ಸೆಪ್ಟೆಂಬರ್ ತಿಂಗಳಲ್ಲಿ ಬರಲಿರುವ ಐದು ವಾಹನಗಳು

Posted By: Staff

ಸಾಲು ಸಾಲು ಹಬ್ಬಗಳು ಕಣ್ಣ ಮುಂದಿವೆ. ಹಬ್ಬದ ಮೂಡಿನಲ್ಲಿರುವ ಗ್ರಾಹಕರಿಂದ ಬೊಗಸೆಗೆ ಸಿಕ್ಕಷ್ಟು ಬಾಚಿಕೊಳ್ಳುವ ತವಕದಲ್ಲಿ ವಾಹನ ಕಂಪನಿಗಳಿವೆ. ಈಗಾಗಲೇ ಕೆಲವು ವಾಹನಗಳು ಆಗಮಿಸಿಯಾಗಿದವೆ. ಇನ್ನು ಕೆಲವು ರಸ್ತೆಗಿಳಿಯಲು ಸರತಿ ಸಾಲಿನಲ್ಲಿವೆ.

ಈಗಾಗಲೇ ಯಮಹಾ ರೇ ಸ್ಕೂಟರ್ ಮತ್ತು ರೆನೊ ಸ್ಕಾಲಾ ಸೆಡಾನ್ ಕಾರು ರಸ್ತೆಗಿಳಿದಿದೆ. ಇಷ್ಟಕ್ಕೆ ಮುಗಿದಿಲ್ಲ. ಈ ತಿಂಗಳು ಇನ್ನಷ್ಟು ವಾಹನಗಳು ರಸ್ತೆಗಿಳಿಯಲಿವೆ. ಯಾವೆಲ್ಲ ಬೈಕ್, ಸ್ಕೂಟರ್, ಕಾರು ಬರಲಿವೆ ಎನ್ನುವಿರಾ? ಕೆಳಗೆ ನೀಡಿರುವ ಚಿತ್ರಗಳನ್ನೊಮ್ಮೆ ನೋಡಿಬಿಡಿ.

ಸೆಪ್ಟೆಂಬರ್ ತಿಂಗಳಲ್ಲಿ ಗ್ರಾಹಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರುವ ಕಾರಣ ಹೊಸ ವಾಹನಗಳನ್ನು ಕಂಪನಿಗಳು ಪರಿಚಯಿಸುತ್ತವೆ. ಶೀಘ್ರದಲ್ಲಿ ಆಗಮಿಸಲಿರುವ ಕಾರುಗಳಲ್ಲಿ ಮಹೀಂದ್ರ ಕ್ವಾಂಟೊ ಬಹುನಿರೀಕ್ಷಿತ ಎಸ್ ಯುವಿ. ಮಹೀಂದ್ರ ಕಂಪನಿ ಪರಿಚಯಿಸುವ ವಾಹನಗಳ ಕುರಿತು ನಿರೀಕ್ಷೆ ಸಹಜ.

ಅದ್ದೂರಿ ಕಾರೊಂದರ ನಿರೀಕ್ಷೆಯಲ್ಲಿರುವರಿಗೆ ಮರ್ಸಿಡಿಸ್ ಬೆಂಝ್ ಬಿ ಕ್ಲಾಸ್ ಬೆಸ್ಟ್. ಈ ತಿಂಗಳಲ್ಲಿ ಆಗಮಿಸಲಿರುವ ಇನ್ನೊಂದು ಕಾರು ನಿಸ್ಸಾನ್ ಇವಾಲಿಯಾ. ಇದು ರಸ್ತೆಗಿಳಿಯೋ ಮುನ್ನವೇ ನಾವು ಟೆಸ್ಟ್ ಡ್ರೈವ್ ಮಾಡಿ ನಿಮ್ಮ ಮುಂದಿಟ್ಟಿದ್ದೇವೆ.

ದ್ವಿಚಕ್ರ ವಾಹನ ಸೆಗ್ಮೆಂಟಿನಲ್ಲಿ ಈಗಾಗಲೇ ಯಮಹಾ ರೇ ಆಗಮಿಸಿದೆ. ಟಿವಿಎಸ್ ಕಂಪನಿಯ ಬೈಕೊಂದು ಇದೇ ತಿಂಗಳು ಆಗಮಿಸಲಿದೆ. ಅದರ ಹೆಸರು ಟಿವಿಎಸ್ ಫೀನಿಕ್ಸ್. ನೂತನ ಬೈಕಿನಿಂದ ಕಂಪನಿಯ ಮಾರಾಟವು ಫೀನಿಕ್ಸ್ ಹಕ್ಕಿಯಂತೆ ನೆಗೆಯುತ್ತಾ? ಕಾದು ನೋಡಬೇಕಿದೆ. ಪ್ರಸಕ್ತ ತಿಂಗಳು ಹೆಚ್ಚಿನ ಜನರು ಎದುರುನೋಡುತ್ತಿರುವ ಇನ್ನೊಂದು ಕಾರು ಮಾರುತಿ ಆಲ್ಟೊ 800.

