ತಲೆಬಿಸಿ ಮಾಡ್ಕೋಬೇಡಿ, ಮಿಟ್ಸುಬಿಸಿ ಮೀರಜ್ ಬರುತಾನ....

ಜಪಾನಿನ ಕಾರು ಕಂಪನಿಯ ಸಣ್ಣಕಾರೊಂದು ಯಾವಾಗ ಬರುತ್ತೆ ಎಂದು ಕಾದುಕುಳಿತವರು ತಲೆಬಿಸಿ ಮಾಡ್ಕೋಬೇಡಿ. ಮಿಟ್ಸುಬಿಸಿ ಕಂಪನಿಯ ಪರಿಸರ ಸ್ನೇಹಿ ಸಣ್ಣಕಾರು ಶೀಘ್ರದಲ್ಲಿ ದೇಶದ ವಾಹನ ಮಾರುಕಟ್ಟೆಗೆ ಆಗಮಿಸುವ ನಿರೀಕ್ಷೆಯಿದೆ.

ಕಂಪನಿಯು ಇಲ್ಲಿವರೆಗೆ ದೇಶಕ್ಕೆ ಹ್ಯಾಚ್ ಬ್ಯಾಕ್ ಕಾರೊಂದನ್ನು ಪರಿಚಯಿಸಿರಲಿಲ್ಲ. ಆದರೆ ನೂತನ ಮೀರಜ್ ಆಗಮಿಸಿದರೆ ಈ ಕೊರತೆ ನೀಗಲಿದೆ. ಕಂಪನಿಯು ದೇಶದಲ್ಲಿ ಈಗ ಪಜೆರೊ, ಔಟ್ಲಾಂಡರ್ ಎಸ್ ಯುವಿ ಮತ್ತು ಲಾನ್ಸರ್, ಸೆಡಿಲಾ ಸೆಡಾನ್ ಕಾರುಗಳನ್ನು ಮಾರಾಟ ಮಾಡುತ್ತಿದೆ.

"ಹ್ಯಾಚ್ ಬ್ಯಾಕ್ ಸೆಗ್ಮೆಂಟಿಗೂ ಭವಿಷ್ಯದಲ್ಲಿ ಸೇರ್ಪಡೆಯಾಗಲಿದ್ದೇವೆ" ಎಂದು ಮಿಟ್ಸುಬಿಸಿ ಮೋಟರ್ಸ್ ಕಾರ್ಪೊರೇಷನ್ ಜಪಾನಿನ ಪ್ರಧಾನ ವ್ಯವಸ್ಥಾಪಕ ಮೊಶಹಿಕೊ ಯೆಕಿ ಹೇಳಿದ್ದಾರೆ.

ಈಗ ಮಿಟ್ಸುಬಿಸಿ ಕಂಪನಿಯು ದೇಶದಲ್ಲಿ ಹಿಂದೂಸ್ತಾನ್ ಮೋಟರ್ ಜೊತೆಗೆ ಜಂಟಿ ಉದ್ಯಮ ಹೊಂದಿದೆ. ಆದರೆ ಜಂಟಿ ಉದ್ಯಮದ ಮೂಲಕ ಸಣ್ಣಕಾರು ಪರಿಚಯಿಸಲಾಗುವುದೇ ಎನ್ನುವ ಪ್ರಶ್ನೆಗೆ ಮಿಟ್ಸುಬಿಸಿ ಉತ್ತರಿಸಿಲ್ಲ. ಇತ್ತೀಚೆಗೆ ಕಂಪನಿಯು ಪಜೆರೊ ಸ್ಪೋರ್ಟ್ ಕಾರನ್ನು ಪರಿಚಯಿಸಿತ್ತು. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Wednesday, March 14, 2012, 10:29 [IST]
English summary
Japanese car maker Mitsubishi Motors is planning to launch a small car in the Indian market. It is Mitsubishi's Thai eco car Mirage that is expected to make way to the country. The Mirage, a five-seater hatchback, will be powered by a 1.2 litre petrol engine.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+