ಬೈಕ್ ರೇಸ್ ತಂಡ ಕಟ್ಟಿದ ಕ್ರಿಕೆಟಿಗ ಎಂಎಸ್ ಧೋನಿ

ದೇಶದ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತನ್ನದೇ ಸ್ವಂತ ಬೈಕ್ ರೇಸ್ ತಂಡವೊಂದನ್ನು ಪರಿಚಯಿಸಿದ್ದಾರೆ. ಈ ಮೂಲಕ ಮಹೀಂದ್ರ ಸಿಂಗ್ ಧೋನಿ ವಿಶ್ವ ಮೋಟರ್ ಸೈಕಲ್ ರೇಸಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ರಚಿಸಿದ ನೂತನ ಬೈಕ್ ರೇಸ್ ತಂಡಕ್ಕೆ "ಎಂಎಸ್ ಡಿ ಆರ್-ಎನ್ ಟೀಂ ಇಂಡಿಯಾ" ಎಂದು ನಾಮಕರಣ ಮಾಡಲಾಗಿದೆ. ಇದು ಎಫ್ಐಎಂ ವರ್ಲ್ಡ್ ಚಾಂಪಿಯನ್ ಷಿಪ್ ಸ್ಪರ್ಧೆಯಲ್ಲಿ ಭಾಗವಹಿಸಲಿದೆ. ಈ ತಂಡದದಲ್ಲಿ ಫ್ರಾನ್ಸ್ ಮತ್ತು ಇಂಗ್ಲೆಂಡಿನ ಬೈಕ್ ರೈಡರುಗಳಿದ್ದಾರೆ.

ಎಫ್ಐಎಂ ಸೂಪರ್ ಸ್ಪೋರ್ಟ್ಸ್ ವರ್ಲ್ಡ್ ಚಾಂಪಿಯನ್ ಷಿಪ್ ಒಟ್ಟು 17 ರೇಸ್ ಸ್ಪರ್ಧೆಗಳನ್ನು ಹೊಂದಿದೆ. ಅದರಲ್ಲಿ ಈಗಾಗಲೇ ಹತ್ತು ರೇಸುಗಳು ಪೂರ್ಣಗೊಂಡಿವೆ. ಮಹೇಂದ್ರ ಸಿಂಗ್ ಧೋನಿ ತಂಡವು ಇದರಲ್ಲಿ ಎರಡು ರೇಸ್ ಗಳಲ್ಲಿ ಭಾಗವಹಿಸಲಿದೆ. ಈ ರೇಸುಗಳು 2013ರಲ್ಲಿ ನಡೆಯುವ ನಿರೀಕ್ಷೆಯಿದೆ.

ಧೋನಿ ಬೈಕ್ ರೇಸ್ ತಂಡವು ದೇಶದಲ್ಲಿ ಮುಂದಿನ ವರ್ಷ ಸ್ಪರ್ಧಿಸಲಿದೆ. ಫ್ರಾನ್ಸಿನ ಫ್ಲೊರಿನೊ ಮಾರಿನೊ ಮತ್ತು ಬ್ರಿಟನಿನ ಡ್ಯಾನ್ ಲಿನ್ ಫೋಟ್ ಈ ತಂಡದ ಇಬ್ಬರು ಬೈಕ್ ರೈಡರುಗಳಾಗಿದ್ದಾರೆ. ಇವರಿಬ್ಬರು ಈಗಾಗಲೇ ಹಲವು ಬೈಕ್ ರೇಸ್ ಗಳಲ್ಲಿ ಹಲವು ವಿಕ್ಟರಿ ಗಳಿಸಿದ್ದಾರೆ.

ಬೈಕ್ ರೇಸನ್ನು ದೇಶದಲ್ಲಿ ಜನಪ್ರಿಯಗೊಳಿಸುವುದು MSD R-N Racing Team Indiaದ ಉದ್ದೇಶವೆಂದು ತಂಡದ ಮುಖ್ಯಸ್ಥ ಅಮಿತ್ ಸ್ಯಾಂಡಿಲ್ ಹೇಳಿದ್ದಾರೆ. ಜೊತೆಗೆ ಈ ತಂಡವು ಎಲ್ಲಾ ಏಷ್ಯಾ ದೇಶಗಳಲ್ಲಿ ಬೈಕ್ ಸ್ಪೋರ್ಟನ್ನು ಜನಪ್ರಿಯಗೊಳಿಸಲು ಯತ್ನಿಸಲಿದೆ ಎಂದು ಅವರು ಹೇಳಿದ್ದಾರೆ.

ದೇಶದಲ್ಲೂ ಬೈಕ್ ರೇಸ್ ಶೀಘ್ರದಲ್ಲಿ ಆರಂಭಿಸುವುದಾಗಿ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ. ದೇಶದ ಕ್ರಿಕೆಟ್ ತಂಡದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಬೈಕುಗಳೆಂದರೆ ಕ್ರೇಝು. ಅವರ ಸಂಗ್ರಹದಲ್ಲಿ ಹತ್ತು ಹಲವು ಬೈಕುಗಳಿವೆ. ಜೊತೆಗೆ ಟಿವಿಎಸ್ ಬೈಕ್ ಮತ್ತು ಅಶೋಕ್ ಲೇಲ್ಯಾಂಡ್ ಕಂಪನಿಗಳಿಗೆ ಧೋನಿ ಬ್ರಾಂಡ್ ರಾಯಭಾರಿ.

ಮಹೇಂದ್ರ ಸಿಂಗ್ ಧೋನಿ ರಾಂಚಿಯಲ್ಲಿರುವಾಗ ಜಾಸ್ತಿ ಬಳಸೋದು ಹರ್ಲಿ ಡೇವಿಡ್ ಸನ್. ಅವರಲ್ಲಿ ಯಮಹಾ ಎಕ್ಸ್ ಎಸ್ 650 ಮತ್ತು ಕವಾಸಕಿ ನಿಂಜಾ ಬೈಕುಗಳಿವೆ. ಧೋನಿಯಲ್ಲಿ ದುಬಾರಿ ಹಮ್ಮರ್ ಎಚ್ 2 ಕೂಡ ಇದೆ.

More from DriveSpark

Article Published On: Tuesday, August 28, 2012, 14:43 [IST]
English summary
Indian cricket captain MS Dhoni Launches Own Bike Racing Team. MS Dhoni's bike racing team has been named as the MSD R-N Team India and it is competing in the FIM Supersport World Championship. The team which is based in the UK will be riding the Kawasaki ZX-6R.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+