ಮಹಾತ್ಮ ಗಾಂಧಿ ಜನಿಸಿದ ರಾಜ್ಯದಲ್ಲಿ ಫೋರ್ಡಿಗೆ ಮೋಡಿ

ಗುಜರಾತ್ ದೇಶದ ವಾಹನ ಹಬ್ ಆಗುವತ್ತ ದಾಪುಗಾಲಿಡುತ್ತಿದೆ. ಅದಕ್ಕೆ ಪೂರಕವೆಂಬತೆ ನರೇಂದ್ರ ಮೋದಿ ಸರಕಾರವು ಅಲ್ಲಿಗೆ ಆಗಮಿಸುವ ವಾಹನ ಕಂಪನಿಗಳಿಗೆ ಸಾಕಷ್ಟು ವಿನಾಯಿತಿಗಳನ್ನೂ ನೀಡುತ್ತಿದೆ. ಕರ್ನಾಟಕ ಸರಕಾರ ಕೂಡ ಹೋಂಡಾ ಕಂಪನಿಗೆ ತೆರಿಗೆ ವಿನಾಯಿತಿ ನೀಡಿತ್ತು.

ಇದೀಗ ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರಕಾರವು ಫೋರ್ಡ್ ಮತ್ತು ಪ್ಯೂಜೊ ಕಂಪನಿಗಳಿಗೆ ತೆರಿಗೆ ವಿನಾಯಿತಿ ಪ್ರಕಟಿಸಿದೆ. ತೆರಿಗೆ ವಿನಾಯಿತಿಯಲ್ಲಿ ವ್ಯಾಟ್, ಸ್ಟಾಂಪ್ ಡ್ಯೂಟಿ ಚಾರ್ಜ್ ಮತ್ತು ರಿಜಿಸ್ಟ್ರೇಷನ್ ಶುಲ್ಕಗಳು ಸೇರಿವೆ.

ಗುಜರಾತ್ ಸರಕಾರವು ಇವೆರಡು ಕಂಪನಿಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರೊಂದಿಗೆ ಮಾರುತಿ ಸುಜುಕಿ ನೂತನ ಘಟಕ ಪ್ರಸ್ತಾಪವನ್ನು ನರೇಂದ್ರ ಮೋದಿ ಸರಕಾರವು ಪರಿಶೀಲಿಸುತ್ತಿದೆ ಎಂದು ಮೂಲಗಳು ಹೇಳಿವೆ.

ಮಹಾತ್ಮ ಗಾಂಧಿ ಜನಿಸಿದ ರಾಜ್ಯದಲ್ಲಿ ಅಮೆರಿಕದ ಕಾರು ಕಂಪನಿ ಫೋರ್ಡ್ ಸುಮಾರು 100 ಕೋಟಿ ಡಾಲರ್ ಹೂಡಿಕೆ ಮಾಡಲಿದೆ. ಕಂಪನಿಯು ಸನಂದ್ ಪ್ರದೇಶದಲ್ಲಿ ವಾಹನ ಮತ್ತು ಎಂಜಿನ್ ಘಟಕ ನಿರ್ಮಿಸಲು ಉದ್ದೇಶಿಸಿದೆ. ಇದು ಸುಮಾರು 5 ಸಾವಿರ ಹೊಸ ಉದ್ಯೋಗ ಸೃಷ್ಟಿಸಲಿದೆ. ಈ ಘಟಕವು ವರ್ಷಕ್ಕೆ 2.40 ಲಕ್ಷ ವಾಹನಗಳನ್ನು ಮತ್ತು 2.70 ಲಕ್ಷ ಎಂಜಿನ್ ಗಳನ್ನು ಉತ್ಪಾದಿಸಲಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

ಓದಿ: ಕನ್ನಡಿಗರಿಗೆ ಜಾಬ್ ನೀಡದಿದ್ರೆ ವಿನಾಯಿತಿ ವಾಪಸ್

More from DriveSpark

Article Published On: Monday, February 27, 2012, 12:49 [IST]
English summary
Gujarat Narendra Modi government gives tax relief to renowned car makers Ford Motors and Peugeot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+