ಶೀಘ್ರದಲ್ಲೇ ಬರಲಿದೆ ಮಾರುತಿ ಓಮ್ನಿ ಡೀಸೆಲ್ ಕಾರು

By Nagaraja

ಹಗುರ ವಾಣಿಜ್ಯ ವಾಹನ (ಎಲ್‌‍ಸಿವಿ) ಸೆಗ್ಮೆಂಟ್‌ನಲ್ಲಿ ಟಾಟಾ ಮೋಟಾರ್ಸ್‌ಗೆ ಸ್ಪಷ್ಟ ತಿರುಗೇಟು ನೀಡಲು ಸಜ್ಜಾಗುತ್ತಿರುವ ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಜನಪ್ರಿಯ 'ಓಮ್ನಿ' ಕಾರಿನ ಡೀಸೆಲ್ ಆವೃತ್ತಿ ಬಿಡುಗಡೆಗೊಳಿಸಲು ತಯಾರಾಗುತ್ತಿದೆ.

ಹಗುರ ವಾಣಿಜ್ಯ ವಾಹನ ಸೆಗ್ಮೆಂಟ್ ಮಾರುಕಟ್ಟೆಯಲ್ಲಿ ಶೇಕಡಾ 50ಕ್ಕಿಂತಲೂ ಹೆಚ್ಚು ಶೇರು ಹೊಂದಿರುವ ಟಾಟಾ ಪ್ರಶ್ನಿಸಲಾರದ ನಾಯಕ ಎಂದೆನಿಸಿಕೊಂಡಿದೆ. ಈ ವಿಭಾಗದಲ್ಲಿ 'ಟಾಟಾ ಏಸ್' ಅತಿ ಹೆಚ್ಚು ಮಾರಾಟವನ್ನು ಹೊಂದಿದೆ.

ಇದರಂತೆ ಹೊಸ ಮಾಡೆಲ್‌ಗಳನ್ನು ಬಿಡುಗಡೆಗೆ ಯೋಜನೆ ಹಾಕಿಕೊಂಡಿರುವ ಮಾರುತಿ ಈಗಿರುವ ಕೆಲವೊಂದು ಆವೃತ್ತಿಗಳ ಪರಿಷ್ಕೃತ ಕಾರನ್ನು ಮಾಡಲು ಯೋಜನೆ ಹೊಂದಿದೆ.

ವರದಿಗಳ ಪ್ರಕಾರ ಸದ್ಯದಲ್ಲೇ ಮಾರುತಿ ಓಮ್ನಿ ಕಾರ್ಗೊ ಡೀಸೆಲ್ ಕಾರನ್ನು ಮಾರುತಿ ಅಭಿವೃದ್ಧಿಪಡಿಸಲಿದೆ. ಈ ನೂತನ ಕಾರು 800ಸಿಸಿ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಮಾರುತಿಯಿಂದ ಆಲ್ಟೊ ಹಾಗೂ ವಾಗನ್ ಆರ್‌ಗಳಂತಹ ಸಣ್ಣ ಕಾರುಗಳಿಗೆ ಮಾತ್ರ 800ಸಿಸಿ ಎಂಜಿನ್ ಬಳಕೆ ಮಾಡಲಾಗಿತ್ತು. ಇದೀಗ ಹಗುರ ವಾಣಿಜ್ಯ ವಾಹನಗಳಿಗೂ ಇದೇ ಎಂಜಿನ್ ಬಳಕೆಯಾಗಲಿದೆ.

ಮೂಲಗಳ ಪ್ರಕಾರ ಜನಪ್ರಿಯ ಆಲ್ಟೊ ಹಾಗೂ ಇಕೊ ಕಾರಿನ ಡೀಸೆಲ್ ಆವೃತ್ತಿ ಕೂಡಾ ಪರಿಚಯವಾಗಲಿದೆ. ಈ ಪೈಕಿ ಇಕೊ ಅಷ್ಟೊಂದು ಯಶ ಕಂಡಿರಲಿಲ್ಲ. ಹಾಗಾಗಿ ಇಕೊ ಇಕೊ ಡೀಸೆಲ್ ನೂತನ ಕಾರು ಖರೀದಿದಾರರಲ್ಲಿ ಹೆಚ್ಚಿನ ಆಕರ್ಷಣೆಗೆ ಕಾರಣವಾಗಲಿದೆ.

ಮಾರುತಿ ಓಮ್ನಿ ಡೀಸೆಲ್ ಕಾರು

ಮಾರುತಿ ಓಮ್ನಿ ಡೀಸೆಲ್ ಕಾರು

ಹಗುರ ವಾಣಿಜ್ಯ ವಾಹನ ಸೆಗ್ಮೆಂಟ್‌ನಲ್ಲಿ ಗುರುತಿಸಿಕೊಂಡಿರುವ ಓಮ್ನಿ ಡೀಸೆಲ್ ಆವೃತ್ತಿಯನ್ನು ಬಿಡುಗಡೆ ಮಾಡಲು ಮಾರುತಿ ಯೋಜನೆ ಹಾಕಿಕೊಂಡಿದೆ. ಈ ಕಾರಿನಲ್ಲಿ 800ಸಿಸಿ ಡೀಸೆಲ್ ಎಂಜಿನ್ ಬಳಕೆಯಾಗಲಿದೆ.

