ಮಿಟ್ಸುಬಿಸಿ ಮುಂದಿನ ಪೀಳಿಗೆಯ ಔಟ್ಲಾಂಡರ್ ಅನಾವರಣ
ಜಿನಿವಾದಲ್ಲಿ ನಡೆಯುತ್ತಿರುವ 82ನೇ ವಾಹನ ಪ್ರದರ್ಶನದಲ್ಲಿ ಮಿಟ್ಸುಬಿಸಿ ಮೋಟರ್ಸ್ ಕಾರ್ಪೊರೆಷನ್ ನೂತನ ತಲೆಮಾರಿನ ಔಟ್ಲಾಂಡರ್ ಕಾರನ್ನು ಅನಾವರಣ ಮಾಡಿದೆ. ಇದು ನೋಡಲು ಹಳೆಯ ಔಟ್ಲಾಂಡರ್ ಕಾರಿನಂತೆಯೇ ಇದೆ. (ಚಿತ್ರಗಳನ್ನು ನೋಡಿರಿ )
ನೂತನ ಔಟ್ಲಾಂಡರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತಿದೆ. 2.0 ಐ ಮಿವೆಕ್ ಪೆಟ್ರೋಲ್ ಅಥವಾ 2.2 ಮಿವೆಕ್ ಡೀಸೆಲ್ ಎಂಜಿನ್ ನಲ್ಲಿ ದೊರಕುವ ಔಟ್ಲಾಂಡರ್ ಆರು ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದೆ. ಇದು 2 ವೀಲ್ ಮತ್ತು 4 ವೀಲ್ ಡ್ರೈವ್ ಆಯ್ಕೆಯಲ್ಲಿ ದೊರಕುತ್ತಿದೆ.
ಆರಂಭದಲ್ಲಿ ಕಂಪನಿಯು ನೂತನ ಔಟ್ಲಾಂಡರನ್ನು ರಷ್ಯದಲ್ಲಿ ಹೊರತರಲಿದೆ. ನಂತರ ಇದು ಜಪಾನ್, ಚೈನಾ ಉತ್ತರ ಅಮೆರಿಕ ದೇಶಗಳಿಗೆ ಪ್ರಯಾಣ ಬೆಳೆಸಲಿದೆ. ಕೆಲವು ಸಮಯದ ನಂತರ ದೇಶದ ಮಾರುಕಟ್ಟೆಗೂ ಬರಲಿದೆ. ಭಾರತಕ್ಕೆ ನೂತನ ಔಟ್ಲಾಂಡರ್ ಆಗಮನ ಯಾವಾಗ ಎನ್ನುವ ಪ್ರಶ್ನೆಗೆ ಕಂಪನಿ ಇನ್ನೂ ಸ್ಪಷ್ಟ ಉತ್ತರ ನೀಡಿಲ್ಲ. (ಕನ್ನಡ ಡ್ರೈವ್ ಸ್ಪಾರ್ಕ್)
ನಮ್ ದೇಶದಲ್ಲಿ ಇತ್ತೀಚೆಗೆ ನಡೆದ ವಾಹನ ಜಾತ್ರೆಯ ಬೆರಗು>>


Click it and Unblock the Notifications









