10 ಸಾವಿರ ಬುಕ್ಕಿಂಗ್; ಆಲ್ಟೊ 800 ದರ 2.44 ಲಕ್ಷ ರು..!

ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿಯ ನೂತನ ಆಲ್ಟೊ 800 ಬಿಡುಗಡೆ ಮೊದಲೇ 10 ಸಾವಿರ ಬುಕ್ಕಿಂಗ್ ಗಿಟ್ಟಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಗ್ರಾಹಕರು ಕಂಪನಿ ಮೇಲಿಸಿರುವ ನಂಬಿಕೆಯೇ ಇದೀಗ ಪ್ರತಿಫಲಿಸುತ್ತಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.

ಕಳೆದ 11 ವರ್ಷಗಳಲ್ಲಿ ದೇಶದ ಆಟೋ ಜಗತ್ತಿನಲ್ಲಿ ಅಲೆಯೆಬ್ಬಿಸಿದ್ದ ಮಾರುತಿ ಅಲ್ಟೊ ದೇಶಿಯ ಮಾರುಕಟ್ಟೆಯಲ್ಲಿ 20 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿದ್ದವು. ಇದೀಗ ದೀಪಾವಳಿ ಹಾಗೂ ದಸಾರಾ ಹಬ್ಬದ ಸೀಸನಿನಲ್ಲಿ ಹೊಸ ವಿನ್ಯಾಸಗಳೊಂದಿಗೆ ರಸ್ತೆಗೆ ಆಗಮಿಸಿರುವ ಆಲ್ಟೊ 800 ಅನೇಕ ಹೊಸ ಫೀಚರ್‌ಗಳನ್ನು ಹೊಂದಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸುಜುಕಿ ಹಾಗೂ ಮಾರುತಿ ಜತೆಯಾಗಿ ಅಭಿವೃದ್ಧಿಪಡಿಸಿರುವ ಹೊಸ ಆಲ್ಟೊ 800 ಕಾರು ತಯಾರಿ ಮಾಡುವಲ್ಲಿ 200 ಎಂಜಿನಿಯರ್‌ಗಳು ಕೆಲಸ ನಿರ್ವಹಿಸಿದ್ದರು. ಅಂತೆಯೇ ಲಾಂಚ್ ಮೊದಲೇ (ಅ. 10) 10 ಸಾವಿರಕ್ಕೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಪ್ರಮುಖವಾಗಿಯೂ ಯುವ ಗ್ರಾಹಕರನ್ನು ಗುರಿಯಾರಿಸಿಕೊಂಡು ಆಲ್ಟೊ 800 ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿಗಳಲ್ಲಿ ತಲಾ ಮೂರು ಆವೃತ್ತಿಗಳಲ್ಲಿ ಕಾರು ತಲುಪಿದೆ. ಪೆಟ್ರೋಲ್ ಎಂಜಿನ್ ಮಾರುತಿ ಆಲ್ಟೊ 800 ಆವೃತ್ತಿ ಪ್ರತಿ ಲೀಟರ್‌ಗೆ 23 ಕೀಲೋ ಮೀಟರ್ ಇಂಧನ ಕ್ಷಮತೆ ನೀಡಲಿದೆ. ಸಿಎನ್‌ಜಿ ಆವೃತ್ತಿಯು ಪ್ರತಿ ಲೀಟರ್‌ಗೆ ಗರಿಷ್ಠ 31 ಕೀಲೋ ಮೀಟರ್ ಮೈಲೇಜ್ ನೀಡಲಿದೆ.

ಮಾರುತಿ ಆಲ್ಟೊ 800 ದರ ಮಾಹಿತಿ

ಮಾರುತಿ ಆಲ್ಟೊ 800 ದರ ಮಾಹಿತಿ

ಪೆಟ್ರೋಲ್ ಎಂಜಿನ್ ಆಲ್ಟೊ 800 ದರ ಮಾಹಿತಿ:

ಎಸ್‌ಟಿಡಿ- 2.44 ಲಕ್ಷ ರು.

ಎಲ್‌ಎಕ್ಸ್- 2.76 ಲಕ್ಷ ರು.

ಎಲ್‌ಎಕ್ಸ್‌ಐ- 2.99 ಲಕ್ಷ ರು.

ಪೆಟ್ರೋಲ್+ಸಿಎನ್‌ಜಿ ಆಲ್ಟೊ 800 ದರ ಮಾಹಿತಿ:

ಎಸ್‌ಟಿಡಿ- 3.19 ಲಕ್ಷ ರು.

ಎಲ್‌ಎಕ್ಸ್- 3.37 ಲಕ್ಷ ರು.

ಎಲ್‌ಎಕ್ಸ್‌ಐ- 3.7 ಲಕ್ಷ ರು.

ಮಾರುತಿ ಆಲ್ಟೊ 800

ಮಾರುತಿ ಆಲ್ಟೊ 800

ಫ್ರೋಸ್ಟ್ ಬ್ಲೂ, ಗ್ರಾನೈಟ್ ಗ್ರೇ, ಸುಪಿರಿಯರ್ ವೈಟ್, ಬ್ಲಾಜಿಂಗ್ ರೆಡ್, ಸಿಲ್ಕಿ ಸಿಲ್ವರ್ ಹಾಗೂ ಟರ್ಕ್ಯೂ ಬ್ಲೂ ಕಲರ್‌ಗಳಲ್ಲಿ ಲಭ್ಯವಿರಲಿದೆ.

