ಧೋನಿ ಹೆಲ್ ಕ್ಯಾಟ್ ಬೈಕಲ್ಲಿ ಮುದ್ದು ಮಗಳು ಝಿವಾ ತುಂಟಾಟ

ಮಹೇಂದ್ರ ಸಿಂಗ್ ಧೋನಿ ಪುತ್ರಿ ಝಿವಾ ದುಬಾರಿ ಹೆಲ್ ಕ್ಯಾಟ್ ಬೈಕಲ್ಲಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

By Nagaraja

ಭಾರತೀಯ ಏಕದಿನ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಮೋಟಾರುಸೈಕಲ್ ಗಳ ಮೇಲಿನ ಪ್ರೀತಿ-ಪ್ರೇಮ ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಚಿಕ್ಕ ವಯಸ್ಸಿನಲ್ಲೇ ಮಗಳು ಝಿವಾ ಕೂಡಾ ಇದೇ ಸಾಲಿಗೆ ಸೇರಿಕೊಂಡಿದ್ದಾರೆಯೇ ಎಂಬುದೀಗ ಹೆಚ್ಚಿನ ಆಸಕ್ತಿ ಕೆರಳಿಸಿದೆ.

ಧೋನಿ ಹೆಲಿಕ್ಯಾಟ್ ಬೈಕಲ್ಲಿ ಮುದ್ದು ಮಗಳು ಝಿವಾ ತುಂಟಾಟ

ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಸಿಂಗ್ ರಾವತ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪುತ್ರಿ ಝಿವಾ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

ಧೋನಿ ಹೆಲಿಕ್ಯಾಟ್ ಬೈಕಲ್ಲಿ ಮುದ್ದು ಮಗಳು ಝಿವಾ ತುಂಟಾಟ

ಧೋನಿ ಅವರ ನೆಚ್ಚಿನ ಬೈಕ್ ನಲ್ಲಿ ಮುದ್ದು ಮುದ್ದಾದ ಝಿವಾ ಫೋಸ್ ಕೊಡುತ್ತಿರುವುದು ಎಂತಹವರನ್ನು ಒಮ್ಮೆ ಅಕ್ಕರೆಯಿಂದ ಅಪ್ಪಿಕೊಂಡು ಚುಂಬಿಸುವಂತೆ ಪ್ರೇರೇಪಿಸುತ್ತಿದೆ.

ಧೋನಿ ಹೆಲಿಕ್ಯಾಟ್ ಬೈಕಲ್ಲಿ ಮುದ್ದು ಮಗಳು ಝಿವಾ ತುಂಟಾಟ

ಅಷ್ಟಕ್ಕೂ ಫೋಟೋ ಶೂಟಿಂಗ್ ಗಾಗಿ ಧೋನಿ ಮಗಳು ಝಿವಾ ಇಷ್ಟೆಲ್ಲ ತುಂಟಾಟ ಮಾಡುತ್ತಿದ್ದಳು ಎಂಬುದು ತಿಳಿದು ಬಂದಿದೆ.

ಧೋನಿ ಹೆಲಿಕ್ಯಾಟ್ ಬೈಕಲ್ಲಿ ಮುದ್ದು ಮಗಳು ಝಿವಾ ತುಂಟಾಟ

ವಿಶ್ವದ ಅತ್ಯಂತ ವಿರಳ ಸೆಲೆಬ್ರಿಟಿಗಳು ಮಾತ್ರ ದುಬಾರಿ ಎಕ್ಸ್132 ಹೆಲ್ ಕ್ಯಾಟ್ ಬೈಕ್ ಹೊಂದಿದ್ದಾರೆ. ಈ ಸಾಲಿನಲ್ಲಿ ಧೋನಿ ಕೂಡಾ ಸೇರಿಕೊಂಡಿದ್ದಾರೆ.

ಧೋನಿ ಹೆಲಿಕ್ಯಾಟ್ ಬೈಕಲ್ಲಿ ಮುದ್ದು ಮಗಳು ಝಿವಾ ತುಂಟಾಟ

ಹೆಲ್‌ಕ್ಯಾಟ್ ಬೈಕನ್ನು ಕಾನ್ಫೆಡರೇಟ್ ಕಂಪನಿಯು ಬರ್ಮಿಂಗ್‌ಹ್ಯಾಮ್, ಅಲಬಾಮ ಹಾಗೂ ಅಮೆರಿಕದಲ್ಲಿ ಉತ್ಪಾದಿಸುತ್ತಿದ್ದು, ಎರಡನೇ ಮಹಾಯುದ್ಧದ ಲೆಜೆಂಡರಿ ಎಫ್5ಎಫ್ ಹೆಲ್‌ಕ್ಯಾಟ್ ಯುದ್ಧ ವಿಮಾನದ ಹೆಸರನ್ನು ಇದಕ್ಕೆ ಇಡಲಾಗಿದೆ.

ಧೋನಿ ಹೆಲಿಕ್ಯಾಟ್ ಬೈಕಲ್ಲಿ ಮುದ್ದು ಮಗಳು ಝಿವಾ ತುಂಟಾಟ

ಕಸ್ಟಮೈಸ್ಡ್ ಬೈಕ್ ಆಗಿರುವ ಹೆಲ್ ಕ್ಯಾಟ್ ತನ್ನದೇ ಆದ ಆಕರ್ಷಕ ವಿನ್ಯಾಸ ಹೊಂದಿದೆ. ಹಾಗೆಯೇ ಶಕ್ತಿಶಾಲಿ ಎಂಜಿನ್ ಕೂಡಾ ಲಗತ್ತಿಸಲಾಗಿದೆ.

ಧೋನಿ ಹೆಲಿಕ್ಯಾಟ್ ಬೈಕಲ್ಲಿ ಮುದ್ದು ಮಗಳು ಝಿವಾ ತುಂಟಾಟ

ನೂತನ ಹೆಲ್ ಕ್ಯಾಟ್ ಬೈಕ್ 2,163 ಸಿಸಿಯ ವಿಟ್ವಿನ್ ಶಕ್ತಿಶಾಲಿ ಎಂಜಿನ್ ಹೊಂದಿದೆ. ಇದು 150 ಎನ್ಎಂ ಟಾರ್ಕ್ ಪವರ್ ಮತ್ತು 132 ಹಾರ್ಸ್ ಪವರ್ ನೀಡುತ್ತದೆ. ಹಾಗೆಯೇ ಫೈವ್ ಸ್ಪೀಡ್ ಮ್ಯಾನುಯಲ್ ಗೇರ್ ಹೊಂದಿದೆ.

ಧೋನಿ ಹೆಲಿಕ್ಯಾಟ್ ಬೈಕಲ್ಲಿ ಮುದ್ದು ಮಗಳು ಝಿವಾ ತುಂಟಾಟ

ಇನ್ನು ಹೆಲ್‌ಕ್ಯಾಟ್ ದರದ ಬಗ್ಗೆ ಮಾತನಾಡುವುದಾದರೆ 30 ಲಕ್ಷ ರು.ಗಳ ಅಸುಪಾಸಿನಲ್ಲಿದೆ. ಹಾಗಾಗಿ ಜನ ಸಾಮಾನ್ಯರ ಕೈಗೆಟಕುವುದು ಅಷ್ಟು ಸುಲಭದ ಮಾತಲ್ಲ.

More from DriveSpark

Article Published On: Friday, December 2, 2016, 12:17 [IST]
English summary
Dhoni’s Daughter Posing On His Hellcat Is The Most Adorable Thing You'll See Today
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+