ಗ್ರಾಹಕರ ಕಾಯುವಿಕೆಗೆ ಕರಗಿದ ಮಾರುತಿ ಸುಜುಕಿ

Posted By:
Maruti trying to reduce Cars waiting period
ಅತ್ಯಧಿಕ ಬೇಡಿಕೆ ಕಾಣುತ್ತಿರುವ ಡೀಸೆಲ್ ಕಾರುಗಳ ವೇಟಿಂಗ್ ಅವಧಿಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವುದಾಗಿ ದೇಶದ ಅಗ್ರ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಹೇಳಿದೆ.

ದೇಶದಲ್ಲಿ ಪೆಟ್ರೋಲ್ ಕಾರುಗಳ ಮೂಲಕವಾಗಿ ಮಾರುತಿ ಸುಜುಕಿ ಹೆಚ್ಚು ಜನಪ್ರಿಯತೆ ಗಳಿಸಿತ್ತು. ಆದರೆ ಈಗ ಗ್ರಾಹಕರು ಡೀಸೆಲ್ ಕಾರುಗಳತ್ತ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಹೀಗಾಗಿ ಕಂಪನಿಯು ಡೀಸೆಲ್ ಕಾರುಗಳನ್ನು ಹೆಚ್ಚು ಹೊರತರಲು ಯತ್ನಿಸುತ್ತಿದೆ.

"ಗ್ರಾಹಕರಿಗೆ ಡೀಸೆಲ್ ಕಾರುಗಳನ್ನು ನೀಡಲು ಡೆಲಿವರಿ ಅವಧಿ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಗ್ರಾಹಕರು ನಮ್ಮ ಬ್ರಾಂಡಿನ ಮೇಲಿಟ್ಟ ನಂಬಿಕೆ, ಪ್ರೀತಿ, ಅಭಿಮಾನವನ್ನು ಉಳಿಸಿಕೊಳ್ಳಲು ಈ ಪ್ರಯತ್ನ ಮಾಡುತ್ತಿದ್ದೇವೆ" ಎಂದು ಮಾರುತಿ ಸುಜುಕಿ ಮಾರುಕಟ್ಟೆ ವಿಭಾಗದ ಪ್ರಧಾನ ವ್ಯವಸ್ಥಾಪಕ ನಿರ್ದೇಶಕರಾದ ಶಶಾಂಕ್ ಶ್ರೀವತ್ಸ ಹೇಳಿದ್ದಾರೆ.

ಕಾರುಗಳ ವೇಟಿಂಗ್ ಪಿರೆಯಿಡ್ ಹೆಚ್ಚಿಸುವುದರೊಂದಿಗೆ ಕಂಪನಿಯ ಕಾರು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಯೋಜಿಸಿದೆ. ಕಂಪನಿಯು ಈ ವರ್ಷ ವಾಹನ ಉತ್ಪಾದನೆಯನ್ನು 2.4 ಲಕ್ಷ ಯುನಿಟ್ ನಿಂದ 3 ಲಕ್ಷ ಯುನಿಟಿಗೆ ಹೆಚ್ಚಿಸಲಿದೆಯಂತೆ.

ಫಿಯೆಟ್ ಇಂಡಿಯಾ ಲಿಮಿಟೆಡ್ ನೊಂದಿಗೆ ಕಂಪನಿಯು ಡೀಸೆಲ್ ಎಂಜಿನ್ ಪೂರೈಕೆ ಕುರಿತಾದ ಒಪ್ಪಂದವೊಂದಕ್ಕೆ ಇತ್ತೀಚೆಗೆ ಸಹಿ ಹಾಕಿತ್ತು.

ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಮಾರುಕಟ್ಟೆಗೆ ಬಂದ ನೂತನ ಸ್ವಿಫ್ಟ್ ವೇಟಿಂಗ್ ಪಿರೆಯಿಡ್ ಸುಮಾರು ಆರು ತಿಂಗಳಿದೆ. ಕಂಪನಿಯು ಈಗಾಗಲೇ ಒಂದು ಲಕ್ಷಕ್ಕಿಂತ ಹೆಚ್ಚು ನೂತನ ಸ್ವಿಫ್ಟ್ ಕಾರುಗಳನ್ನು ಮಾರಾಟ ಮಾಡಿದೆ.

English summary
Maruti Suzuki India Limited said it is trying to reduce the waiting period for the diesel based cars.
Story first published: Monday, February 6, 2012, 11:38 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark