ಮಾರುತಿ ಎರ್ಟಿಗಾ ರಸ್ತೆಗಿಳಿಯಲು ಶುಭಮಹೂರ್ತ
ಮಾರುತಿ ಸುಜುಕಿ ಕಂಪನಿಯ ಬಹುನಿರೀಕ್ಷಿತ ಮಲ್ಟಿಪರ್ಪೊಸ್ ವೆಹಿಕಲ್ ಎರ್ಟಿಗಾ ಈಗಾಗಲೇ ರಸ್ತೆಗಿಳಿಯಬೇಕಿತ್ತು. ಆದರೆ ಬಜೆಟ್ ಕಾರಣದಿಂದ ಕಂಪನಿಯು ಮುಂದೂಡಿತ್ತು. ಯಾಕೆಂದ್ರೆ ಬಜೆಟ್ನಲ್ಲಿ ಡೀಸೆಲ್ ಕಾರುಗಳಿಗೆ ತೆರಿಗೆ ಹೆಚ್ಚಾಗಬಹುದು ಎನ್ನುವುದು ಕಂಪನಿಯ ಭಯ. ಕಂಪನಿಯು ನೂತನ ಎರ್ಟಿಗಾ ಎಂಪಿವಿಯನ್ನು ಏಪ್ರಿಲ್ ಹನ್ನೊಂದರಂದು ರಸ್ತೆಗಿಳಿಸಲಿದೆ.
ಮಾರುತಿ ಸುಜುಕಿಗೆ ಎರ್ಟಿಗಾ ಮುಖ್ಯ ಕಾರು. ಐದು ಜನರಿಗಿಂತ ಹೆಚ್ಚು ಜನರು ಕುಳಿತುಕೊಳ್ಳಬಹುದಾದ ಕಂಪನಿಯ ಮೊದಲ ಎಂಪಿವಿ ಇದು. ಜೊತೆಗೆ ಡೀಸೆಲ್ ಎಂಜಿನ್ ಮೂಲಕ ಕಂಪನಿ ಹೊರತಂದ ಮೊದಲ ಎಂಪಿವಿ ಕೂಡ ಹೌದು.
ಸಣ್ಣಕಾರು ಸೆಷಲಿಸ್ಟ್ ಆಗಿ ಜನಪ್ರಿಯಗೊಂಡಿರುವ ಮಾರುತಿ ಸುಜುಕಿ ದೊಡ್ಡಕಾರು ಮಾರುಕಟ್ಟೆಯಲ್ಲೂ ತನ್ನ ಪಾಲು ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ. ಇದು ಟೊಯೊಟಾ ಇನ್ನೋವಕ್ಕೆ ಪೈಪೋಟಿ ನೀಡಲಿದೆ.
ನೂತನ ಎರ್ಟಿಗಾ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕಲಿದೆ. ಪೆಟ್ರೋಲ್ ಕಾರು ಪ್ರತಿಲೀಟರಿಗೆ 16.02 ಕಿ.ಮೀ. ಮೈಲೇಜ್ ನೀಡಿದರೆ, ಡೀಸೆಲ್ ಆವೃತ್ತಿ ಲೀಟರಿಗೆ 20.77 ಕಿ.ಮೀ. ಮೈಲೇಜ್ ನೀಡಲಿದೆ.
ಮಾರುತಿ ಸುಜುಕಿ ಎರ್ಟಿಗಾ: ನೀವು ಸಂಪೂರ್ಣ ವಿಮರ್ಶೆ ಓದಿಲ್ವ?


Click it and Unblock the Notifications









