ಸರತಿ ಸಾಲಿನಲ್ಲಿವೆ ಮಹೀಂದ್ರ ಕಂಪನಿಯ ಆರು ಕಾರುಗಳು

MM Planning to Launch Six New Models
ಎಕ್ಸ್ ಯುವಿ 5ಒಒ ಗೆಲುವಿನಿಂದ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಉತ್ಸಾಹ ಗರಿಗೆದರಿದೆ. ದೇಶದ ರಸ್ತೆಗೆ ಇನ್ನಷ್ಟು ನೂತನ ಕಾರುಗಳನ್ನು ಪರಿಚಯಿಸಲು ಕಂಪನಿ ಯೋಜಿಸಿದೆ. "ಗ್ರಾಹಕರ ಮೆಚ್ಚುಗೆ ಪಡೆದ ಎಕ್ಸ್ ಯುವಿ ಕಾರಿನಿಂದಾಗಿ ಇನ್ನಷ್ಟು ಹೊಸ ಕಾರುಗಳನ್ನು ಪರಿಚಯಿಸಲು ನಾವು ಯೋಜಿಸಿದ್ದೇವೆ" ಎಂದು ಕಂಪನಿಯ ಅಧ್ಯಕ್ಷರಾದ ಪವನ್ ಗೋಯೆಂಕಾ ಹೇಳಿದ್ದಾರೆ.

ಕಂಪನಿಯು ಆರಂಭದಲ್ಲಿ ರೇವಾ ಎನ್ಎಕ್ಸ್ಆರ್ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲಿದೆ. "ಎಲೆಕ್ಟ್ರಿಕ್ ಕಾರುಗಳಿಗೆ ಈಗ ಅಂತಹ ಬೇಡಿಕೆಗಳಿಲ್ಲ. ಆದರೆ ಭವಿಷ್ಯದ ಬೃಹತ್ ಮಾರುಕಟ್ಟೆಯಾಗುವ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ರೇವಾದಂತಹ ಕಾರುಗಳು ಪ್ರಮುಖ ಮೈಲುಗಲ್ಲಾಗಲಿವೆ" ಎಂದು ಗೋಯೆಂಕಾ ಹೇಳಿದ್ದಾರೆ.

ದೀಪಾವಳಿ ನಂತರ ಕಂಪನಿಯು ನೂತನ ಸ್ಪೋರ್ಟ್ ಯುಟಿಲಿಟ ಕಾರೊಂದನ್ನು ಕೂಡ ಪರಿಚಯಿಸಲಿದೆ. ನಂಬಿದರೆ ನಂಬಿ ಈ ಎಸ್ ಯುವಿ ದರ ಸುಮಾರು 5-6 ಲಕ್ಷ ರುಪಾಯಿ ಆಸುಪಾಸಿನಲ್ಲಿರಲಿದೆಯಂತೆ. "ಹ್ಯಾಚ್ ಬ್ಯಾಕ್ ಕಾರುಗಳಿಂದ ಕಾಂಪ್ಯಾಕ್ಟ್ ಕಾರುಗಳಿಗೆ ಜಂಪ್ ಮಾಡಲು ಬಯಸುವ ಗ್ರಾಹಕರಿಗೆ ಇದು ಅತ್ಯಂತ ಸೂಕ್ತವಾಗಿದೆ" ಎಂದವರು ಹೇಳಿದ್ದಾರೆ.

2012-13ರ ಆರ್ಥಿಕ ವರ್ಷದಲ್ಲಿ ರಸ್ತೆಗಿಳಿಯಲಿರುವ ಇನ್ನೊಂದು ಇಂಟ್ರೆಸ್ಟಿಂಗ್ ಕಾರೆಂದರೆ Rexton SUV. ರೆಕ್ಸ್ಟಾನ್ ಸ್ಪೋರ್ಟ್ ಕಾರು ಎಕ್ಸ್ ಯುವಿ 5ಒಒ ಕಾರಿನಂತೆ ಬೇಡಿಕೆ ಹೆಚ್ಚಾಗಲಿದೆ. ದೀಪಾವಳಿ ವೇಳೆಗೆ ಈ ಮೂರು ಕಾರುಗಳು ದೇಶದ ರಸ್ತೆಗಿಳಿಯಲಿದೆ.

2012-13ರ ಆರ್ಥಿಕ ವರ್ಷದ ಅಂತ್ಯದಲ್ಲಿ ಕಂಪನಿಯು ನಾಲ್ಕು ಮೀಟರಿಗಿಂತ ಕಡಿಮೆ ಉದ್ದದ ವೆರಿಟೊ ಕಾರನ್ನು ಪರಿಚಯಿಸಲಿದೆ. ಉಳಿದಂತೆ ಮೆಕ್ಸಿಕೊ ವ್ಯಾನೊಂದನ್ನು ಕಂಪನಿ ಪರಿಚಯಿಸಲಿದೆ. ಈ ಎಲ್ಲಾ ವಾಹನಗಳು ಸೇರಿದಂತೆ ಒಟ್ಟು ಆರು ವಾಹನಗಳನ್ನು ಪರಿಚಯಿಸಲು ಕಂಪನಿ ಯೋಜಿಸಿದೆ. ದೇಶದ ರಸ್ತೆಯಲ್ಲಿ ಮಹೀಂದ್ರ ಮೇನಿಯಾ ಸುರುವಾಗುವ ಸೂಚನೆ ದಟ್ಟವಾಗಿದೆ.

More from DriveSpark

Article Published On: Wednesday, February 8, 2012, 16:55 [IST]
English summary
Mahindra and Mahindra planning to launch six new models by next year in India. Company will launch Reva NXR, Rexton SUV, Sub compact New Verito and other cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+