ಸಿಡಿಯಾ ಕಾರು ರಸ್ತೆಗೆ, ಯಾರಿವಳು ಕೆಂಪು ಸುಂದ್ರಿ?
ನೂತನ ಸಿಡಿಯಾ ಸೆಲೆಕ್ಟ್ ಕಾರಿನಲ್ಲಿರುವ ಆಂಡ್ರಾಯ್ಡ್ ಟ್ಯಾಬ್ಲೆಟನ್ನು ಬೇಕಾದ ಬದಿಗೆ ತಿರುಗಿಸಿಟ್ಟುಕೊಳ್ಳಬಹುದು. ಮುಂಭಾಗ ಅಥವಾ ಹಿಂಭಾಗದ ಸೀಟಿನ ಹೆಡ್ ರೆಸ್ಟಿಗೆ ಜೋಡಿಸಬಹುದಾಗಿದೆ. ಇಷ್ಟು ಮಾತ್ರವಲ್ಲದೇ ನೂತನ ಸಿಡಿಯಾ ಕಾರಿನಲ್ಲಿ 6.1 ಇಂಚಿನ ಟಚ್ ಸ್ಕ್ರೀನ್ ಇಂಟರ್ ಫೇಸ್ ಇರುವ ಕೆನ್ ವುಡ್ ಡಿವಿಡಿ ಪ್ಲೇಯರ್ ಕೂಡ ಇದೆ.
ಹೀಗೆ ನೂತನ ಸಿಡಿಯಾ ಕಾರಿಗೆ ಮಿಟ್ಸುಬಿಟಿ ಹಲವು ವಿನೂತನ ಫೀಚರುಗಳನ್ನು ಅಳವಡಿಸಿದೆ. ನೂತನ ಸಿಡಿಯಾ ಸೆಲೆಕ್ಟ್ ಕಾರಿನಲ್ಲಿ ರಿವರ್ಸ್ ಪಾರ್ಕಿಂಗ್ ಕ್ಯಾಮರಾ, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಟಿಲ್ಟ್ ಸ್ಟಿಯರಿಂಗ್, ಕಿಲೆಸ್ ಎಂಟ್ರಿ, ಪವರ್ ವಿಂಡೋಸ್, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಪವರ್ ಅಸಿಸ್ಟ್ ಇರುವ ಮುಂಭಾಗದ ಸೀಟು, ಅವಳಿ ಏರ್ ಬ್ಯಾಗ್, ಎಬಿಎಸ್ ಮತ್ತು ಇಬಿಡಿ ಇತ್ಯಾದಿ ಸ್ಟಾಂಡರ್ಡ್ ಫೀಚರುಗಳಿವೆ.
ನೂತನ ಸಿಡಿಯಾ ಸೆಲೆಕ್ಟ್ ಆವೃತ್ತಿಯು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ದೊರಕುತ್ತಿದೆ. ಎರಡು ಲೀಟರಿನ ನಾಲ್ಕು ಸಿಲಿಂಡರಿನ ಎಂಜಿನ್ 113 ಅಶ್ವಶಕ್ತಿ ಮತ್ತು 175 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಇದು 5 ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ.
ಹಳೆಯ ಸಿಡಿಯಾ ಆವೃತ್ತಿಗಿಂತ ನೂತನ ಸಿಡಿಯಾ ಕಾರಿನ ದರ 90 ಸಾವಿರ ರು. ಹೆಚ್ಚಾಗಿದೆ. ಮಧ್ಯಮ ಗಾತ್ರದ ಸೆಡಾನ್ ಸೆಗ್ಮೆಂಟಿನಲ್ಲಿ ಅಂತಹ ಹೇಳಿಕೊಳ್ಳವಂತಹ ಪ್ರತಿಸ್ಪರ್ಧಿಗಳು ಸಿಡಿಯಾ ಕಾರಿಗಿಲ್ಲ. ಯಾಕೆಂದರೆ ಸಿಡಿಯಾ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತಿಲ್ಲ. ಅತ್ಯುತ್ತಮ ಡ್ರೈವಿಂಗ್ ಅನುಭವ ಪಡೆಯಲು ಬಯಸುವ ಪೆಟ್ರೋಲ್ ಕಾರು ಪ್ರೇಮಿಗಳನ್ನು ನೂತನ ಸಿಡಿಯಾ ಸೆಲೆಕ್ಟ್ ಸೆಳೆಯುವ ನಿರೀಕ್ಷೆಯಿದೆ.


Click it and Unblock the Notifications
