ಮಲ್ಲು ಗರ್ಲ್ ನವ್ಯಾ ನಾಯರ್‌ಗೆ ಲಾಟರಿ ಹೊಡೀತು
ದಕ್ಷಿಣ ಭಾರತದ ಬಹುಭಾಷಾ ನಟಿ ನವ್ಯಾ ನಾಯರ್ 2008ನೇ ಇಸವಿಯಲ್ಲಿ ಮೊದಲ ಬಾರಿಗೆ ಗಜ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿದ್ದರು. ಆ ಬಳಿಕ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ನಟಿಸಿರುವ ಈಕೆ ಕನ್ನಡದ ಹೊರತು ಮಲೆಯಾಳ ಹಾಗೂ ತಮಿಳು ಚಿತ್ರರಂಗದಲ್ಲಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದ್ದರು.
ಭಾಗ್ಯದ ಬಳೆಗಾರನಾಗಿ ಶಿವಣ್ಣ ಹಾಗೂ ಬಳೆಗಾತಿಯಾಗಿ ಪ್ರೇಕ್ಷಕ ಹೃದಯವನ್ನು ನಗಿಸಿದ್ದ ನವ್ಯಾ ನಾಯರ್ ಎರಡು ಬಾರಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಕನ್ನಡದಲ್ಲಿ ಗಜ, ನಮ್ ಯಾಜಮಾನ್ರು, ಭಾಗ್ಯದ ಬಳೆಗಾರ ಹಾಗೂ ಬಾಸ್ ಚಿತ್ರದ ಮೂಲಕ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದರು.
ಆದರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನವ್ಯಾ ನಾಯರ್ ಆ ಬಳಿಕ ಬೆಳ್ಳಿ ಪರದೆಯಿಂದ ದೂರವಾಗಿದ್ದರು. ಕಳೆದ ಕೆಲ ವರ್ಷಗಳಲ್ಲಿ ಬಣ್ಣದ ಬದುಕಿನಿಂದ ದೂರವುಳಿದಿದ್ದ ಈಕೆ ಮತ್ತೆ ಚಿತ್ರರಸಿಕರನ್ನು ರಂಜಿಸಲು ರಿ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ. ತಾಯ್ನಾಡಲ್ಲೇ ಬಣ್ಣ ಹಚ್ಚುತ್ತಿರುವ ನವ್ಯಾ ಮತ್ತೆ ಸಿನಿಮಾರಂಗದಲ್ಲಿ ಸಕ್ರಿಯವಾಗುತ್ತಿದ್ದಾರೆ.
ಈ ನಡುವೆ ಯುಇಎ ಏಕ್ಸ್‌ಚೇಂಜ್ ನಡೆಸಿರುವ 'ವಿನ್ ವಿನ್ ವಿನ್' ಸ್ಪರ್ಧೆಯಲ್ಲಿ ನವ್ಯಾಗೆ ಲಾಟರಿ ಹೊಡೆದಿದೆ. ಅಕ್ಟೋಬರ್ ತಿಂಗಳಲ್ಲಿ ವಿಮಾನದ ಟಿಕೇಟಿನ ಮೇಲೆ ನಡೆಸಿದ ಸ್ಪರ್ಧೆಯಲ್ಲಿ ಧನ್ಯಾ ನಾಯರ್ ಮೊದಲ ಬಹುಮಾನವಾದ ಟೊಯೊಟಾ ಇಟಿಯೋಸ್ ಕಾರು ತಮ್ಮದಾಗಿಸಿದ್ದಾರೆ. ಅಂದ ಹಾಗೆ ನವ್ಯಾಳ ನಿಜವಾದ ಹೆಸರು ಧನ್ಯಾ ನಾಯರ್ ಎಂಬುದಾಗಿದೆ.

ಟೊಯೊಟಾ ಇಟಿಯೋಸ್ ಕಾರು ಬಹುಮಾನವಾಗಿ ಪಡೆದ ಮಲಯಾಳ ಕುಟ್ಟಿ ನವ್ಯಾ ನಾಯರ್

Click it and Unblock the Notifications