ದೀರ್ಘ ಕಾಯುವಿಕೆ ಅಂತ್ಯ; ರಸ್ತೆಗಿಳಿದ ಆಲ್ಟೊ 800

ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ, ಈ ಹಬ್ಬದ ಸೀಸನಿನಲ್ಲಿ ಸಂಪೂರ್ಣವಾಗಿಯೂ ಹೊಸತನ ಹೊಂದಿರುವ ಆಲ್ಟೊ 800 ಕಾರನ್ನು ಬಿಡುಗಡೆ ಮಾಡಿದೆ. ಇದರೊಂದಿಗೆ ಗ್ರಾಹಕರ ದೀರ್ಘ ಕಾಯುವಿಕೆಯು ಅಂತ್ಯಗೊಂಡಂತಾಗಿದ್ದು, ಅಲ್ಟೊ 800 ಕಾರಿಗೆ ಈಗಾಗಲೇ 10,000 ಬುಕ್ಕಿಂಗ್ ಸಂಖ್ಯೆ ದಾಟಿರುವುದು ಸುಜುಕಿ ಬ್ರಾಂಡ್‌ಗೆ ಸಾಕ್ಷಿಯಾಗಿದೆ.

ಪೆಟ್ರೋಲ್ ಎಂಜಿನ್ ಆಲ್ಟೊ 800 ದರ ಮಾಹಿತಿ:

  • ಎಸ್‌ಟಿಡಿ- 2.44 ಲಕ್ಷ ರು.
  • ಎಲ್‌ಎಕ್ಸ್- 2.76 ಲಕ್ಷ ರು.
  • ಎಲ್‌ಎಕ್ಸ್‌ಐ- 2.99 ಲಕ್ಷ ರು.

ಸಿಎನ್‌ಜಿ ಆಲ್ಟೊ 800 ದರ ಮಾಹಿತಿ:

  • ಎಸ್‌ಟಿಡಿ- 3.19 ಲಕ್ಷ ರು.
  • ಎಲ್‌ಎಕ್ಸ್- 3.37 ಲಕ್ಷ ರು.
  • ಎಲ್‌ಎಕ್ಸ್‌ಐ- 3.7 ಲಕ್ಷ ರು.

ಸಣ್ಣ ಕಾರು ನಿರ್ಮಿಸುವುದರಲ್ಲಿ ಪ್ರಸಿದ್ಧಿ ಪಡೆದಿರುವ ಮಾರುತಿ, ಆಲ್ಟೊ 800 ನೂತನ ಆವೃತ್ತಿ ಮುಖಾಂತರ ಟಾಟಾ ನ್ಯಾನೊ ಹಾಗೂ ಹ್ಯುಂಡೈ ಇಯೋನ್‌ಗೆ ಪ್ರಬಲ ಪೈಪೋಟಿ ನೀಡಲು ಸಿದ್ಧಗೊಂಡಿದೆ. ಹೊಸ ವಿನ್ಯಾಸ, ಸುಧಾರಿತ ಗೇರ್ ಶಿಫ್ಟ್, ಹಿಂಭಾಗದ ಪ್ರಯಾಣಿಕರಿಗೆ ಕಾಲು ಚಾಚಲು ಹೆಚ್ಚಿನ ಸ್ಥಳಾವಕಾಶ ಒದಗಿಸಿರುವುದು ಹೊಸ ಕಾರಿನ ವೈಶಿಷ್ಟ್ಯಗಳಾಗಿವೆ.

ಪೆಟ್ರೋಲ್ ಹಾಗೂ ಬಡ್ಡಿದರ ಏರಿಕೆ, ವಹಿವಾಟು ಕುಸಿತ ಇಂತಹ ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸುವ ವಿಶ್ವಾಸವನ್ನು ಕಂಪನಿ ಹೊಂದಿದೆ. ನೂತನ ಆಲ್ಟೊ 800 ಸಿಎನ್‌ಜಿ ಆಯ್ಕೆಯಲ್ಲೂ ಲಭ್ಯವಿರಲಿದೆ.

ಇಂಧನ ಕ್ಷಮತೆ
ನೂತನ ಆಲ್ಟೊ 800 ಪ್ರತಿ ಲೀಟರ್‌ಗೆ 22.74 ಕೀ. ಮೀ. ಇಂಧನ ಕ್ಷಮತೆ ಹೊಂದಿರುವುದು ಕಾರಿನ ಪ್ರಮುಖ ಫೀಚರ್ ಆಗಿದೆ. ಇದು ಈ ಹಿಂದಿನ ಮಾದರಿಗೆ ಹೋಲಿಸಿದಾಗ ಶೇಕಡಾ 15ರಷ್ಟು ಹೆಚ್ಚಾಗಿದೆ. ಈ ಮೂಲಕ ಗ್ರಾಹಕರ ಅಚ್ಚುಮೆಚ್ಚಿನ ಕಾರು ಎನಿಸಿಕೊಳ್ಳಲು ಸಜ್ಜಾಗಿ ನಿಂತಿದೆ.