To Follow DriveSpark On Facebook, Click The Like Button
ಟಿವಿಎಸ್ ಫೀನಿಕ್ಸ್ 125

ಟಿವಿಎಸ್ ಫೀನಿಕ್ಸ್ 125

ಟಿವಿಎಸ್ ಕಂಪನಿಯು ನೂತನ ಫೀನಿಕ್ಸ್ 125 ಬೈಕನ್ನು ಪ್ರಸಕ್ತ ತಿಂಗಳು ಪರಿಚಯಿಸುವ ನಿರೀಕ್ಷೆಯಿದೆ. ಇದು ಬಜಾಜ್, ಹೋಂಡಾ ಮತ್ತು ಹೀರೊ ಬೈಕುಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ. ಇನ್ಯಾವ ವಾಹನ ಈ ತಿಂಗ್ಳು ಬರಲಿದೆ. ಮುಂದಿನ ಪುಟ ನೋಡಿ.

ಸೆಪ್ಟೆಂಬರ್ 26ಕ್ಕೆ ನಿಸ್ಸಾನ್ ಇವಾಲಿಯಾ

ಸೆಪ್ಟೆಂಬರ್ 26ಕ್ಕೆ ನಿಸ್ಸಾನ್ ಇವಾಲಿಯಾ

ಬಹುನಿರೀಕ್ಷಿತ ನಿಸ್ಸಾನ್ ಇವಾಲಿಯಾ ಕಾರು ಸೆಪ್ಟೆಂಬರ್ 26ಕ್ಕೆ ರಸ್ತೆಗಿಳಿಯಲಿದೆ. ಇವಾಲಿಯಾ ಕೆ9ಕೆ ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ ಈಗಾಗಲೇ ನಿಸ್ಸಾನ್ ಮೈಕ್ರಾ, ರೆನೊ ಪಲ್ಸ್, ಸನ್ನಿ ಮತ್ತು ಸ್ಕಾಲಾ ಕಾರುಗಳಲ್ಲಿದೆ.

ಮಹೀಂದ್ರ ಕ್ವಾಂಟೊ, ಲಾಂಚ್ ಡೇಟ್: ಸೆಪ್ಟೆಂಬರ್ 24

ಮಹೀಂದ್ರ ಕ್ವಾಂಟೊ, ಲಾಂಚ್ ಡೇಟ್: ಸೆಪ್ಟೆಂಬರ್ 24

ಮಹೀಂದ್ರ ಕಂಪನಿಯ ಕ್ವಾಂಟೊ ಎಸ್ ಯುವಿ ಸೆಪ್ಟೆಂಬರ್ 24ರಂದು ರಸ್ತೆಗಿಳಿಯಲಿದೆ. ಇದು ಕ್ಷೈಲೊ ಪ್ಲಾಟ್ ಫಾರ್ಮ್ ನಲ್ಲಿ ಆಗಮಿಸಲಿರುವ ಪುಟ್ಟ ಎಸ್ ಯುವಿ ಆಗಿರಲಿದೆ. ಇದರ ದರ ಸುಮಾರು 7 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

ಮರ್ಸಿಡಿಸ್ ಬೆಂಝ್ ಬಿಕ್ಲಾಸ್ ಅದ್ದೂರಿ ಕಾರು

ಮರ್ಸಿಡಿಸ್ ಬೆಂಝ್ ಬಿಕ್ಲಾಸ್ ಅದ್ದೂರಿ ಕಾರು

ಜರ್ಮನಿಯ ಪ್ರೀಮಿಯಂ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್ ಬೆಂಝ್ ಕಂಪನಿಯು ಬಿಕ್ಲಾಸ್ ಕಾರನ್ನು ಸೆಪ್ಟೆಂಬರ್ 18ರಂದು ಪರಿಚಯಿಸಲಿದೆ. ಇದು ಕಂಪನಿಯು ದೇಶಕ್ಕೆ ಪರಿಚಯಿಸಲಿರುವ ಮೊದಲ ಸಣ್ಣಕಾರು. ಇದರ ದರ ಸುಮಾರು 20 ಲಕ್ಷ ರು ಆಸುಪಾಸಿನಲ್ಲಿರಲಿದೆ.

ಮಾರುತಿ ಆಲ್ಟೊ 800

ಮಾರುತಿ ಆಲ್ಟೊ 800

ಮಾರುತಿ 800 ಬದಲಿ ಆವೃತ್ತಿ ಪ್ರಸಕ್ತ ತಿಂಗಳು ಆಗಮಿಸುವ ಸೂಚನೆಗಳು ದಟ್ಟವಾಗಿವೆ. ಇದು ನ್ಯಾನೊ ಮತ್ತು ಇಯಾನ್ ಕಾರುಗಳಿಗೆ ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ನೀಡಲಿದೆ.

English summary
The month of September heralds the arrival of the festive season in India and the the auto industry celebrates it by launching new products much to the delight of buyers. This year's festive season is crucial for the auto industry as both car sales and two wheeler sales are under pressure due to low consumer sentiment.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark