ದುಬಾರಿ ಬೆಲೆಯ ಜೀಪ್ ಗ್ರ್ಯಾಂಡ್ ಚರೋಕಿಯಲ್ಲಿ ಕ್ರಿಕೆಟರ್ ಧೋನಿ ಜಾಲಿ ಡ್ರೈವ್..!

ಕಳೆದ ತಿಂಗಳ ಹಿಂದಷ್ಟೇ ಕ್ರಿಕೆಟರ್ ಮಹೀಂದ್ರ ಸಿಂಗ್ ಧೋನಿ ತಮ್ಮ ಕನಸಿನ ಕಾರು ಮಾದರಿಯಾದ ಜೀಪ್ ಗ್ರ್ಯಾಂಡ್ ಚರೋಕಿ ಎಸ್‌ಯುವಿಯನ್ನು ಖರೀದಿ ಮಾಡಿದ್ದು, ಧೋನಿ ಗ್ಯಾರೇಜ್‌ನಲ್ಲಿ ಜೀಪ್ ಸಂಸ್ಥೆಯ ಹೊಸ ಕಾರು ಭಾರೀ ಸದ್ದು ಮಾಡುತ್ತಿದೆ.

ದುಬಾರಿ ಬೆಲೆಯ ಜೀಪ್ ಗ್ರ್ಯಾಂಡ್ ಚರೋಕಿಯಲ್ಲಿ ಕ್ರಿಕೆಟರ್ ಧೋನಿ ಜಾಲಿ ಡ್ರೈವ್..!

ಜೀಪ್ ಹೊಸ ಕಾರು ಕೈ ಸೇರಿದ ಸಂದರ್ಭದಲ್ಲಿ ಸೇನೆಯಲ್ಲಿ ಗೌರವ ಸೇವೆ ಸಲ್ಲಿಸುತ್ತಿದ್ದ ಧೋನಿ ಇದೀಗ ಮನೆಗೆ ಮರಳಿದ್ದು, ಬಿಡುವಿನ ವೇಳೆ ತಮ್ಮ ಹೊಸ ಕಾರಿನಲ್ಲಿ ಕುಟುಂಬ ಸಮೇತರಾಗಿ ಜಾಲಿ ಡ್ರೈವ್‌ ಮಾಡುತ್ತಿದ್ದಾರೆ. ಹಲವು ವಿಶೇಷತೆಗಳಿಗೆ ಕಾರಣವಾಗಿರುವ ಗ್ರ್ಯಾಂಡ್ ಚರೋಕಿ ಟ್ರ್ಯಾಕ್‌ಹ್ವಾಕ್ 6.2 ಕಾರು ಆವೃತ್ತಿಯು ಧೋನಿ ಅವರು ಕನಸಿನ ಕಾರು ಮಾದರಿಯಾಗಿದ್ದು, ಭಾರತದಲ್ಲಿ ಇದುವರೆಗೂ ಮಾರಾಟವಾದ ಏಕೈಕ ಕಾರು ಮಾದರಿ ಇದಾಗಿದೆ.

ದುಬಾರಿ ಬೆಲೆಯ ಜೀಪ್ ಗ್ರ್ಯಾಂಡ್ ಚರೋಕಿಯಲ್ಲಿ ಕ್ರಿಕೆಟರ್ ಧೋನಿ ಜಾಲಿ ಡ್ರೈವ್..!

ಗ್ರ್ಯಾಂಡ್ ಚರೋಕಿ ಆವೃತ್ತಿಯಲ್ಲಿ ಸಾಮಾನ್ಯ ಮಾದರಿಗಳು ಭಾರತದಲ್ಲಿ ಮಾರಾಟವಾಗಿದ್ದರೂ ಟ್ರಾಕ್‌ಹ್ವಾಕ್ 6.2 ಆವೃತ್ತಿಯು ಸಾಮಾನ್ಯ ಗ್ರ್ಯಾಂಡ್ ಚರೋಕಿಗಿಂತಲೂ ದುಬಾರಿ ಬೆಲೆ ಪಡೆದುಕೊಂಡಿದ್ದು, ಯುಎಸ್ಎ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾಗಿದೆ.

ದುಬಾರಿ ಬೆಲೆಯ ಜೀಪ್ ಗ್ರ್ಯಾಂಡ್ ಚರೋಕಿಯಲ್ಲಿ ಕ್ರಿಕೆಟರ್ ಧೋನಿ ಜಾಲಿ ಡ್ರೈವ್..!

ಸಾಮಾನ್ಯ ಜೀಪ್‌ ಗ್ರ್ಯಾಂಡ್ ಚೆರೋಕಿ ಎಸ್‌ಯುವಿ ಕಾರು ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ರೂ.97 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 1.40 ಕೋಟಿ ಬೆಲೆ ಪಡೆದುಕೊಂಡಿದ್ದರೆ ಧೋನಿ ಖರೀದಿ ಮಾಡಿರುವ ಆಮದು ಕಾರು ಆವೃತ್ತಿಯು ತುಸು ದುಬಾರಿ ಎನ್ನಿಸಲಿದೆ.

ದುಬಾರಿ ಬೆಲೆಯ ಜೀಪ್ ಗ್ರ್ಯಾಂಡ್ ಚರೋಕಿಯಲ್ಲಿ ಕ್ರಿಕೆಟರ್ ಧೋನಿ ಜಾಲಿ ಡ್ರೈವ್..!

ಗ್ರ್ಯಾಂಡ್ ಚೆರೊಕಿ ಟ್ರ್ಯಾಕ್‌ಹ್ವಾಕ್ 6.2 ಕಾರು ಮಾದರಿಯನ್ನು ಜೀಪ್ ಸಂಸ್ಥೆಯ ತನ್ನ ಬ್ರ್ಯಾಂಡ್ ಅನ್ನು ಉತ್ತಮಗೊಳಿಸಲು ಕಂಪ್ಲೀಟಿ ಬಿಲ್ಟ್ ಯೂನಿಟ್ (CBU) ಮಾರ್ಗದ ಮೂಲಕ ಭಾರತಕ್ಕೆ ಆಮದುಮಾಡಿಕೊಂಡು ಮಾರಾಟ ಮಾಡುತ್ತಿದ್ದು, ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ಹೊಸ ಕಾರು ರೂ. 1.80 ಕೋಟಿ ಬೆಲೆ ಪಡೆದುಕೊಂಡಿದೆ. ಹಾಗೆಯೇ ಸಾಮಾನ್ಯ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಎಂಜಿನ್

ಸಾಮರ್ಥ್ಯ ಹೊಂದಿದೆ.

ದುಬಾರಿ ಬೆಲೆಯ ಜೀಪ್ ಗ್ರ್ಯಾಂಡ್ ಚರೋಕಿಯಲ್ಲಿ ಕ್ರಿಕೆಟರ್ ಧೋನಿ ಜಾಲಿ ಡ್ರೈವ್..!

ಮತ್ತೊಂದು ವಿಶೇಷ ಅಂದ್ರೆ, ಗ್ರ್ಯಾಂಡ್ ಚರೋಕಿ ಟ್ರ್ಯಾಕ್‌ಹ್ವಾಕ್ 2019ರ ಪ್ರಥಮ ಆವೃತ್ತಿಯು ಮೊದಲಿಗೆ ಧೋನಿ ಗ್ಯಾರೇಜ್ ಪಾಲಾಗಿದ್ದು, ಅಮೆರಿಕದ ಪ್ರಸಿದ್ದ ಕಾರು ನಿರ್ಮಾಣ ಸಂಸ್ಥೆ ಜೀಪ್ ನಿರ್ಮಾಣದ ವಿಶೇಷ ಕಾರುಗಳಲ್ಲಿ ಇದು ಕೂಡಾ ಒಂದಾಗಿದೆ.

ದುಬಾರಿ ಬೆಲೆಯ ಜೀಪ್ ಗ್ರ್ಯಾಂಡ್ ಚರೋಕಿಯಲ್ಲಿ ಕ್ರಿಕೆಟರ್ ಧೋನಿ ಜಾಲಿ ಡ್ರೈವ್..!

2017ರಿಂದಲೇ ಭಾರತದಲ್ಲಿ ಮಾರಾಟಕ್ಕೆ ಲಭ್ಯವಾಗಿರುವ ಗ್ರ್ಯಾಂಡ್ ಚರೋಕಿ ಆಫ್ ರೋಡ್ ಎಸ್‌ಯುವಿ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಇದೀಗ ಮತ್ತಷ್ಟು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ದುಬಾರಿ ಬೆಲೆಯ ಜೀಪ್ ಗ್ರ್ಯಾಂಡ್ ಚರೋಕಿಯಲ್ಲಿ ಕ್ರಿಕೆಟರ್ ಧೋನಿ ಜಾಲಿ ಡ್ರೈವ್..!

ಬಾಲಿವುಡ್‌ನ ಹಲವು ನಟ-ನಟಿಯರ ಕಾರ್ ಗ್ಯಾರೇಜ್‌ನಲ್ಲಿ ಗ್ರ್ಯಾಂಡ್ ಚರೋಕಿ ಸ್ಥಾನ ಪಡೆದಿದ್ದು, ಐಷಾರಾಮಿ ಆಫ್ ರೋಡ್ ಕಾರು ಪ್ರಿಯರ ಆಯ್ಕೆಯಲ್ಲಿ ಮುಂಚೂಣಿಯಲ್ಲಿದೆ. ಗ್ರ್ಯಾಂಡ್ ಚೆರೋಕಿ ಎಸ್‍ಯುವಿ ಕಾರು ಲಿಮಿಟೆಡ್ 4x4 ಡೀಸೆಲ್, ಸಮ್ಮಿಟ್ ಪೆಟ್ರೋಲ್ ಮತ್ತು ಎಸ್ಆರ್‌ಟಿ 4x4 ಪೆಟ್ರೋಲ್ ಮತ್ತು ಟ್ರ್ಯಾಕ್‌ಹ್ವಾಕ್ 6.2 ಆವೃತ್ತಿಯಲ್ಲಿ ಖರೀದಿಸಬಹುದಾಗಿದೆ.

ದುಬಾರಿ ಬೆಲೆಯ ಜೀಪ್ ಗ್ರ್ಯಾಂಡ್ ಚರೋಕಿಯಲ್ಲಿ ಕ್ರಿಕೆಟರ್ ಧೋನಿ ಜಾಲಿ ಡ್ರೈವ್..!

ಸಾಮಾನ್ಯ ಗ್ರ್ಯಾಂಡ್ ಚೆರೋಕಿಯಲ್ಲಿ ಪೆಟ್ರೋಲ್ ಮಾದರಿಗಳು 3.0-ಲೀಟರ್ ಮತ್ತು 3.6-ಲೀಟರ್ ಪೆಂಟಾ‌ಸ್ಟರ್ ವಿ6 ಎಂಜಿನ್ ಜೋಡಣೆ ಮಾಡಿದ್ದರೆ ಧೋನಿ ಖರೀದಿ ಮಾಡಿರುವ ಗ್ರ್ಯಾಂಡ್ ಚರೋಕಿ ಟ್ರೈಲ್‌ಹ್ವಾಕ್ ಕಾರು 6.2 ಲೀಟರ್ ವಿ8 ಪೆಟ್ರೋಲ್ ಎಂಜಿನ್ ಸೌಲಭ್ಯವನ್ನು ಹೊಂದಿದೆ.

ದುಬಾರಿ ಬೆಲೆಯ ಜೀಪ್ ಗ್ರ್ಯಾಂಡ್ ಚರೋಕಿಯಲ್ಲಿ ಕ್ರಿಕೆಟರ್ ಧೋನಿ ಜಾಲಿ ಡ್ರೈವ್..!

6.2-ಲೀಟರ್(6,200 ಸಿಸಿ) ಎಂಜಿನ್ ಮೂಲಕ 700 ಬಿಎಚ್‌ಪಿ ಮತ್ತು 875-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಕೇವಲ 3.2 ಸೇಕೆಂಡುಗಳಲ್ಲಿ ಈ ಕಾರು ಸೊನ್ನೆಯಿಂದ 100 ಕಿ.ಮಿ ವೇಗ ಪಡೆದುಕೊಳ್ಳುವ ವೈಶಿಷ್ಟ್ಯತೆ ಹೊಂದಿದೆ.

ದುಬಾರಿ ಬೆಲೆಯ ಜೀಪ್ ಗ್ರ್ಯಾಂಡ್ ಚರೋಕಿಯಲ್ಲಿ ಕ್ರಿಕೆಟರ್ ಧೋನಿ ಜಾಲಿ ಡ್ರೈವ್..!

ಗ್ರ್ಯಾಂಡ್ ಚರೋಕಿ ಮಾದರಿಯು ವಿಶೇಷವಾಗಿ ಆಫ್ ರೋಡ್ ಕೌಶಲ್ಯ ಪ್ರದರ್ಶನಕ್ಕಾಗಿಯೇ ವಿನ್ಯಾಸಗೊಳಿಸಲಾಗಿದ್ದು, ಸ್ಪೋರ್ಟಿ ಬಂಪರ್, ಮಲ್ಟಿ ಡ್ರೈವ್ ಮೋಡ್, ಸುರಕ್ಷತೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ, ಅರಾಮದಾಯಕ ಪ್ರಯಾಣಕ್ಕಾಗಿ 20-ಇಂಚಿನ ಸ್ಪೋರ್ಟಿ ಅಲಾಯ್ ಚಕ್ರಗಳು, 9-ಏರ್‌ಬ್ಯಾಗ್‌ಗಳು, ಡ್ಯುಯಲ್ ಪನೋರಮಿಕ್ ಸನ್‌ರೂಫ್, ನಪ್ಪಾ ಲೆದರ್ ಆಸನಗಳು, ಹೆಚ್ಐಡಿ ಹೆಡ್‌ಲ್ಯಾಂಪ್‌ಗಳು, ಬ್ಲ್ಯೂ ರೇ ಎಂಟರ್‌ಟೈನ್‌ಮೆಂಟ್ ಸಿಸ್ಟಂ ಈ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

Most Read Articles

Kannada
English summary
Mahendra Singh Dhoni spotted in India’s most powerful SUV. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X