ಸ್ವಿಫ್ಟ್ ಬ್ರೇಕ್ ಸಮಸ್ಯೆ ಚರ್ಚೆಗೆ ಮಾರುತಿ ಮಾರುತ್ತರ

ಮಾರುತಿ ಸುಜುಕಿ ಕಂಪನಿಯ ಜನಪ್ರಿಯ ಕಾರು ಸ್ವಿಫ್ಟ್ ಬ್ರೇಕ್ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂಬ ವರದಿಯನ್ನು ಕನ್ನಡ ಡ್ರೈವ್ ಸ್ಪಾರ್ಕ್ ಈ ಹಿಂದೆ ಪ್ರಕಟಿಸಿತ್ತು. ನಿಧಾನವಾಗಿ ಕಾರು ಚಲಾಯಿಸುವಾಗ ಸ್ವಿಫ್ಟ್ ಬ್ರೇಕ್ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ದೂರುಗಳು ಕೇಳಿಬಂದಿದ್ದವು. ಇದಕ್ಕೆ ಈಗ ಮಾರುತಿ ಸುಜುಕಿ ಸಮಜಾಯಿಸಿ ನೀಡಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಬ್ರೇಕ್ ಸಮಸ್ಯೆ ಕುರಿತು ಗ್ರಾಹಕ ವೇದಿಕೆಗಳಲ್ಲಿ, ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು. ಓದಿ: ಚರ್ಚೆ: ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಬ್ರೇಕ್ ಸಮಸ್ಯೆ. ಆದರೆ ಈ ಸಮಸ್ಯೆ ಬ್ರೇಕಿನದ್ದು ಅಲ್ಲ, ಚಾಲಕರು ಮಾಡುವ ಡ್ರೈವಿಂಗ್ ಹ್ಯಾಬಿಟಿನದ್ದು ಎಂದು ಕಂಪನಿ ಈಗ ಮಾರುತ್ತರ ನೀಡಿದೆ.

ನಿಧಾನವಾಗಿ ಕಾರು ಚಲಾಯಿಸುವಾಗ ಬ್ರೇಕ್ ಹಿಡಿತಕ್ಕೆ ಸಿಗುತ್ತಿಲ್ಲವೆನ್ನುವುದು ಗ್ರಾಹಕರ ದೂರಾಗಿತ್ತು. ಸಮರ್ಪಕ ವಿಧಾನದಲ್ಲಿ ಡ್ರೈವಿಂಗ್ ಮಾಡಿದರೆ ಈ ಸಮಸ್ಯೆಯಿಂದ ಪಾರಾಗಬಹುದು ಎಂದು ಕಂಪನಿ ಹೇಳಿದೆ. ಅರ್ಧ ಕ್ಲಚ್ ಹಿಡಿದು ಡ್ರೈವಿಂಗ್ ಮಾಡುವುದು ತಪ್ಪು ಎಂದು ಕಂಪನಿ ಸೂಚಿಸಿದೆ. ಈ ಕುರಿತು ಮಾರುತಿ ಸುಜುಕಿ ನೀಡಿದ ಮಾರುತ್ತರ ಪತ್ರ ಈ ಕೆಳಗಿನಂತೆ ಇದೆ. ಓದಿ.

"ಮಾರುತಿ ಸುಜುಕಿ ಕಂಪನಿಯ ಬ್ರೇಕಿಂಗ್ ತಂತ್ರಜ್ಞಾನವು ಹೊಸತು ಮತ್ತು ದೇಶದ ಇತರ ಕಾರು ಕಂಪನಿಗಳು ನೀಡುವುದಕ್ಕಿಂತ ಅತ್ಯುತ್ತಮವಾಗಿದೆ. ಸ್ವಿಫ್ಟ್ ಕಾರಿನಲ್ಲಿ ಬ್ರೇಕ್ ಬೂಸ್ಟರ್ ಇದೆ. ಪ್ರತಿ ಗಂಟೆಗೆ ಕಡಿಮೆ ಅಂದ್ರೆ ಸುಮಾರು 5 ಕಿ.ಮೀ. ವೇಗದಲ್ಲಿ ಹೋಗುವಾಗ ಬ್ರೇಕ್ ಕೊಂಚ ಹಾರ್ಡ್ ಎನಿಸಬಹುದು. ಯಾಕೆಂದರೆ ಆ ಸಮಯದಲ್ಲಿ ನೀವು ಅರ್ಧ ಕ್ಲಚ್ ಹಿಡಿದಿರುತ್ತೀರಿ.

ಅಂದ್ರೆ ನಿಧಾನವಾಗಿ ಹೋಗುವಾಗ ಅರ್ಧ ಕ್ಲಚ್ ಹಿಡಿದುಕೊಂಡೇ ಬ್ರೇಕ್ ಅದುಮುತ್ತಿರಿ. ಈ ಸಮಯದಲ್ಲಿ ಎಂಜಿನ್ ಆರ್ ಪಿಎಂ "ಐಡಲ್ ಆರ್ ಪಿಎಂ"ಗಿಂತ ಕಡಿಮೆ ಮಟ್ಟಕ್ಕೆ ಇಳಿಯುತ್ತದೆ. ಹೀಗಾಗಿ ಸ್ವಿಫ್ಟ್ ಕಾರು ಬಳಸುವರು ಅರ್ಧ ಕ್ಲಚ್ ಹಿಡಿಯದೇ ಬ್ರೇಕ್ ಅಭ್ಯಾಸ ಬೆಳೆಸಿಕೊಳ್ಳಿ" ಎಂದು ಕಂಪನಿ ತಿಳಿಸಿದೆ.

More from DriveSpark

Article Published On: Wednesday, August 8, 2012, 14:08 [IST]
English summary
The braking issue faced by Maruti Suzuki Swift owners has been partially solved by the carmaker. In a post on Facebook, the carmaker has stated that the braking issue will arise only when drivers use half clutch during slow speeds. It has now advised them to use full clutch to have full braking power.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+