ಮರ್ಸಿಡಿಸ್ ಬೆಂಝ್ ಎಂಎಲ್ ಕ್ಲಾಸ್ ಆಗಮನ ಸನ್ನಿಹಿತ

ಜರ್ಮನಿಯ ಐಷಾರಾಮಿ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್ ಬೆಂಝ್ ನೂತನ 201ರ ML Class ಸ್ಪೋರ್ಟ್ ಯುಟಿಲಿಟಿ ಕಾರನ್ನು ಮೇ 15ರಂದು ದೇಶದ ರಸ್ತೆಗೆ ಪರಿಚಯಿಸಲಿದೆ. ಎಂಎಲ್ ಕ್ಲಾಸಿನ ಪ್ರಥಮ ಬ್ಯಾಚ್ ಕಾರುಗಳನ್ನು ಸಿಬಿಯು ಹಾದಿ ಮೂಲಕ ಆಮದು ಮಾಡಿಕೊಳ್ಳಲು ಕಂಪನಿ ನಿರ್ಧರಿಸಿದೆ.

ನೂತನ ಎಂಎಲ್ ಕ್ಲಾಸ್ 2012 5 ಸೀಟಿನ ಸ್ಪೋರ್ಟ್ ಯುಟಿಲಿಟಿ ವಾಹನವಾಗಿದೆ. ಇದು ಬಿಎಂಡಬ್ಲ್ಯು ಎಕ್ಸ್5 ಮತ್ತು ಪೊರ್ಷ್ ಕಯಾನೆ ಕಾರುಗಳಿಗೆ ಪೈಪೋಟಿ ನೀಡಲಿದೆ. ಇದರ ದರ ಸುಮಾರು 70 ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

ಮರ್ಸಿಡಿಸ್ ಬೆಂಝ್ ಕಾರು 350 ಸಿಡಿಐ ಆವೃತ್ತಿ ಕಾರು ದೇಶದ ರಸ್ತೆಗಿಳಿಯಲಿದೆ. ಕಂಪನಿಯು ತದನಂತರ 250 ಸಿಡಿಐ ಆವೃತ್ತಿಯನ್ನು ಪರಿಚಯಿಸುವ ನಿರೀಕ್ಷೆಯಿದೆ. ಮುಂದಿನ 12-15 ತಿಂಗಳ ನಂತರ ಎಂಎಲ್63 ಎಎಂಜಿ ಆಗಮಿಸುವ ನಿರೀಕ್ಷೆಯಿದೆ.

ನೂತನ ಎಎಲ್ ಕ್ಲಾಸಿನ ಕಾರುಗಳು 2,987 ಸಿಸಿಯ ವಿ6 ಡೀಸೆಲ್ ಎಂಜಿನ್ ಹೊಂದಿರಲಿದೆ. ಇದು 258 ಹಾರ್ಸ್ ಪವರ್ ಮತ್ತು 620 ಎನ್ಎಂ ಟಾರ್ಕ್ ಪವರ್ ನೀಡಲಿದೆ. ಈ ಕಾರಲ್ಲಿ ಕೇವಲ 7.4 ಸೆಕೆಂಡಿನಲ್ಲಿ 0-100 ಕಿ.ಮೀ. ವೇಗ ಪಡೆಯಬಹುದಾಗಿದೆ. ಈ ಕಾರು 7ಜಿಟ್ರೊನಿಕ್ 7 ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರಲಿದೆ.

More from DriveSpark

Article Published On: Tuesday, May 8, 2012, 15:02 [IST]
English summary
German luxury carmaker Merecdes Benz will launch its new ML Class 2012 SUV in India on May 15th in New Delhi. The first batch of cars will come as Completely Built Units (CBU) while the carmaker would start assembling the SUV sometime later after its launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+