ಹಮ್ಮರ್ ಮೀರಿಸಿದ ಎಂಎಸ್ ಧೋನಿ ಕಿಲ್ಲರ್ ಸ್ಕಾರ್ಪಿಯೊ

Written By:

ಭಾರತದ ಅತಿ ವಿರಳ ಸೆಲೆಬ್ರಿಟಿಗಳ ಮಾತ್ರ ಬಳಿಯಿರುವ ಹಮ್ಮರ್ ಕಾರಿನ ಹೆಮ್ಮೆಯ ಒಡೆಯ ಭಾರತೀಯ ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಎಂಬುದು ಎಲ್ಲರಿಗೂ ತಿಳಿದು ವಿಚಾರ. ಭಾರತೀಯ ತಂಡದ ಈ ಕೂಲ್ ಕಪ್ತಾನ ವಾಹನಗಳ ಮೇಲೆ ಅಷ್ಟೊಂದು ಪ್ರೀತಿಯನ್ನಿಟ್ಟುಕೊಂಡಿದ್ದಾರೆ.

ಹಮ್ಮರ್ ಮೀರಿಸಿದ ಎಂಎಸ್ ಧೋನಿ ಕಿಲ್ಲರ್ ಸ್ಕಾರ್ಪಿಯೊ

ಈಗ ಬಂದಿರುವ ತಾಜಾ ಮಾಹಿತಿಯಂತೆ ಮಹೇಂದ್ರ ಸಿಂಗ್ ಧೋನಿ ತಮ್ಮ ನೆಚ್ಚಿನ ಸ್ಕಾರ್ಪಿಯೊ ಕಾರಿಗೆ ವಿಶೇಷ ಬಣ್ಣವನ್ನು ಹೆಚ್ಚಿದ್ದಾರೆ.

ಹಮ್ಮರ್ ಮೀರಿಸಿದ ಎಂಎಸ್ ಧೋನಿ ಕಿಲ್ಲರ್ ಸ್ಕಾರ್ಪಿಯೊ

ಕೇವಲ ಬಣ್ಣ ಮಾತ್ರವಲ್ಲದೆ ಸ್ಕಾರ್ಪಿಯೊ ಕಾರನ್ನು ಐಕಾನಿಕ್ ಹಮ್ಮರ್ ಕಾರನ್ನು ಮೀರಿಸುವಂತಹ ರೀತಿಯಲ್ಲಿ ವಿನ್ಯಾಸಗೊಳಿಸಿದ್ದಾರೆ.

ಹಮ್ಮರ್ ಮೀರಿಸಿದ ಎಂಎಸ್ ಧೋನಿ ಕಿಲ್ಲರ್ ಸ್ಕಾರ್ಪಿಯೊ

ಇದು ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಕುತೂಹಲವನ್ನುಂಟು ಮಾಡಿದೆ. ಹಮ್ಮರ್ ನಂತಹ ಆಫ್ ರೋಡ್ ದೈತ್ಯ ಕಾರೇ ತನ್ನ ಬಳಿಯಿರುವಾಗ ಧೋನಿ ಅವರ ಸ್ಕಾರ್ಪಿಯೊ ಸ್ನೇಹ ಬಯಲಾಗಿದೆ.

ಹಮ್ಮರ್ ಮೀರಿಸಿದ ಎಂಎಸ್ ಧೋನಿ ಕಿಲ್ಲರ್ ಸ್ಕಾರ್ಪಿಯೊ

ತವರೂರು ರಾಂಚಿಯಿಂದ ಸ್ಟೇಡಿಯಂ ಬಳಿ ತೆರಳುತ್ತಿರುವಾಗ ವಿಶೇಷವಾಗಿ ಮಾರ್ಪಾಡುಗೊಳಿಸಿದ ಕೆಂಪು ವರ್ಣದ ಸ್ಕಾರ್ಪಿಯೊ ಕಾರಿನೊಂದಿಗೆ ಧೋನಿ ಪ್ರತ್ಯಕ್ಷಗೊಂಡಿದ್ದಾರೆ.

