ನೆದರ್ಲ್ಯಾಂಡ್‌ಗೆ ನ್ಯಾನೊ ಕಾರ್ ಕೊಂಡೊಯ್ದ ಪುಣ್ಯಾತ್ಮ

ಯುರೋಪಿಗೆ ಟಾಟಾ ಮೋಟರ್ಸ್ ಸಣ್ಣಕಾರು ನ್ಯಾನೊ ಇನ್ನೂ ಪ್ರವೇಶಿಸಿಲ್ಲ. ಆದರೂ ನೆದರ್ಲ್ಯಾಂಡ್ ರಸ್ತೆಯಲ್ಲಿ ಒಂದು ಟಾಟಾ ನ್ಯಾನೊ ಮೋಡಿ ಮಾಡುತ್ತಿದೆ. ಈ ಕಾರು ಅಲ್ಲಿಗೆ ತಲುಪಿದ್ದು ಹೇಗೆ? ಯಾರು ಕೊಂಡೊಯ್ದರು? ಇಂತಹ ಪ್ರಶ್ನೆಗಳು ಸಹಜ.

ಸಣ್ಣಕಾರು ಟಾಟಾ ನ್ಯಾನೊ ಜಗತ್ತಿನ ಗಮನ ಸೆಳೆದಿದೆ ಎನ್ನುವುದಕ್ಕೆ ಇದೊಂದು ಸ್ಪಷ್ಟ ನಿದರ್ಶನ. ನೆದರ್ಲ್ಯಾಂಡ್ ದೇಶದ Blijdatikrij.nl ವೆಬ್ ತಾಣದ ಮಾಲೀಕನೇ ಭಾರತದ ನ್ಯಾನೊ ಕಾರನ್ನು ಆಮದು ಮಾಡಿಕೊಂಡ ವ್ಯಕ್ತಿ. ಈತ ಈ ಕಾರನ್ನು ಕೊಂಚ ಮಾರ್ಪಾಡು ಮಾಡಿದ್ದಾನೆ.

ಈತನ ಕಾರುಗಳನ್ನು ಮಾಡಿಫೈ ಮಾಡುವಲ್ಲಿಯೂ ಗುರುತಿಸಿಕೊಂಡಿದ್ದಾನೆ. ಇತ್ತೀಚೆಗೆ ದೇಶದ ನ್ಯಾನೊ ಕಾರನ್ನು ಆಮದು ಮಾಡಿಕೊಂಡು ರಿಜಿಸ್ಟ್ರೇಷನ್ ಮಾಡಿಸಿಕೊಂಡಿದ್ದಾನೆ. ಕಡಿಮೆ ವೆಚ್ಚದಾಯಕ, ಸುರಕ್ಷತೆಯ ಮತ್ತು ವೈಯಕ್ತಿಕ ಸವಾರಿಗೆ ಸೂಕ್ತವಾಗಿರುವ ನ್ಯಾನೊ ಕಾರು ತನ್ನ ಗಮನ ಸೆಳೆದಿರುವುದಾಗಿ ಆತ ಹೇಳಿಕೊಂಡಿದ್ದಾನೆ.

ನ್ಯಾನೊ ಕಾರಿಗೆ ಸುಮಾರು 625 ಯುರೋ ನೀಡಿ ಆಮದು ಮಾಡಿಕೊಂಡಿದ್ದಾನೆ. ಜೊತೆಗೆ ಅದನ್ನು ಮಾಡಿಫೈ ಮಾಡಲು ಸುಮಾರು 600 ಯುರೋ ವೆಚ್ಚ ಮಾಡಿದ್ದಾನೆ. ಈಗ ನೆದರ್ಲ್ಯಾಂಡಿನಲ್ಲಿ ಈತನ ನ್ಯಾನೊ ಕಾರು ಹೆಚ್ಚಿನ ಜನರ ಗಮನ ಸೆಳೆಯಲು ಯಶಸ್ವಿಯಾಗಿದೆಯಂತೆ.

ಈತ ಈ ನ್ಯಾನೊ ಕಾರನ್ನು ಜನರಿಗೆ ಟೆಸ್ಟ್ ಡ್ರೈವ್ ಮಾಡುವ ಅವಕಾಶವನ್ನೂ ನೀಡಿದ್ದಾನೆ. ಈ ಕುರಿತು ತನ್ನ ವೆಬ್ ತಾಣದಲ್ಲಿ ಜಾಹೀರಾತು ನೀಡಿದ್ದಾನೆ.

ದೇಶದಲ್ಲಿ ಸುಮಾರು 1.5 ಲಕ್ಷ ಆರಂಭಿಕ ದರವಿರುವ ನ್ಯಾನೊ ಜಗತ್ತಿನ ಅಗ್ಗದ ಕಾರಾಗಿದೆ.

More from DriveSpark

Article Published On: Monday, May 7, 2012, 15:22 [IST]
English summary
You can see a Tata Nano in Netherlands even before its launch in the country. An auto enthusiast, Blijdatikrij.nl, who is also an online parts provider; imported, modified and registered the Nano in Netherlands recently.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+