ಕಾರು ವೆರಿಯಂಟ್:
ಒಟ್ಟು ಆರು ವೆರಿಯಂಟ್‌ಗಳಲ್ಲಿ ಕಾರು ಲಭ್ಯವಿರಲಿದೆ. ಸಿಎನ್‌ಜಿ ಹಾಗೂ ಪೆಟ್ರೋಲ್ ಆವೃತ್ತಿಗಳಲ್ಲಿ ತಲಾ ಮೂರರಂತೆ ಬಿಡುಗಡೆಯಾಗಲಿದೆ.

ಇಂಟಿರಿಯರ್:
ಫ್ಯಾಶನ್ ಆಂಡ್ ಟ್ರೆಂಡಿ ಲುಕ್
ಸ್ಪೋರ್ಟ್ ಸ್ಟೈಲಿಷ್ ಹೆಡ್‌ಲ್ಯಾಂಪ್ಸ್
ಬೆಟರ್ ಹೆಡ್‌ರೂಂ ಆಂಡ್ ಲೆಗ್‌ರೂಂ

ಕಲರ್:
ಫ್ರೋಸ್ಟ್ ಬ್ಲೂ, ಗ್ರಾನೈಟ್ ಗ್ರೇ, ಸುಪಿರಿಯರ್ ವೈಟ್, ಬ್ಲಾಜಿಂಗ್ ರೆಡ್, ಸಿಲ್ಕಿ ಸಿಲ್ವರ್ ಹಾಗೂ ಟರ್ಕ್ಯೂ ಬ್ಲೂ ಸೇರಿದಂತೆ ಆರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗಲಿದೆ.

ಮೈಲೇಜ್:
ಪೆಟ್ರೋಲ್ ಎಂಜಿನ್ ಮಾರುತಿ ಆಲ್ಟೊ 800 ಆವೃತ್ತಿ ಪ್ರತಿ ಲೀಟರ್‌ಗೆ 23 ಕೀಲೋ ಮೀಟರ್ ಇಂಧನ ಕ್ಷಮತೆ ನೀಡಲಿದೆ. ಮತ್ತೊಂದೆಡೆ ಸಿಎನ್‌ಜಿ ಆವೃತ್ತಿಯು ಪ್ರತಿ ಲೀಟರ್‌ಗೆ ಗರಿಷ್ಠ 31 ಕೀಲೋ ಮೀಟರ್ ಮೈಲೇಜ್ ನೀಡಲಿದೆ

ಮಾರುತಿ ನಿರೀಕ್ಷೆ...
ಕಳೆದ ಸಾಲಿಗೆ ಹೋಲಿಗೆ ಹೋಲಿಸಿದರೆ ಆಲ್ಟೊ ಮಾರಾಟವು ಎಪ್ರಿಲ್-ಆಗಸ್ಟ್ ಅವಧಿಗಳಲ್ಲಿ ಶೇಕಡಾ 34.83ರಷ್ಟು ಕುಸಿದಿತ್ತು. ಈ ಅವಧಿಯಲ್ಲಿ 89,000 ಯುನಿಟ್ ಮಾತ್ರ ಸೇಲ್‌ ಆಗಿದ್ದರೆ ಕಳೆದ ಬಾರಿ 1.22 ಲಕ್ಷ ಯುನಿಟ್ ಆಗಿತ್ತು. ಕಳೆದ ಕೆಲವು ವರ್ಷಗಳಲ್ಲಿ ಗ್ರಾಹಕರ ಅಚ್ಚುಮೆಚ್ಚಿನ ಕಾರು ಎನಿಸಿಕೊಂಡಿದ್ದ ಮಾರುತಿ ಆಲ್ಟೊವನ್ನು ಪ್ರಸಕ್ತ ಸಾಲಿನಲ್ಲಿ ಸ್ವಿಫ್ಟ್ ಹಿಮ್ಮೆಟ್ಟಿಸಿತ್ತು. ಹಾಗಾಗಿ ಆಲ್ಟೊ 800 ಆವೃತ್ತಿಯು ಮಾರುತಿ ಸುಜುಕಿ ಇಂಡಿಯಾ ಪಾಲಿಗೆ ನಿರ್ಣಾಯಕವೆನಿಸಿದೆ.

ದೇಶಿಯ ಮಾರುಕಟ್ಟೆಗೆ 2001ರಲ್ಲಿ ಪ್ರವೇಶಿಸಿದ್ದ ಆಲ್ಟೊ ಈ ವರೆಗೆ 20 ಲಕ್ಷಕ್ಕೂ ಹೆಚ್ಚು ಯುನಿಟ್‌ ಮಾರಾಟವಾಗಿವೆ. ಅಲ್ಲದೆ 2.47 ಯುನಿಟ್‌ಗಳನ್ನು ರಫ್ತು ಮಾಡಲಾಗಿತ್ತು.

Article Published On: Tuesday, October 16, 2012, 13:00 [IST]
English summary
India's largest car maker Maruti Suzuki is gearing up to regain lost ground in the small car segment with the launch of a completely new version of maruti alto 800
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+