ಹಮ್ಮರ್ ಮೀರಿಸಿದ ಎಂಎಸ್ ಧೋನಿ ಕಿಲ್ಲರ್ ಸ್ಕಾರ್ಪಿಯೊ

ಧೋನಿ ಅವರ ಸ್ಕಾರ್ಪಿಯೊ ಕಾರಿನ ಮೇಲ್ಚಾವಣಿಯನ್ನು ಸಂಪೂರ್ಣವಾಗಿ ತೆರವುಗೊಳಿಸಿದ್ದು, ಓಪನ್ ಟಾಪ್ ಆಫ್ ರೋಡ್ ಕಾರಿನಂತೆ ವಿನ್ಯಾಸಗೊಳಿಸಿದ್ದಾರೆ.

ಹಮ್ಮರ್ ಮೀರಿಸಿದ ಎಂಎಸ್ ಧೋನಿ ಕಿಲ್ಲರ್ ಸ್ಕಾರ್ಪಿಯೊ

ಜೋಡಿ ಬಣ್ಣವು ಇಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಇದು ದೇಹವನ್ನು ಕೆಂಪು ಮತ್ತು ಮೇಲ್ಚಾವಣಿ ಕಪ್ಪು ವರ್ಣದಿಂದ ಕಂಗೊಳಿಸುತ್ತದೆ.

ಹಮ್ಮರ್ ಮೀರಿಸಿದ ಎಂಎಸ್ ಧೋನಿ ಕಿಲ್ಲರ್ ಸ್ಕಾರ್ಪಿಯೊ

ಬಂಪರ್ ಪ್ರೊಟೆಕ್ಟರ್, ಹುಡ್ ಸ್ಕೂಪ್, ಬುಲ್ ಬಾರ್, ಫ್ಲಡ್ ಲೈಟ್, ಹೊರಗಿನ ರಿಯರ್ ವ್ಯೂ ಮಿರರ್ ಜೊತೆಗೆ ಟರ್ನ್ ಇಂಡಿಕೇಟರ್, ವೀಲ್ ಆರ್ಚ್, ಅಲಾಯ್ ಚಕ್ರ, ಹೆಚ್ಚುವರಿ ಚಕ್ರ ಮತ್ತು ಡ್ಯುಯಲ್ ಟಿಪ್ ಕ್ರೋಮ್ ಎಕ್ಸಾಸ್ಟ್ ಕೊಳವೆಗಳು ಇತರೆ ಪ್ರಮುಖ ಆಕರ್ಷಣೆಯಾಗಿದೆ.

ಹಮ್ಮರ್ ಮೀರಿಸಿದ ಎಂಎಸ್ ಧೋನಿ ಕಿಲ್ಲರ್ ಸ್ಕಾರ್ಪಿಯೊ

ಸ್ಕಾರ್ಪಿಯೊ ಎ,ಬಿ,ಸಿ ಪಿಲ್ಲರ್ ಜೊತೆಗೆ ಡೋರ್ ನ ಅರ್ಧದಷ್ಟು ಭಾಗಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ. ಹಾಗೆಯೇ 'ಎಂಎಸ್' ಹಸ್ತಾಕ್ಷರವನ್ನು ಇದರಲ್ಲಿ ಲೇಪಿಸಲಾಗಿದೆ.

ಹಮ್ಮರ್ ಮೀರಿಸಿದ ಎಂಎಸ್ ಧೋನಿ ಕಿಲ್ಲರ್ ಸ್ಕಾರ್ಪಿಯೊ

ಕಾರಿನೊಳಗೆ ಹೆಚ್ಚುವರಿ ಸ್ಥಳಾವಕಾಶಕ್ಕಾಗಿ ಮೂರನೇ ಸಾಲಿನ ಆಸನಕ್ಕೆ ಕತ್ತರಿ ಪ್ರಯೋಗ ಮಾಡಲಾಗಿದೆ. ಇಲ್ಲಿ ಎರಡನೇ ಸಾಲಿನ ಸೀಟನ್ನು ಸ್ವಲ್ಪ ಹಿಂದುಗಡೆ ಎಳೆಯಲಾಗಿದೆ.

ಹಮ್ಮರ್ ಮೀರಿಸಿದ ಎಂಎಸ್ ಧೋನಿ ಕಿಲ್ಲರ್ ಸ್ಕಾರ್ಪಿಯೊ

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇದರಲ್ಲಿರುವ 2.2 ಲೀಟರ್ ಎಂಹಾಕ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ 290 ಎನ್ ಎಂ ತಿರುಗುಬಲದಲ್ಲಿ 120 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

English summary
Dhoni Gives His Hummer A Skip And Takes The Modified Scorpio
Story first published: Friday, December 23, 2016, 17:34 [IST]
Please Wait while comments are loading...

Latest Photos