ಇಂಟಿರಿಯರ್ ಕಲರ್- ಗ್ರೇ ಹಾಗೂ ಬ್ರೌನ್

ಮಾರುತಿ ಸುಜುಕಿ ಆಲ್ಟೊ 800 ಫೀಚರ್ಸ್

ಮಾರುತಿ ಸುಜುಕಿ ಆಲ್ಟೊ 800 ಫೀಚರ್ಸ್

ಮಾರುತಿ ಸುಜುಕಿ ಆಲ್ಟೊ 800 ಫೀಚರ್ಸ್

ಟರ್ಕ್ಯೂ 69ಎನ್‌ಎಮ್@3500 ಆರ್‌ಪಿಎಂ ಎಂಜಿನ್

ಬೂಟ್ ಸ್ಪೇಸ್ 177 ಲೀಟರ್ಸ್

ರಿಮೋಟ್ ಟೈಲ್ ಗೇಟ್ ಓಪನರ್

ಫ್ರಂಟ್ ಪವರ್ ವಿಂಡೋಸ್

ಡಿಜಿಟಲ್ ಕ್ಲಾಕ್, ಸ್ಪೀಡ್‌ಮೀಟರ್

ಮಾರುತಿ ಸುಜುಕಿ ಆಲ್ಟೊ 800 ಫೀಚರ್ಸ್

ಮಾರುತಿ ಸುಜುಕಿ ಆಲ್ಟೊ 800 ಫೀಚರ್ಸ್

ಎಂಜಿನ್: 796 ಸಿಸಿ, 3 ಸಿಲಿಂಡರ್, 4 ವಾಲ್ವೆ ಪರ್ ಸಿಲಿಂಡರ್

ಪವರ್: 47.5 ಬಿಎಚ್‌ಪಿ ಎಟ್ 6000 ಆರ್‌ಪಿಎಮ್

ಟರ್ಕ್ಯೂ: 69 ಎನ್‌ಎಂ ಎಟ್ 3500 ಆರ್‌ಪಿಎಮ್

ಟ್ರಾನ್ಸ್‌ಮಿಷನ್: 5-ಸ್ಪೀಡ್ ಮ್ಯಾನುವಲ್

ಲೆಂಗ್ತ್: 1490 ಎಂಎಂ

ಎತ್ತರ: 1475 ಎಂಎಂ

ವೀಲ್‌ಬೇಸ್: 2360 ಎಂಎಂ

ಗ್ರೌಂಡ್ ಕ್ಲೀಯರನ್ಸ್: 160ಎಂಎಂ

ಫ್ಯೂಯಲ್ ಟ್ಯಾಂಕ್ ಕ್ಯಾಪಸಿಟಿ: 35 ಲೀಟರ್ಸ್

ಕರ್ಬ್ ವೇಟ್: 750 ಕೆ.ಜಿ

ಫ್ಯೂಯಲ್ ಟೈಪ್: ಪೆಟ್ರೋಲ್ ಆಂಡ್ ಸಿಎನ್‌ಜಿ

ಇಂಧನ ಕ್ಷಮತೆ: ಪೆಟ್ರೋಲ್- 22.74, ಸಿಎನ್‌ಜಿ 30.46

ಮೈಲೇಜ್: ಪೆಟ್ರೋಲ್- 22.7, ಸಿಎನ್‌ಜಿ 30.26 ಕೀ.ಮೀ/ಗಂಟೆ

ಟಯರ್: 145/80ಆರ್‌12 ಟ್ಯೂಬ್‌ಲೆಸ್

ಮಾರುತಿ ಸುಜುಕಿ ಆಲ್ಟೊ 800 ಇಂಟಿರಿಯರ್ ಫೀಚರ್ಸ್

ಮಾರುತಿ ಸುಜುಕಿ ಆಲ್ಟೊ 800 ಇಂಟಿರಿಯರ್ ಫೀಚರ್ಸ್

ಬ್ರಾಂಡ್ ನ್ಯೂ ಡ್ಯಾಶ್‌ಬೋರ್ಡ್

ವಿಶಾಲ ಹೆಡ್‌ರೂಂ

ವಿಶಾಲ ಲೆಗ್‌ರೂಂ

ಬಿಗ್ಗರ್ ಬೂಟ್

ಫ್ರಂಟ್ ಸೀಟ್ಸ್ ಜತೆ ಇಂಟೆಗ್ರೇಟಡ್ ಹೆಡ್‌ರೆಸ್ಟ್

ನ್ಯೂ ಸ್ಟೋರೆಜ್ ಸ್ಪೇಸ್

ಹೊಸ ಸ್ಟೀರಿಂಗ್ ವೀಲ್

ಫ್ರಂಟ್ ಪವರ್ ವಿಂಡೋಸ್ ಸ್ಟಾಂಡರ್ಡ್

ಐಚ್ಛಿಕ ಡ್ರೈವರ್ ಸೈಡ್ ಏರ್‌ಬಾಗ್

More from DriveSpark

Article Published On: Tuesday, October 16, 2012, 17:32 [IST]
English summary
Maruti Suzuki has finally launched the much awaited 2012 new Alto 800 hatchback. Maruti has completely re-modelled its best selling hatchback, the alto 800. Currently Maruti sells the Alto in two avatars. One being the 800 Alto and the other the Alto 1000. This new re-modelled Alto 800 will replace the old model Alto 800.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+