ಭಾರತದತ್ತ ಹೆಜ್ಜೆಯನ್ನಿಟ್ಟ ಹಾಟಿ ಮಿಟ್ಸುಬಿಸಿ
ಪ್ರಸಕ್ತ ಸಾಲಿನಲ್ಲೇ ಸಾಗಿದ 82ನೇ ಜಿನಿವಾ ಅಂತರಾಷ್ಟ್ರೀಯ ವಾಹನ ಮೇಳದಲ್ಲಿ ಪ್ರದರ್ಶನಗೊಂಡಿದ್ದ ಮಿಟ್ಸುಬಿಸಿ ಔಟ್ಲಾಂಡರ್ ನಿಧಾನವಾಗಿ ಭಾರತದತ್ತ ಹೆಜ್ಜೆಯನ್ನಿಡುತ್ತಿದೆ.
ದೇಶದ ಗ್ರಾಹಕರಲ್ಲಿ ಡೀಸೆಲ್ ಎಂಜಿನ್ ಕಾರುಗಳ ಬೇಡಿಕೆಯನ್ನು ಪರಿಗಣಿಸಿ ಮಿಟ್ಸುಬಿಸಿ ಇಂತಹದೊಂದು ಮಾರಾಟ ತಂತ್ರವನ್ನು ಅನುಸರಿಸುತ್ತಿದೆ. ಹೆಚ್ಚು ಪರಿಷ್ಕೃತ ವಿನ್ಯಾಸವನ್ನು ಹೊಂದಿರುವ ಮಿಟ್ಸುಬಿಸಿ ಔಟ್ಲಾಂಡರ್ ಹೆಚ್ಚು ಆಕ್ರಮಣಕಾರಿ, ಸುರಕ್ಷಿತ ಹಾಗೂ ವಿಭಿನ್ನ ಶೈಲಿಯನ್ನು ಹೊಂದಿರಲಿದೆ.
ಮಿಟ್ಸುಬಿಸಿ ಔಟ್ಲಾಂಡರ್ ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಬಿಡುಗಡೆಯಾಗಲಿದೆ. ನೂತನ ಸ್ಲಿಮ್ ಫ್ರಂಟ್ ಏರೋಡೈನಾಮಿಕ್ ಗ್ರಿಲ್, ಹಾಕಿ ಆಕಾರದ ಕ್ರೋಮ್ಡ್ ಸ್ಟ್ರಿಪ್ಸ್, ಹೆಡ್‌ಲ್ಯಾಂಪ್, ಬಂಪರ್, ಬೆಲ್ಟ್‌ಲೈನ್ ಹಾಗೂ ಸಾಫ್ಟ್ ಕಲರ್ ಕಾರಿನ ಅಂದವನ್ನು ಹೆಚ್ಚಿಸಿದೆ.
ಸದ್ಯ ಹೊರ ಹೋಗುತ್ತಿರುವ ಮಿಟ್ಸುಬಿಸಿ ಪೆಟ್ರೋಲ್ ಎಂಜಿನ್ ಮಾತ್ರ ಹೊಂದಿದೆ. ಸದ್ಯ ಮುಂಬರುವ ಮಿಟ್ಸುಬಿಸಿ ಒಟ್ಟು 3 ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಇದರಲ್ಲಿ ಎರಡು ಪೆಟ್ರೋಲ್ (2.0 ಹಾಗೂ 2.4 ಲೀಟರ್) ಹಾಗೂ ಒಂದು ಡೀಸೆಲ್ (2.2 ಲೀಟರ್) ಎಂಜಿನ್ ಸೇರಿರಲಿದೆ. ಅದೇ ರೀತಿ ಪೆಟ್ರೋಲ್ ಎಂಜಿನ್ ಫೈವ್ ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಗೇರ್ ಬಾಕ್ಸ್ ಹಾಗೂ ಡೀಸೆಲ್ ಆವೃತ್ತಿ 6 ಸ್ಪೀಡ್ ಮ್ಯಾನುವಲ್ ಅಥವಾ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

2013 ಮಿಟ್ಸುಬಿಸಿ ಔಟ್ಲಾಂಡರ್ ಫ್ರಂಟ್ ಲುಕ್

2013 ಮಿಟ್ಸುಬಿಸಿ ಔಟ್ಲಾಂಡರ್ ಆಕರ್ಷಕ ನೋಟ

2013 ಮಿಟ್ಸುಬಿಸಿ ಔಟ್ಲಾಂಡರ್ ಸೈಡ್ ವ್ಯೂ

2013 ಮಿಟ್ಸುಬಿಸಿ ಔಟ್ಲಾಂಡರ್ ಸ್ಟೀರಿಂಗ್

2013 ಮಿಟ್ಸುಬಿಸಿ ಔಟ್ಲಾಂಡರ್ ಇಂಟಿರಿಯರ್ ವ್ಯೂ

2013 ಮಿಟ್ಸುಬಿಸಿ ಔಟ್ಲಾಂಡರ್ ಹಾಟ್ ಲುಕ್

ನೆಕ್ಸ್ಟ್ ಜನರೇಷನ್ ಔಟ್ಲಾಂಡರ್

2013 ಮಿಟ್ಸುಬಿಸಿ ಔಟ್ಲಾಂಡರ್ ರಿಯರ್ ವ್ಯೂ

2013 ಮಿಟ್ಸುಬಿಸಿ ಔಟ್ಲಾಂಡರ್ ವೀಲ್ ವಿನ್ಯಾಸ

2013 ಮಿಟ್ಸುಬಿಸಿ ಔಟ್ಲಾಂಡರ್ ಹೆಡ್‌ಲೈಟ್

ಕೆಂಪು ಸುಂದರಿ ಮಿಟ್ಸುಬಿಸಿ

ರೆಡ್ ಹಾಟಿ ಮಿಟ್ಸುಬಿಸಿ

ರೆಡ್ ಹಾಟಿ ಮಿಟ್ಸುಬಿಸಿ ಔಟ್ಲಾಂಡರ್ ಸೈಡ್ ವ್ಯೂ

2013 ಮಿಟ್ಸುಬಿಸಿ ಔಟ್ಲಾಂಡರ್ ಮತ್ತೊಂದು ಆಕರ್ಷಕ ನೋಟ


Click it and Unblock the Notifications








