ಮಾರುತಿ ಸ್ವಿಫ್ಟ್ ಹಾಗೂ ಹ್ಯುಂಡೈ ಐ10 ಗೆ ವಿರುದ್ಧವಾಗಿ ರಸ್ತೆಗಿಳಿಸಿದೆ. ಮುಂದೆ ಸೆಡಾನ್ ಮಾದರಿಯ 2CV ಕಾರನ್ನು ತರಲು ಸಿದ್ಧತೆ ನಡೆದಿದೆ. ಸದ್ಯಕ್ಕೆ 60 ಸಾವಿರ ವಾಹನಗಳನ್ನು ಮಾರಾಟ ಮಾಡುತ್ತಿರುವ ಹೋಂಡಾ ಸಂಸ್ಥೆಗೆ ಆದಷ್ಟು ಬೇಗ ಲಕ್ಷ ಕಾರುಗಳನ್ನು ಮಾರಾಟ ಮಾಡುವ ಗುರಿಯಿದೆ.

More from DriveSpark

Article Published On: Friday, October 22, 2010, 15:34 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+