ಮಾರಾಟದಲ್ಲಿ ಹೊಸ ದಾಖಲೆ ಬರೆದ ಮಾರುತಿ ಸುಜುಕಿ ಆಲ್ಟೊ ಕಾರು

ಭಾರತದ ಪ್ರಮುಖ ವಾಹನ ತಯಾರಕ ಮಾರುತಿ ಸುಜುಕಿ ಸಂಸ್ಥೆಯ ಪ್ರವೇಶ ವಿಭಾಗದ ಕಾರು ಆಲ್ಟೊ 2017ನೇ ಸಾಲಿನ ಮೊದಲ ಐದು ತಿಂಗಳಲ್ಲಿ ಆಕರ್ಷಕ ಮಾರಾಟದ ಅಂಕಿ ಅಂಶಗಳನ್ನು ದಾಖಲಿಸಿದೆ.

By Girish

ಭಾರತದ ಪ್ರಮುಖ ವಾಹನ ತಯಾರಕ ಮಾರುತಿ ಸುಜುಕಿ ಸಂಸ್ಥೆಯ ಪ್ರವೇಶ ವಿಭಾಗದ ಕಾರು ಆಲ್ಟೊ 2017ನೇ ಸಾಲಿನ ಮೊದಲ ಐದು ತಿಂಗಳಲ್ಲಿ ಆಕರ್ಷಕ ಮಾರಾಟದ ಅಂಕಿ ಅಂಶಗಳನ್ನು ದಾಖಲಿಸಿದೆ.

ಮಾರಾಟದಲ್ಲಿ ಹೊಸ ಧಾಖಲೆ ಬರೆದ ಮಾರುತಿ ಸುಜುಕಿ ಆಲ್ಟೊ ಕಾರು

2017ರ ಮೊದಲ ಐದು ತಿಂಗಳಲ್ಲಿ ಮಾರುತಿ ಸುಜುಕಿ ಆಲ್ಟೊ 1.07 ಲಕ್ಷ ಕಾರುಗಳು ಮಾರಾಟಗೊಳ್ಳುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದ್ದು, ಮೊದಲ ಬಾರಿಗೆ ಗ್ರಾಹಕರು ಆಲ್ಟೊ ಬ್ರಾಂಡ್ ಮೇಲೆ ಹೆಚ್ಚಿನ ಮಟ್ಟದ ನಂಬಿಕೆಯನ್ನು ತೋರಿಸಿದ್ದಾರೆ ಎನ್ನಬಹುದು.

ಮಾರಾಟದಲ್ಲಿ ಹೊಸ ಧಾಖಲೆ ಬರೆದ ಮಾರುತಿ ಸುಜುಕಿ ಆಲ್ಟೊ ಕಾರು

ಈ ಕಾರು ಬಿಡುಗಡೆಗೊಂಡ ಮೊದಲ ಮೂರು ವರ್ಷಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಆಲ್ಟೊ ಕಾರುಗಳನ್ನು ಮಾರುತಿ ಸುಜುಕಿ ಮಾರಾಟ ಮಾಡಿ ಎಲ್ಲರ ಕಣ್ಣುಗಳನ್ನು ತನ್ನತ್ತ ಸೆಳೆದಿದ್ದು ಸುಳ್ಳಲ್ಲ.

ಮಾರಾಟದಲ್ಲಿ ಹೊಸ ಧಾಖಲೆ ಬರೆದ ಮಾರುತಿ ಸುಜುಕಿ ಆಲ್ಟೊ ಕಾರು

ಪ್ರಸ್ತುತ, 800 ಸಿಸಿ ಎಂಜಿನ್ ಪಡೆದುಕೊಂಡಿರುವ ಈ ಕಾರು, ಆಲ್ಟೊ-ಕೆ 10 ಮತ್ತು ಸಿಎನ್‌ಜಿ ಎಂಬ ಎರಡು ರೂಪಾಂತರಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ.

ಮಾರಾಟದಲ್ಲಿ ಹೊಸ ಧಾಖಲೆ ಬರೆದ ಮಾರುತಿ ಸುಜುಕಿ ಆಲ್ಟೊ ಕಾರು

2001ರಲ್ಲಿ ಮೊದಲ ಬಾರಿಗೆ ಮಾರುತಿ ಸುಜುಕಿ ಭಾರತೀಯ ಮಾರುಕಟ್ಟೆಗೆ ಪಾದಾರ್ಪಣೆ ಮಾಡಿತ್ತು. ಕಳೆದ 17 ವರ್ಷಗಳಲ್ಲಿ ಹಲವಾರು ಸುಧಾರಣೆಗಳನ್ನು ಕಂಡ ಈ ಆಲ್ಟೊ ಕಾರು, ತನ್ನ ಪ್ರತಿಸ್ಪರ್ಧಿಗಳಿಗೆ ಹೆಚ್ಚು ಸ್ಪರ್ಧೆ ನೀಡಿದೆ.

ಮಾರಾಟದಲ್ಲಿ ಹೊಸ ಧಾಖಲೆ ಬರೆದ ಮಾರುತಿ ಸುಜುಕಿ ಆಲ್ಟೊ ಕಾರು

ಪ್ರವೇಶ ಮಟ್ಟದ ವಿಭಾಗದಲ್ಲಿ ತೀವ್ರ ಸ್ಪರ್ಧೆಯ ಹೊರತಾಗಿಯೂ, ಮಾರುತಿ ಸುಜುಕಿ ಆಲ್ಟೊ ಕಾರು ದೇಶದಲ್ಲಿ ಉತ್ತಮ ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಾರಾಟದಲ್ಲಿ ಹೊಸ ಧಾಖಲೆ ಬರೆದ ಮಾರುತಿ ಸುಜುಕಿ ಆಲ್ಟೊ ಕಾರು

ಸದ್ಯ, ಮಾರುತಿ ಸುಜುಕಿ ತನ್ನ ಮುಂದಿನ ಪೀಳಿಗೆಯ ಆಲ್ಟೊ ಕಾರನ್ನು ಅಭಿವೃದ್ಧಿಪಡಿಸಲು ಯೋಜಿಸುತ್ತಿದ್ದು, ಮತ್ತಷ್ಟು ಜನರನ್ನು ತನ್ನತ್ತ ಸೆಳೆಯಲಿರುವುದಂತೂ ಖಂಡಿತ.

Most Read Articles

Kannada
English summary
Read in Kannada about Maruti Suzuki Alto has recorded a sales figures of 1.07 lakh units in the first five months of 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X