ಮಾರುತಿ ಸುಜುಕಿ ಇಕೊ

ಮಾರುತಿ ಸುಜುಕಿ ಇಕೊ

ಮಾರುತಿ ಇಕೊ ಕಾರಿನಲ್ಲೂ ಡೀಸೆಲ್ ಎಂಜಿನ್ ಆಳವಡಿಸಲು ಮಾರುತಿ ಯೋಜನೆ ಹೊಂದಿದೆ. ಮಾರುಕಟ್ಟೆಯಲ್ಲಿ ಅಷ್ಟೊಂದು ಸದ್ದು ಮಾಡದಿರುವ ಹಿನ್ನಲೆಯಲ್ಲಿ ಡೀಸೆಲ್ ಎಂಜಿನ್ ಬಿಡುಗಡೆ ಮಾಡಲು ಕಂಪನಿ ಇರಾದೆ ಹೊಂದಿದೆ.

ಮಾರುತಿ ಇಕೊ

ಮಾರುತಿ ಇಕೊ

ದೇಶಧ ಮಧ್ಯಮ ವರ್ಗದ ದೊಡ್ಡ ಕುಟಂಬಗಳನ್ನೇ ಕೇಂದ್ರಿಕರಿಸಿ ಮಾರುತಿ ಇಕೊ ಕಾರನ್ನು ಅಭಿವೃದ್ಧಿಪಡಿಸಲಾಗಿತ್ತು. ಹಾಗಾಗಿ ಡೀಸೆಲ್ ಆವೃತ್ತಿ ತಯಾರಾದರೆ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರಕುವ ಸಾಧ್ಯತೆಯಿದೆ.

ಆಲ್ಟೊ 800

ಆಲ್ಟೊ 800

ಒಂದು ವೇಳೆ ಆಲ್ಟೊ 800 ಡೀಸೆಲ್ ಕಾರು ಕನಸು ನನಸಾದ್ದಲ್ಲಿ ಟ್ವಿನ್ ಸಿಲಿಂಡರ್ ಡೀಸೆಲ್ ಎಂಜಿನ್ ಪಡೆದ ಮೊದಲ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈಗಾಗಲೇ ಭಾರಿ ಸದ್ದು ಮಾಡುತ್ತಿರುವ ಆಲ್ಟೊ 800 ಕಾರಿನ ಡೀಸೆಲ್ ಆವೃತ್ತಿಯು ಬಂದ್ದಲ್ಲಿ ಸೋಲರಿಯದ ಸರದಾರನಾಗುವ ಸಾಧ್ಯತೆಯಿದೆ.

ವಾಗನ್ ಆರ್ ಡೀಸೆಲ್

ವಾಗನ್ ಆರ್ ಡೀಸೆಲ್

ಕೆಲವು ತಿಂಗಳುಗಳ ಹಿಂದೆಯೇ ವಾಗನ್ ಆರ್ ಡೀಸೆಲ್ ಕಾರು ಬರಲಿದೆಯೆಂಬ ಸುದ್ದಿ ಹರಿದಾಡುತ್ತಿದೆ. ಹಾಗಾಗಿ ಇಕೊಗಿಂತಲೂ ಮೊದಲು ವಾಗನ್ ಆರ್ ಡೀಸೆಲ್ ಕಾರನ್ನು ಮಾರುತಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಝೆನ್ ಎಸ್ಟಿಲೊ

ಝೆನ್ ಎಸ್ಟಿಲೊ

ಮತ್ತೊಂದು ಸಣ್ಣ ಕಾರಾದ ಜೆನ್ ಎಸ್ಟಿಲೊ ಕೂಡಾ 800 ಸಿಸಿ ಡೀಸೆಲ್ ಎಂಜಿನ್ ಪಡೆಯುವ ಸಾಧ್ಯತೆಯಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಡೀಸೆಲ್ ಕಾರುಗಳಿಗೆ ಭಾರಿ ಬೇಡಿಕೆ ಕಂಡುಬರುವುದರಿಂದ ಮಾರುತಿ ದೀರ್ಘ ಯೋಜನೆ ಹಮ್ಮಿಕೊಂಡಿದೆ.

More from DriveSpark

Article Published On: Saturday, December 29, 2012, 10:53 [IST]
English summary
Maruti Suzuki has decided to take on Tata Motors head on, in a segment where it does not have a huge foot print - light commercial vehicles. Tata Motors is the unchallenged leader in the light commercial vehicle segment with more than 50% market share. The Tata Ace is the best selling vehicle in this segment and Maruti Suzuki is planning to venture in to this territory soon.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+