ನರೇಂದ್ರ ಮೋದಿ ಜಪಾನ್ ಭೇಟಿ ರಹಸ್ಯ ಬಯಲು!
ಒಂದು ಸಣ್ಣ ಪ್ಲಾಷ್ ಬ್ಯಾಕ್. ಅಂದು ಪಶ್ಚಿಮ ಬಂಗಾಳದಲ್ಲಿ ಭೂವಿವಾದಕ್ಕೆ ಸಿಲುಕಿ ಟಾಟಾ ನ್ಯಾನೊ ಘಟಕ ಸಂಕಷ್ಟಕ್ಕೆ ಒಳಗಾಗಿತ್ತು. ಆ ಸಮಯದಲ್ಲಿ ನ್ಯಾನೊ ಘಟಕವನ್ನು ಗುಜರಾತಿಗೆ ಮೋದಿ ಕರೆಸಿಕೊಂಡಿರುವುದು ಸದ್ಯ ಹಿಸ್ಟರಿ. ಅದೇ ರೀತಿ ದೇಶದ ಕಾರು ಮಾರುಕಟ್ಟೆಯ ಅಗ್ರಜ ಮಾರುತಿ ಸುಜುಕಿಯ ಘಟಕವೊಂದನ್ನು ಗುಜರಾತ್ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ಮೋದಿ ಇದ್ದಾರೆ.
ಇತ್ತೀಚೆಗೆ ಮಾರುತಿ ಸುಜುಕಿ ಮಾನೆಸರ್ ಘಟಕದಲ್ಲಿ ನಡೆದ ಘಟನೆ ಎಲ್ಲರನ್ನು ದಿಗ್ಬ್ರಾಂತಿಗೆ ಒಳಪಡಿಸಿತ್ತು. ಉನ್ಮಾದ ನೌಕರರಿಂದ ಮಾನವ ಸಂಪನ್ಮೂಲ ವಿಭಾಗದ ಅವನೀಶ್ ಸಜೀವ ದಹನವಾಗಿದ್ದರು. ನೂರಾರು ಮಂದಿ ಗಾಯಗೊಂಡಿದ್ದರು. ಮಾನೆಸರ್ ಘಟಕದಲ್ಲಿ ಉತ್ಪಾದನೆ ಸ್ಥಗಿತವಾಗಿತ್ತು. ಕಂಪನಿಯ ಷೇರುಗಳು ಕುಸಿದಿದ್ದವು.
2 ವರ್ಷದ ಹಿಂದೆ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಸಿಂಗೂರ್‌ನಿಂದ ಟಾಟಾ ನ್ಯಾನೊ ಘಟಕವನ್ನು ಗುಜರಾತಿಗೆ ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಸುಜುಕಿ ಜೊತೆ ಈ ವಾರ ಮೋದಿ ಚರ್ಚೆ ನಡೆಸಲಿದ್ದಾರೆ. ಮಾರುತಿ ಮಾನೆಸರ್ ಘಟಕವು ಸ್ಥಳಾಂತರಗೊಳಿಸುವಲ್ಲಿ ಮೋದಿ ಯಶಸ್ವಿಯಾಗುತ್ತಾರೋ ಕಾದು ನೋಡಬೇಕಿದೆ.


Click it and Unblock the Notifications









