ಮಾರುತಿ ಸುಜುಕಿಯಿಂದ ಅನಿಲ ಚಾಲಿತ ಆಲ್ಟೊ ಕೆ10
ಸದ್ಯ ಮಾರುತಿ ಸುಜುಕಿ ಕಂಪನಿಯು 1.3 ಲೀಟರಿನ ಫಿಯೆಟ್ ಮಲ್ಟಿ ಜೆಟ್ ಟರ್ಬೊ ಎಂಜಿನ್ ಡೀಸೆಲ್ ಹೊಂದಿದೆ. ಇದನ್ನು ಕಂಪನಿಯು ತನ್ನ ಡೀಸೆಲ್ ಕಾರುಗಳಿಗೆ ಅಳವಡಿಸುತ್ತಿದೆ. ಈ ಎಂಜಿನ್ ಬಿ ಪ್ಲಸ್ ಸಣ್ಣಕಾರು ಸೆಗ್ಮೆಂಟಿಗೆ ಮಾತ್ರ ಸೂಕ್ತವಾಗಿದೆ.
ಹೀಗಾಗಿ ಆಲ್ಟೊ ಮತ್ತು ವ್ಯಾಗನಾರ್ ಕಾರುಗಳು ಪೆಟ್ರೋಲ್ ಎಂಜಿನಿನಲ್ಲೇ ಮುಂದುವರೆಯಲಿವೆ. ಇದರಲ್ಲಿ ಈಗಾಗಲೇ ವ್ಯಾಗನಾರ್ ಕಾರು ಎಲ್ ಪಿಜಿ- ಪೆಟ್ರೋಲ್ ಅವಳಿ ಇಂಧನ ಆವೃತ್ತಿಯನ್ನು ಹೊಂದಿದೆ. ಆಲ್ಟೊ ಕಾರುಗಳಿಗೆ ಇನ್ನೂ ಸಿಎನ್ಜಿ ಫಿಟ್ ಮಾಡಿಲ್ಲ.
ಕೆಲವು ಮೂಲಗಳ ಪ್ರಕಾರ ಸುಜುಕಿ ಕಂಪನಿಯು ಸಣ್ಣ ಸಾಮರ್ಥ್ಯದ ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸುತ್ತಿದೆಯಂತೆ. ಆದರೆ ಇದು ಆಗಮಿಸಲು ಇನ್ನೂ ಕೆಲವು ವರ್ಷಗಳು ಬೇಕಾಗಬಹುದು. ಈ ಮಧ್ಯಾವಧಿಯಲ್ಲಿ ಕಂಪನಿಯು ಸಂಕುಚಿತ ನೈಸರ್ಗಿಕ ಅನಿಲ(ಸಿಎನ್ಜಿ) ಚಾಲಿತ ಕಾರೊಂದನ್ನು ಪರಿಚಯಿಸುವ ಸೂಚನೆಯಿದೆ.
ಸಿಎನ್ಜಿ-ಪೆಟ್ರೋಲ್ ಡ್ಯೂಯಲ್ ತೈಲ ಆಯ್ಕೆಯ ಎಂಜಿನನ್ನು ಕಂಪನಿಯು ಆಲ್ಟೊ ಸರಣಿಯ ಕೆ10 ಕಾರುಗಳಿಗೆ ಅಳವಡಿಸುವ ನಿರೀಕ್ಷೆಯಿದೆ.
ಓದಿ: ಪುಟ್ಟಕಾರು ವಿಮರ್ಶೆ: ಮಾರುತಿ ಸುಜುಕಿ ಆಲ್ಟೊ


Click it and Unblock the Notifications









