ನ್ಯೂ ಇಯರ್ ಶಾಕ್; ಮಾರುತಿ ದರ ಏರಿಕೆ
ಹೊಸ ವರ್ಷದ ಸಂಭ್ರಮ ಆಚರಿಸಲು ಹೊರಟಿರುವ ಕಾರು ಖರೀದಿ ಗ್ರಾಹಕರಿಗೆ ದೇಶದ ಅತಿ ದೊಡ್ಡ ಕಾರು ಖರೀದಿ ಸಂಸ್ಥೆಯಾದ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಭಾರಿ ದೊಡ್ಡ ಆಘಾತವನ್ನು ನೀಡಿದೆ. ಮಾರುತಿ ತನ್ನ ಎಲ್ಲ ಬ್ರಾಂಡ್ ಕಾರುಗಳ ದರವನ್ನು ಮುಂದಿನ ವರ್ಷದಿಂದ ಅನ್ವಯವಾಗುವಾಗುವಂತೆ ಏರಿಕೆಗೊಳಿಸಿದೆ.
ರೂಪಾಯಿ ದರ ಏರಿಳಿತದ ಒತ್ತಡ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮಾರುತಿಯಿಂದ ಇಂತಹದೊಂದು ನಡೆ ಕಂಡುಬಂದಿದೆ. ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಮಾರುತಿ ಸುಜುಕಿಯ ಎಲ್ಲ ವೆರಿಯಂಟ್‌ಗಳಿಗೂ 20,000 ರುಪಾಯಿಗಳ ವರೆಗೂ ದರ ಏರಿಕೆ ಕಂಡಬರಲಿದೆ.
ಪ್ರಸಕ್ತ ಆರ್ಥಿಕ ಸಾಲಿನ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇಕಡಾ 5.41ರಷ್ಟು ಕುಸಿತ ಅನುಭವಿಸಿದ್ದ ಮಾರುತಿ ಸುಜುಕಿ ನಿವ್ವಳ ಲಾಭ 227.45 ಕೋಟಿ ರೂಪಾಯಿಗಳಿಗೆ ಕುಸಿದಿತ್ತು. ಮಾರಾಟ ಕುಸಿತ, ರೂಪಾಯಿ ದರ ಏರಿಳಿತ ಹಾಗೂ ವಿವಾದಿತ ಮಾನೇಸರ್ ಘಟಕದಲ್ಲಿ ಮುಷ್ಕರ ನಡೆದಿರುವುದು ಹಿನ್ನಡೆಗೆ ಕಾರಣವಾಗಿತ್ತು.
ಹಾಗಿದ್ದರೂ ಹಬ್ಬದ ಸೀಸನ್ ಆದ ನವೆಂಬರ್ ತಿಂಗಳಲ್ಲಿ 1,03,200 ಯುನಿಟ್‌ಗಳನ್ನು ಮಾರಾಟ ಮಾಡಿದ್ದ ಮಾರುತಿ ಸುಜುಕಿ ಇಂಡಿಯಾ ಶೇಕಡಾ 12.45ರಷ್ಟು ಏರಿಕೆ ದಾಖಲಿಸುವಲ್ಲಿ ಯಶಸ್ವಿಯಾಗಿತ್ತು. ಹಾಗೆಯೇ ದೇಶಿಯ ಮಾರಾಟವು ಶೇಕಡಾ 9.67ರಷ್ಟು ಪ್ರಗತಿ ಸಾಧಿಸಿತ್ತು.
ಈ ನಡುವೆ ಮಾರುತಿ ದರ ಏರಿಕೆಗೊಳಿಸಲು ನಿರ್ಧರಿಸಿರುವುದು ಈಗಾಗಲೇ ಬುಕ್ಕಿಂಗ್ ಮಾಡಿರುವ ದೇಶದ ಅಸಖ್ಯಾಂತ ಗ್ರಾಹಕರಿಗೆ ಭಾರಿ ಹೊಡೆತ ನೀಡುವಂತಾಗಿದೆ.


Click it and Unblock the Notifications









